Home ಸುದ್ದಿ ವೈದ್ಯಕೀಯ ವಿದ್ಯಾರ್ಥಿನಿಯ ಭವಿಷ್ಯ ಕಾರು ಅಪಘಾತಕ್ಕೆ ಬಲಿ: ರಾಯಚೂರಿನ ಮಾಜಿ ಡಿಎಚ್‌ಒ ಡಾ. ಸುರೇಂದ್ರ ಬಾಬು ಪುತ್ರಿ ಡಾ.ತ್ರಿವೇಣಿ ಸಾವು.
ಸುದ್ದಿ

ವೈದ್ಯಕೀಯ ವಿದ್ಯಾರ್ಥಿನಿಯ ಭವಿಷ್ಯ ಕಾರು ಅಪಘಾತಕ್ಕೆ ಬಲಿ: ರಾಯಚೂರಿನ ಮಾಜಿ ಡಿಎಚ್‌ಒ ಡಾ. ಸುರೇಂದ್ರ ಬಾಬು ಪುತ್ರಿ ಡಾ.ತ್ರಿವೇಣಿ ಸಾವು.

Share
Share
ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.

ರಾಯಚೂರು: ಜಿಲ್ಲೆಯ ಮಾಜಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ), ಪ್ರಸ್ತುತ ಮಾನ್ವಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುರೇಂದ್ರ ಬಾಬು ಅವರ ಪುತ್ರಿ, ವೈದ್ಯಕೀಯ ವಿದ್ಯಾರ್ಥಿನಿ ಡಾ.ತ್ರಿವೇಣಿ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ಡಾ. ತ್ರಿವೇಣಿ ಅವರು, ಅಕ್ಟೋಬರ್ 2ರ ಗಾಂಧಿ ಜಯಂತಿ ರಜೆಯ ಪ್ರಯುಕ್ತ ತಮ್ಮ ಸಹಪಾಠಿ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರವಾಸ ಕೈಗೊಂಡಿದ್ದರು. ದುರದೃಷ್ಟವಶಾತ್, ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಡಾ. ತ್ರಿವೇಣಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಉಳಿದವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ವೈದ್ಯ ವೃತ್ತಿಯ ಕನಸು ಹೊತ್ತು ಸಮಾಜಮುಖಿ ಸೇವೆಗೆ ಸಜ್ಜಾಗುತ್ತಿದ್ದ ಉದಯೋನ್ಮುಖ ವೈದ್ಯೆ ಡಾ.ತ್ರಿವೇಣಿ ಅವರ ಅಕಾಲಿಕ ನಿಧನವು ಕುಟುಂಬಸ್ಥರನ್ನು ತೀವ್ರ ಆಘಾತಕ್ಕೆ ತಳ್ಳಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಪಾರ ಬಂಧು-ಬಳಗ, ವೈದ್ಯಕೀಯ ವಲಯ ಹಾಗೂ ಅವರ ಮೂಲ ನಿವಾಸವಾದ ಮರ್ಚೆಡ್ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ರಾಯಚೂರಿಗೆ ತರಲಾಗುತ್ತಿದ್ದು, ಇಂದು (ಅಕ್ಟೋಬರ್ 3) ರಾತ್ರಿ ಸುಮಾರು 9:00 ಗಂಟೆಗೆ ರಾಯಚೂರು ನಗರದ ಜಹೀರಾಬಾದ್ ಶಾಲೆಯ ಪಕ್ಕದಲ್ಲಿರುವ ಧನಲಕ್ಷ್ಮಿ ಲೇಔಟ್‌ನ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರ ಹಾಗೂ ಹಿತೈಷಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಾಳೆ (ಅಕ್ಟೋಬರ್ 4, ಭಾನುವಾರ) ರಾಯಚೂರು ತಾಲೂಕಿನ ಮರ್ಚೆಡ್ ನ ಸ್ವಂತ ಗ್ರಾಮದ ಜಮೀನಿನಲ್ಲಿ ಕುಟುಂಬದ ವಿಧಿ-ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ದುಃಖತಪ್ತ ಕುಟುಂಬಕ್ಕೆ ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರಾಮಸ್ಥಥರು, ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

Share
Related Articles
ಸುದ್ದಿ

ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಥಮ ವರ್ಷದ...

ಸುದ್ದಿ

ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ವರದಾನ: ಡಾ. ಕೊಂತಮ್ ಸತೀಶ್ ಅವರಿಂದ ‘ಡೆವಲಪ್‌ಮೆಂಟ್ ಎಕನಾಮಿಕ್ಸ್’ ಕೃತಿ ರಚನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಉಪನ್ಯಾಸಕರು, ಸಂಶೋಧಕರು ಹಾಗೂ ಲೇಖಕರಾದ ಡಾ. ಸತೀಶ್ ಅವರ ಶೈಕ್ಷಣಿಕ ಕೊಡುಗೆಗೆ...

ಸುದ್ದಿ

*ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಇನ್‌ವರ್ಡ್ ವ್ಯವಸ್ಥೆ ಇಲ್ಲ: ಉನ್ನತ ಮಟ್ಟದ ತನಿಖೆಗೆ ಒತ್ತಾಯ – ಜೋಗಿನ್ ರಮೇಶ್ ನಾಯಕ್*

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಸಮರ್ಪಕ...