Home ಸುದ್ದಿ ಪ್ರಾಂಶುಪಾಲ ಡಾ. ಕೃಷ್ಣಕುಮಾರ ಮ್ಯಾಳ ಅವರಿಗೆ ಪ್ರತಿಷ್ಠಿತ ‘ತಾಲೂಕ ಉತ್ತಮ ಶಿಕ್ಷಕ ಪ್ರಶಸ್ತಿ’ ಗೌರವ ಸಮರ್ಪಣೆ!
ಸುದ್ದಿ

ಪ್ರಾಂಶುಪಾಲ ಡಾ. ಕೃಷ್ಣಕುಮಾರ ಮ್ಯಾಳ ಅವರಿಗೆ ಪ್ರತಿಷ್ಠಿತ ‘ತಾಲೂಕ ಉತ್ತಮ ಶಿಕ್ಷಕ ಪ್ರಶಸ್ತಿ’ ಗೌರವ ಸಮರ್ಪಣೆ!

Share
Share

ಮರ್ಚೆಡ್ ಡೇಸ್ ಸುದ್ದಿ|ಮಸ್ಕಿ.

ಮಸ್ಕಿ: ಶಿಕ್ಷಣ ಕ್ಷೇತ್ರಕ್ಕೆ ನೀಡಿದ ನಿಸ್ವಾರ್ಥ ಸೇವೆ ಹಾಗೂ ಶೈಕ್ಷಣಿಕ ಕಾಳಜಿಯನ್ನು ಗುರುತಿಸಿ, ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (ರಿ.) ಮಸ್ಕಿ ತಾಲೂಕು ಘಟಕದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ತಾಲೂಕ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಮಸ್ಕಿಯ ಪ್ರಭವಿತುಂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೃಷ್ಣಕುಮಾರ ಮ್ಯಾಳ ಅವರು ಭಾಜನರಾಗಿದ್ದಾರೆ.

ಪಟ್ಟಣದ ಐತಿಹಾಸಿಕ  ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಜರುಗಿದ ಭವ್ಯ ‘ತಾಲೂಕ ಮಟ್ಟದ ಶೈಕ್ಷಣಿಕ ಸಮಾವೇಶ 2026’ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಡಾ. ಕೃಷ್ಣಕುಮಾರ ಮ್ಯಾಳ ಅವರಿಗೆ ಪ್ರಶಸ್ತಿ ನೀಡಿ, ಅವರ ಶೈಕ್ಷಣಿಕ ಕಾರ್ಯಕ್ಷಮತೆ ಹಾಗೂ ಸಮಾಜಮುಖಿ ಶಿಕ್ಷಣ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಡಾ. ಕೃಷ್ಣಕುಮಾರ ಮ್ಯಾಳ ಅವರು ಪ್ರಭವಿತುಂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಗುಣಮಟ್ಟದ ಶಿಕ್ಷಣ ನೀಡುವಿಕೆ ಹಾಗೂ ಸದಾ ಅಪಾರ ಶೈಕ್ಷಣಿಕ ಕಾಳಜಿಯೊಂದಿಗೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿರುವ ಇವರ ಕರ್ತವ್ಯನಿಷ್ಠೆಗೆ ಈ ಪ್ರಶಸ್ತಿ ಸೂಕ್ತ ಗೌರವವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

ಈ ಸಮಾವೇಶದಲ್ಲಿ  ರಾಯಚೂರು ಜಿಲ್ಲಾ ಒಕ್ಕೂಟದ ಮಸ್ಕಿ ತಾಲೂಕು ಘಟಕದ ಅಧ್ಯಕ್ಷರಾದ ಶಿವಕುಮಾರ ಎಸ್., ಜಿಲ್ಲಾ ಕಾರ್ಯದರ್ಶಿಗಳಾದ ಮಸ್ಕಿ ನಾಗರಾಜ ವಕೀಲರು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ಕೃಷ್ಣಕುಮಾರ ಮ್ಯಾಳ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸ್ನೇಹಿತರು, ವಿದ್ಯಾರ್ಥಿ ಮಿತ್ರರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿವೆ.

Share
Related Articles
ಸುದ್ದಿ

13 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ: ನಾಳೆ (ನ.19) ವಿಶ್ವದಾದ್ಯಂತ ‘GTA 6’ ಗ್ರ್ಯಾಂಡ್ ಎಂಟ್ರಿ!

  ಮರ್ಚೆಡ್ ಡೇಸ್ ಸುದ್ದಿ:ಬೆಂಗಳೂರು / ನವದೆಹಲಿ. ಮಧ್ಯರಾತ್ರಿ 12 ಗಂಟೆಯಿಂದಲೇ ಭಾರತದಲ್ಲಿ ಲಭ್ಯ; ₹12,600...

ಸುದ್ದಿ

ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ ಪ್ರ. ದರ್ಜೆ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನದ ಗೆಲುವು.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.  ಗವಿಸಿದ್ದೇಶ್ವರ ಕಾಲೇಜಿಗೆ ದ್ವಿತೀಯ ಸ್ಥಾನ.ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿಗೆ ಶ್ರೀರಾಮನಗರದ ಜನತೆಯ...

ಸುದ್ದಿ

ಹಿಮಾಲಯದ ತಪ್ಪಲಿನಿಂದ ತುಂಗಭದ್ರಾ ತೀರಕ್ಕೆ ಮಾದಕ ನಶೆ! ಸಾಣಾಪುರದಲ್ಲಿ 16 ಲಕ್ಷದ ಚರಸ್ ವಶ, ಮೂವರು ಅಂದರ್.

        ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ...

ಸಂಪಾದಕೀಯಸುದ್ದಿ

ಮಕ್ಕಳ ಹಿತದ ಜೊತೆಗೆ ಬಿಸಿಯೂಟ ನೌಕರರ ಬದುಕೂ ಉಳಿಯಲಿ: ಏಕಾಏಕಿ ಕ್ಲಸ್ಟರ್ ಕಿಚನ್ ಬೇಡ, ಮೊದಲು ಪರೀಕ್ಷೆಯಾಗಲಿ…

ಮರ್ಚೆಡ್ ಡೇಸ್ | ಸಂಪಾದಕೀಯ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆ. ಸರ್ಕಾರಿ...