Home ಸುದ್ದಿ ಗದ್ದೆಗಿಳಿದ ‘ಆಪ್ತಮಿತ್ರರು’: ಜನಾರ್ದನ ರೆಡ್ಡಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಗದ್ದೆ ಉಳುಮೆ ಮಾಡಿದ ಬಿ. ಶ್ರೀರಾಮುಲು.
ಸುದ್ದಿ

ಗದ್ದೆಗಿಳಿದ ‘ಆಪ್ತಮಿತ್ರರು’: ಜನಾರ್ದನ ರೆಡ್ಡಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಗದ್ದೆ ಉಳುಮೆ ಮಾಡಿದ ಬಿ. ಶ್ರೀರಾಮುಲು.

Share
Share

 

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಬಿಜೆಪಿ ಪಾದಯಾತ್ರೆಯ ರಾಜಕೀಯ ಕಾವು ಮತ್ತು ಕಾರ್ಯಕರ್ತರ ಜಯಘೋಷಗಳ ನಡುವೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿನೋಬನಗರದಲ್ಲಿ ಭಾನುವಾರ ಒಂದು ಅಪರೂಪದ ಹಾಗೂ ಆಕರ್ಷಕ ದೃಶ್ಯ ಅನಾವರಣಗೊಂಡಿತು. ಅನ್ನದಾತನ ಸಂಕಷ್ಟಕ್ಕೆ ಸಾಥ್ ನೀಡಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಹಾಗೂ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ಜೋಡಿ ನೇರವಾಗಿ ಗದ್ದೆಗಿಳಿದು ಎಲ್ಲರ ಗಮನ ಸೆಳೆದಿದೆ.

ಪಾದಯಾತ್ರೆಯ ಹಾದಿಯಲ್ಲಿ ಭತ್ತದ ನಾಟಿಗಾಗಿ ಭೂಮಿ ಹದ ಮಾಡುತ್ತಿದ್ದ ರೈತನನ್ನು ಕಂಡ ಶ್ರೀರಾಮುಲು, ತಕ್ಷಣವೇ ಹೆಜ್ಜೆ ನಿಲ್ಲಿಸಿ ಹೊಲಕ್ಕಿಳಿದರು. ರೈತನ ಕೈಯಿಂದ ಟ್ರ್ಯಾಕ್ಟರ್ ಸ್ಟೀರಿಂಗ್ ಕೈಗೆತ್ತಿಕೊಂಡ ಶ್ರೀರಾಮುಲು, ಪಕ್ಕದ ಸೀಟಿನಲ್ಲಿ ತಮ್ಮ ಆಪ್ತಮಿತ್ರ ಜನಾರ್ದನ ರೆಡ್ಡಿ ಅವರನ್ನು ಕೂರಿಸಿಕೊಂಡು ಗದ್ದೆಯಲ್ಲಿ ಸ್ವತಃ ಟ್ರ್ಯಾಕ್ಟರ್ ಚಲಾಯಿಸಿ ಭೂಮಿಯನ್ನು ಸಿದ್ಧಪಡಿಸಿಕೊಟ್ಟರು.

ಅನುಭವಿ ಚಾಲಕನಂತೆ ಕೆಸರು ಗದ್ದೆಯಲ್ಲಿ ಶ್ರೀರಾಮುಲು ಲೀಲಾಜಾಲವಾಗಿ ಟ್ರ್ಯಾಕ್ಟರ್ ಓಡಿಸುತ್ತಿದ್ದರೆ, ಇತ್ತ ರೆಡ್ಡಿ ಗೆಳೆಯನಿಗೆ ಸಾಥ್ ನೀಡುತ್ತಾ ಕೈಬೀಸಿದರು. ಬಳ್ಳಾರಿಯ  ಜೋಡಿಯ ಈ ‘ಕೃಷಿ ಕಾಯಕ’ವನ್ನು ಕಂಡ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ರೈತರು ಸಿಳ್ಳೆ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಬರೀ ಭಾಷಣ, ಪ್ರತಿಭಟನೆಗಳಿಗಷ್ಟೇ ಸೀಮಿತವಾಗದೆ, ಸ್ವತಃ ಮಣ್ಣಿಗಿಳಿದು ರೈತನಿಗೆ ನೆರವಾದ ನಾಯಕರ ಈ ದೇಸಿ ಶೈಲಿಯ ನಡೆ ಸ್ಥಳೀಯರಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ರಾಜಕೀಯ ಪಾದಯಾತ್ರೆಯ ನಡುವೆಯೂ ಅನ್ನದಾತನಿಗೆ ಸ್ಪಂದಿಸಿದ ಈ ವಿಶಿಷ್ಟ ಕ್ಷಣ ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಹಾಗೂ ಪ್ರಶಂಸೆಗೆ ಕಾರಣವಾಗಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...