Home ಸುದ್ದಿ ಅಕ್ಟೋಬರ್ 2ರಿಂದ 4ರವರೆಗೆ ಕರ್ನೂಲ್ ಸಾಹೇಬ್ ಉರುಸ್-ಎ-ಶರೀಫ್ ಮಹೋತ್ಸವ.
ಸುದ್ದಿ

ಅಕ್ಟೋಬರ್ 2ರಿಂದ 4ರವರೆಗೆ ಕರ್ನೂಲ್ ಸಾಹೇಬ್ ಉರುಸ್-ಎ-ಶರೀಫ್ ಮಹೋತ್ಸವ.

Share
Share
ಸಿದ್ಧತೆ ಚುರುಕು: 41ನೇ ವಾರ್ಷಿಕ ಮಹೋತ್ಸವದ ಭಿತ್ತಿಪತ್ರ(ಪೋಸ್ಟರ್) ಅನಾವರಣ.
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ನಗರದ ಬೇರೊನಿ ಆಬಾದಿ ಮಸೀದಿ ಆವರಣದಲ್ಲಿರುವ ಐತಿಹಾಸಿಕ ಕರ್ನೂಲ್ ಸಾಹೇಬ್ ದರ್ಗಾ ಶರೀಫ್‌ನಲ್ಲಿ ಹಜರತ್ ಕರ್ನೂಲ್ ಸಾಹೇಬ್ ಅವರ 41ನೇ ವಾರ್ಷಿಕ ಉರುಸ್-ಎ-ಶರೀಫ್ ಮಹೋತ್ಸವವು ಅಕ್ಟೋಬರ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ಸಡಗರ-ಸಂಭ್ರಮದಿಂದ ಜರುಗಲಿದೆ.

ಉರುಸ್ ಅಂಗವಾಗಿ ಸೋಮವಾರ ಮಸೀದಿ ಆವರಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಅಧಿಕೃತ ಭಿತ್ತಿಪತ್ರವನ್ನು (ಪೋಸ್ಟರ್) ಬಿಡುಗಡೆಗೊಳಿಸಲಾಯಿತು. ಬೇರೊನಿ ಆಬಾದಿ ಮಸೀದಿ ಅಧ್ಯಕ್ಷ ಶಾಮಿದ್ ಮನಿಯರ್, ದರ್ಗಾ ಕಮಿಟಿ ಅಧ್ಯಕ್ಷ ತುಂಗಭದ್ರಾ ಹುಸೇನ್ ಸಾಬ್ ಹಾಗೂ ಕಾರ್ಯದರ್ಶಿ ಅನ್ವರ್ ಮನಿಯರ್ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಪೋಸ್ಟರ್ ಅನಾವರಣಗೊಳಿಸಿ ಸಿದ್ಧತೆಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ತುಂಗಭದ್ರಾ ಹುಸೇನ್ ಸಾಬ್ ಹಾಗೂ ಕಾರ್ಯದರ್ಶಿ ಅನ್ವರ್ ಮನಿಯರ್, “ಅಕ್ಟೋಬರ್ 2ರಿಂದ ಆರಂಭಗೊಳ್ಳುವ ಮೂರು ದಿನಗಳ ಈ ಮಹೋತ್ಸವದಲ್ಲಿ ಸಂದಲ್ ಶರೀಫ್, ವಿಶೇಷ ಪ್ರಾರ್ಥನೆ, ಖವ್ವಾಲಿ ಸೇರಿದಂತೆ ಹಲವು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ. ನಾಡಿನ ನಾನಾ ಭಾಗಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸರ್ವಧರ್ಮೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವರ್ಯರ ಕೃಪೆಗೆ ಪಾತ್ರರಾಗಬೇಕು” ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಾವಲಿ ಪೈಲ್ವಾನ್, ಹಟೇಲಿ ಭಾಷಾ, ಕೆ. ಸಾಧಿಕ್, ಸಾಹಿಲ್, ಆಯೂಬ್ ಖಾನ್, ದಾವೂದ್ ಭಾಷಾ, ಮೆಹಬೂಬ್ ಸೇರಿದಂತೆ ದರ್ಗಾ ಸಮಿತಿಯ ಸರ್ವ ಸದಸ್ಯರು, ಸಮಾಜದ ಹಿರಿಯರು ಉಪಸ್ಥಿತರಿದ್ದರು.

Share
Related Articles
ಸುದ್ದಿ

13 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ: ನಾಳೆ (ನ.19) ವಿಶ್ವದಾದ್ಯಂತ ‘GTA 6’ ಗ್ರ್ಯಾಂಡ್ ಎಂಟ್ರಿ!

  ಮರ್ಚೆಡ್ ಡೇಸ್ ಸುದ್ದಿ:ಬೆಂಗಳೂರು / ನವದೆಹಲಿ. ಮಧ್ಯರಾತ್ರಿ 12 ಗಂಟೆಯಿಂದಲೇ ಭಾರತದಲ್ಲಿ ಲಭ್ಯ; ₹12,600...

ಸುದ್ದಿ

ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ ಪ್ರ. ದರ್ಜೆ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನದ ಗೆಲುವು.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.  ಗವಿಸಿದ್ದೇಶ್ವರ ಕಾಲೇಜಿಗೆ ದ್ವಿತೀಯ ಸ್ಥಾನ.ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿಗೆ ಶ್ರೀರಾಮನಗರದ ಜನತೆಯ...

ಸುದ್ದಿ

ಹಿಮಾಲಯದ ತಪ್ಪಲಿನಿಂದ ತುಂಗಭದ್ರಾ ತೀರಕ್ಕೆ ಮಾದಕ ನಶೆ! ಸಾಣಾಪುರದಲ್ಲಿ 16 ಲಕ್ಷದ ಚರಸ್ ವಶ, ಮೂವರು ಅಂದರ್.

        ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ...

ಸಂಪಾದಕೀಯಸುದ್ದಿ

ಮಕ್ಕಳ ಹಿತದ ಜೊತೆಗೆ ಬಿಸಿಯೂಟ ನೌಕರರ ಬದುಕೂ ಉಳಿಯಲಿ: ಏಕಾಏಕಿ ಕ್ಲಸ್ಟರ್ ಕಿಚನ್ ಬೇಡ, ಮೊದಲು ಪರೀಕ್ಷೆಯಾಗಲಿ…

ಮರ್ಚೆಡ್ ಡೇಸ್ | ಸಂಪಾದಕೀಯ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆ. ಸರ್ಕಾರಿ...