Home ಸುದ್ದಿ ನಡುರಸ್ತೆಯಲ್ಲೇ ಭೀಕರ ಹತ್ಯೆ: ಉದ್ರಿ ಕೊಡದ್ದಕ್ಕೆ ಹೋಟೆಲ್ ಮಾಲೀಕ ಬಾಪುರ ನರಸಿಂಹ ಚಾಕುವಿನಿಂದ ಇರಿದು ಕೊಲೆ; ಆರ್ಯವೈಶ್ಯ ಸಮಾಜದಿಂದ 24 ಗಂಟೆಗಳ ಗಡುವು.
ಸುದ್ದಿ

ನಡುರಸ್ತೆಯಲ್ಲೇ ಭೀಕರ ಹತ್ಯೆ: ಉದ್ರಿ ಕೊಡದ್ದಕ್ಕೆ ಹೋಟೆಲ್ ಮಾಲೀಕ ಬಾಪುರ ನರಸಿಂಹ ಚಾಕುವಿನಿಂದ ಇರಿದು ಕೊಲೆ; ಆರ್ಯವೈಶ್ಯ ಸಮಾಜದಿಂದ 24 ಗಂಟೆಗಳ ಗಡುವು.

Share
Share

 

ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.

ರಾಯಚೂರು: ನಗರದ ಎಲ್.ಬಿ.ಎಸ್. ನಗರ ಬಡಾವಣೆಯಲ್ಲಿ ಹಾಡಹಗಲೇ ದುಷ್ಕರ್ಮಿಯೊಬ್ಬ ಹೋಟೆಲ್ ಹಾಗೂ ಕಿರಾಣಿ ಅಂಗಡಿ ಮಾಲೀಕನನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಂದಿರುವ ಆಘಾತಕಾರಿ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಕೊಲೆಯಾದ ವ್ಯಕ್ತಿಯನ್ನು ಬಾಪುರ ನರಸಿಂಹ (40) ಎಂದು ಗುರುತಿಸಲಾಗಿದೆ. ಜನನಿಬಿಡ ಪ್ರದೇಶದಲ್ಲೇ ನಡೆದ ಈ ಭೀಕರ ಕೃತ್ಯದಿಂದ ಇಡೀ ಬಡಾವಣೆಯ ನಿವಾಸಿಗಳು ಹಾಗೂ ವ್ಯಾಪಾರಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಎಲ್.ಬಿ.ಎಸ್. ನಗರದ ಕ್ರೌನ್ ಬೇಕರಿ ಸಮೀಪ ಬಾಪುರ ನರಸಿಂಹ ಅವರು ಕಳೆದ ಹಲವು ವರ್ಷಗಳಿಂದ ಟೀ ಅಂಗಡಿ ಮತ್ತು ಸಣ್ಣ ಹೋಟೆಲ್/ಕಿರಾಣಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಶನಿವಾರ ಮಧ್ಯಾಹ್ನದ ವೇಳೆ ಅಂಗಡಿಗೆ ಬಂದ ಅಪರಿಚಿತ ಯುವಕನೊಬ್ಬ ತಿಂಡಿ ಹಾಗೂ ಸಿಗರೇಟ್‌ ಅನ್ನು ಉದ್ರಿ (ಸಾಲ) ನೀಡುವಂತೆ ಕೇಳಿದ್ದಾನೆ. ಹಳೆಯ ಬಾಕಿ ಅಥವಾ ಉದ್ರಿ ನೀಡಲು ಮಾಲೀಕ ನರಸಿಂಹ ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಮಾತಿಗೆ ಮಾತು ಬೆಳೆದ ಸಂದರ್ಭದಲ್ಲಿ ರೊಚ್ಚಿಗೆದ್ದ ಯುವಕ, ತನ್ನ ಬಳಿಯಿದ್ದ ಹರಿತವಾದ ಚಾಕುವಿನಿಂದ ನರಸಿಂಹ ಅವರ ಕುತ್ತಿಗೆಯ ಭಾಗಕ್ಕೆ ಏಕಾಏಕಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳಿದ ನರಸಿಂಹ ಅವರು ಸ್ಥಳದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತ ಗಾಂಜಾ ಮತ್ತಿನಲ್ಲಿದ್ದ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಾಂತವೀರ, ಮಾರ್ಕೆಟ್ ಯಾರ್ಡ್ ಸಿಪಿಐ ಉಮೇಶ್ ಕಾಂಬ್ಳೆ ಹಾಗೂ ಪಿಎಸ್ಐ ಐಸಾಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂತಕನ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

ಈ ಅಮಾನವೀಯ ಘಟನೆಯನ್ನು ಆರ್ಯವೈಶ್ಯ ಸಮಾಜವು ತೀವ್ರವಾಗಿ ಖಂಡಿಸಿದೆ. ಅಮಾಯಕ ವ್ಯಾಪಾರಿಯ ಹತ್ಯೆ ನಡೆಸಿರುವ ಹಂತಕರನ್ನು ಪೊಲೀಸರು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿರುವ ಸಮಾಜದ ಮುಖಂಡರು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಗೆ 24 ಗಂಟೆಗಳ ಗಡುವು ನೀಡಿದ್ದಾರೆ. ಗಡುವು ಮೀರಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...