Home ಸುದ್ದಿ ಸರ್ಕಾರಿ ಶಾಲೆ-ಹಾಸ್ಟೆಲ್ ಉಳಿವು, 371(ಜೆ) ಜಾರಿಗೆ ಎಸ್ಎಫ್‌ಐ ಸಂಕಲ್ಪ: ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ ಈಚನಾಳ್, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಸುಗೂರ್ ಆಯ್ಕೆ.
ಸುದ್ದಿ

ಸರ್ಕಾರಿ ಶಾಲೆ-ಹಾಸ್ಟೆಲ್ ಉಳಿವು, 371(ಜೆ) ಜಾರಿಗೆ ಎಸ್ಎಫ್‌ಐ ಸಂಕಲ್ಪ: ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ ಈಚನಾಳ್, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಸುಗೂರ್ ಆಯ್ಕೆ.

Share
Share

 

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಸರ್ಕಾರಿ ಕನ್ನಡ ಶಾಲೆಗಳ ರಕ್ಷಣೆ, ಸರ್ಕಾರಿ ವಸತಿ ನಿಲಯಗಳ ಸಮಗ್ರ ಬಲವರ್ಧನೆ, ಸಂವಿಧಾನದ 371(ಜೆ) ವಿಶೇಷ ಮೀಸಲಾತಿ ಸೌಲಭ್ಯಗಳ ಸಮರ್ಪಕ ಜಾರಿ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಬಲಿಷ್ಠ ಹೋರಾಟ ರೂಪಿಸಲಾಗುವುದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್‌ಐ) ಮುಖಂಡರು ಘೋಷಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಎಸ್ಎಫ್‌ಐ ಕೊಪ್ಪಳ ಜಿಲ್ಲಾ ಘಟಕದ 6ನೇ ಜಿಲ್ಲಾ ಸಮ್ಮೇಳನದಲ್ಲಿ ಈ ಸಂಕಲ್ಪ ತೊಡಲಾಯಿತು. ಸಮ್ಮೇಳನದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಮೂಲಸೌಕರ್ಯ ಕೊರತೆ, ಹಾಸ್ಟೆಲ್ ಸಮಸ್ಯೆಗಳು, ವಿದ್ಯಾರ್ಥಿವೇತನ ವಿಳಂಬ ಮತ್ತು ದುಬಾರಿ ಶುಲ್ಕ ಸೇರಿದಂತೆ ಪ್ರಮುಖ ಶೈಕ್ಷಣಿಕ ಬಿಕ್ಕಟ್ಟುಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, “ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಹಾಗೂ ಸಮಾನ ಶಿಕ್ಷಣ ದೊರಕಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹಂತಹಂತವಾಗಿ ಶಿಥಿಲಗೊಳಿಸುತ್ತಿರುವುದನ್ನು ತಡೆದು ಅವುಗಳನ್ನು ಬಲಪಡಿಸುವುದು ಇಂದಿನ ತುರ್ತು ಅಗತ್ಯ. ‘ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ’ ಎಂಬ ಮೂಲ ಆಶಯದೊಂದಿಗೆ ಎಸ್ಎಫ್‌ಐ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಬೀದಿಗಿಳಿದು ಹೋರಾಡಲಿದೆ” ಎಂದು ಎಚ್ಚರಿಸಿದರು.

ಸಮ್ಮೇಳನದ ಮುಕ್ತಾಯದ ನಂತರ 25 ಜನ ಸದಸ್ಯರನ್ನೊಳಗೊಂಡ ಕೊಪ್ಪಳ ಜಿಲ್ಲಾ ನೂತನ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು.

ಜಿಲ್ಲಾಧ್ಯಕ್ಷರು: ಶಿವಕುಮಾರ್ ಈಚನಾಳ್ಜಿಲ್ಲಾ ಪ್ರಧಾನ ಕಾರ್ಯದರ್ಶಿ: ನಾಗರಾಜ್ ಯು.ಎಂ. ಸುಗೂರ್ಪ್ಉಪಾಧ್ಯಕ್ಷರು: ದೀಪಾ, ಬಾಲಾಜಿ ಚಳ್ಳಾರಿ, ಶರೀಫ್ ಎಂ.ಪಿ., ಹನುಮೇಶ್ ಮ್ಯಾಗಡಿಸಹ ಕಾರ್ಯದರ್ಶಿಗಳು: ಮೌನೇಶ್ ದಾಸರ್, ರಂಜಿತಾ, ದರ್ಶನ್ ಹೊಸಕೆರೆ, ಯಲ್ಲಪ್ಪ ಸುಳೆಕಲ್, ಹನುಮೇಶ್ಸಮಿತಿ ಸದಸ್ಯರು: ಲಕ್ಷ್ಮಿ, ಶ್ರೀದೇವಿ, ಶರಣಬಸವ, ದುರ್ಗೇಶ್, ಮಾರುತಿ, ಯಮನೂರು, ಪರಶುರಾಮ್ ಮತ್ತಿತರರು ಆಯ್ಕೆಯಾದರು.

Share
Related Articles
ಅಂಕಣಸುದ್ದಿ

ಜನರ ಜೀವ ಉಳಿಸಲು ಜಾಗತಿಕ ಔಷಧಿ ದೈತ್ಯರ ಎದರು ಸೆಟೆದು ನಿಂತ ಧೀರ ಅಧಿಕಾರಿ ಐಎಎಸ್ ಅಧಿಕಾರಿ ಪಿ.ಎಚ್. ಕುರಿಯನ್.

ಮರ್ಚೆಡ್ ಡೇಸ್ | ವಿಶೇಷ ಲೇಖನ: ಅಧಿಕಾರವೆಂದರೆ ಜನರ ಸೇವೆ ಎಂಬುದನ್ನು ಜಗತ್ತಿಗೆ ತೋರಿಸಿದ ಅಪರೂಪದ...

ಸುದ್ದಿ

ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ದೇವಿರಮ್ಮ ಬೆಟ್ಟದ ಅದ್ಭುತ ವೈಭವ: ಜನಸಾಗರದ ನಡುವೆ ರಕ್ಷಣಾ ಪಡೆಯ ಶ್ಲಾಘನೀಯ ಸೇವ.

ಮರ್ಚೆಡ್ ಡೇಸ್ ಸುದ್ದಿ|ಚಿಕ್ಕಮಂಗಳೂರು. ಚಿಕ್ಕಮಗಳೂರು :ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವ ಸುಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಭಕ್ತಿಭಾವದ ಪರಾಕಾಷ್ಠೆ...

ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...