Home ಸುದ್ದಿ ರೈತರ ಪಾಲಿಗೆ ವರದಾನವಾದ ಸೈದಾಪುರ ಜಾನುವಾರು ಸಂತೆ: ಮೊದಲ ದಿನವೇ ಭರ್ಜರಿ ಸ್ಪಂದನೆ, ಉಮೇಶ್ ಕೆ ಮುದ್ನಾಳ್ ಗೆ ಅದ್ಧೂರಿ ಸನ್ಮಾನ!
ಸುದ್ದಿ

ರೈತರ ಪಾಲಿಗೆ ವರದಾನವಾದ ಸೈದಾಪುರ ಜಾನುವಾರು ಸಂತೆ: ಮೊದಲ ದಿನವೇ ಭರ್ಜರಿ ಸ್ಪಂದನೆ, ಉಮೇಶ್ ಕೆ ಮುದ್ನಾಳ್ ಗೆ ಅದ್ಧೂರಿ ಸನ್ಮಾನ!

Share
Share

 

ಮರ್ಚೆಡ್ ಡೇಸ್ ಸುದ್ದಿ|ಸೈದಾಪುರ.

ಸೈದಾಪುರ: ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಆವರಣದಲ್ಲಿ ನೂತನವಾಗಿ ಆರಂಭಗೊಂಡ ಜಾನುವಾರು ಸಂತೆಗೆ ಮೊದಲ ದಿನವೇ ರೈತರಿಂದ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಭರ್ಜರಿ ಚಾಲನೆ ಸಿಕ್ಕಿದೆ.

ಸುತ್ತಮುತ್ತಲಿನ ವಿವಿಧ ಹಳ್ಳಿಗಳಿಂದ ಕುರಿ, ಆಡು, ದನ, ಎತ್ತು, ಎಮ್ಮೆ ಹಾಗೂ ನಾಟಿ ಕೋಳಿಗಳ ಮಾರಾಟ ಮತ್ತು ಖರೀದಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸಿದ್ದ ರೈತರನ್ನು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರನ್ನು ರೈತರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು, “ರೈತರು ತಮ್ಮ ಜಾನುವಾರುಗಳ ಮಾರಾಟಕ್ಕಾಗಿ ದೂರದ ಊರುಗಳ ಸಂತೆಗಳಿಗೆ ತೆರಳಿ ಸಮಯ ಮತ್ತು ಹೆಚ್ಚಿನ ಸಾರಿಗೆ ವೆಚ್ಚ ವ್ಯಯಿಸುತ್ತಿದ್ದರು. ಆ ಹೊರೆಯನ್ನು ತಪ್ಪಿಸಲು ಸೈದಾಪುರದಲ್ಲೇ ಪ್ರತಿ ಗುರುವಾರ ಜಾನುವಾರು ಸಂತೆ ಆಯೋಜಿಸುತ್ತಿರುವುದು ಸ್ಥಳೀಯ ರೈತರಿಗೆ ವರದಾನವಾಗಲಿದೆ” ಎಂದು ತಿಳಿಸಿದರು.

ಅಲ್ಲದೆ, ಈ ಸಂತೆ ಆವರಣದಲ್ಲಿ ರೈತರಿಗೆ ಮತ್ತು ಜಾನುವಾರುಗಳಿಗೆ ಅಗತ್ಯವಿರುವ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು, ಸೈದಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರೈತರು ಪ್ರತಿ ಗುರುವಾರ ನಡೆಯುವ ಈ ಸಂತೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

Share
Related Articles
ಸುದ್ದಿ

ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಥಮ ವರ್ಷದ...

ಸುದ್ದಿ

ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ವರದಾನ: ಡಾ. ಕೊಂತಮ್ ಸತೀಶ್ ಅವರಿಂದ ‘ಡೆವಲಪ್‌ಮೆಂಟ್ ಎಕನಾಮಿಕ್ಸ್’ ಕೃತಿ ರಚನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಉಪನ್ಯಾಸಕರು, ಸಂಶೋಧಕರು ಹಾಗೂ ಲೇಖಕರಾದ ಡಾ. ಸತೀಶ್ ಅವರ ಶೈಕ್ಷಣಿಕ ಕೊಡುಗೆಗೆ...

ಸುದ್ದಿ

*ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಇನ್‌ವರ್ಡ್ ವ್ಯವಸ್ಥೆ ಇಲ್ಲ: ಉನ್ನತ ಮಟ್ಟದ ತನಿಖೆಗೆ ಒತ್ತಾಯ – ಜೋಗಿನ್ ರಮೇಶ್ ನಾಯಕ್*

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಸಮರ್ಪಕ...