Home ಸುದ್ದಿ ಕಬಡ್ಡಿ ಅಖಾಡದಲ್ಲಿ ಮಿಂಚಿದ ಬೆತೆಲ್ ಪಿಯು ಬಾಲಕಿಯರು: ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನದ ಗರಿ.
ಸುದ್ದಿ

ಕಬಡ್ಡಿ ಅಖಾಡದಲ್ಲಿ ಮಿಂಚಿದ ಬೆತೆಲ್ ಪಿಯು ಬಾಲಕಿಯರು: ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನದ ಗರಿ.

Share
Share

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಪದವಿಪೂರ್ವ ಶಿಕ್ಷಣ ಇಲಾಖೆ (ಕೊಪ್ಪಳ) ಹಾಗೂ ಲಯನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು (ಗಂಗಾವತಿ) ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2026–27ನೇ ಸಾಲಿನ ಗಂಗಾವತಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಬೇತೆಲ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ಬಾಲಕಿಯರ ಕಬ್ಬಡ್ಡಿ ತಂಡವು ಅತ್ಯುತ್ತಮ ಆಟ ಪ್ರದರ್ಶಿಸಿ ದ್ವಿತೀಯ ಸ್ಥಾನ (ರನ್ನರ್-ಅಪ್) ಪಡೆದುಕೊಂಡಿದೆ.

ಅಂಕಣದಲ್ಲಿ ಚುರುಕಿನ ಆಟದ ಮೂಲಕ ಗಮನಸೆಳೆದ ಚೈತ್ರಾ, ರೆಹಮಾನ್ ಬಿ., ಸ್ವಪ್ನಾ, ಮೇಘನಾ, ಲಕ್ಷ್ಮಿ.ಪಿ., ಲಕ್ಷ್ಮಿ.ಎಸ್., ಅಕ್ಷತಾ, ಐಶ್ವರ್ಯ.ವಿ., ಐಶ್ವರ್ಯ.ಎ., ವಿರೂಪಮ್ಮ, ಕಾವ್ಯಶ್ರೀ ಹಾಗೂ ಚೈತನ್ಯ ತಂಡದ ಈ ಸಾಧನೆಗೆ ಪ್ರಮುಖ ಕಾರಣರಾದರು.

ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕಬ್ಬಡ್ಡಿ ತರಬೇತುದಾರರಾದ ಬಾಬುಸಾಬ ಅವರು ವಿದ್ಯಾರ್ಥಿನಿಯರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿ ತಂಡವನ್ನು ಸಜ್ಜುಗೊಳಿಸಿದ್ದರು.

ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರು ಹಾಗೂ ತರಬೇತುದಾರರಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ ಆಡಳಿತ ಮಂಡಳಿ: ರಾಜು ಸುಧಾಕರ್ (ಅಧ್ಯಕ್ಷರು), ಬ್ಯಾಬೇಜ್ ಮಿಲ್ಟನ್ (ಕಾರ್ಯದರ್ಶಿ), ಸುಜಾತ ರಾಜು (ಖಜಾಂಚಿ) ಬಸವರಾಜ್.ಕೆ (ಪ್ರಾಂಶುಪಾಲರು), ದೈಹಿಕ ಶಿಕ್ಷಣ ಶಿಕ್ಷಕರಾದ ಆನಂದ್ ರಾಥೋಡ್, ಯಮನೂರಪ್ಪ, ಗೀತಾ.ಕೆ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿ.

ವಿದ್ಯಾರ್ಥಿನಿಯರ ಈ ಸಾಧನೆಯು ಕಾಲೇಜಿನ ಕ್ರೀಡಾ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದ್ದು, ಮುಂದಿನ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿಯೂ ತಂಡವು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿ ಎಂದು ಮಂಡಳಿಯು ಶುಭ ಹಾರೈಸಿದ್ದಾರೆ.

.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...