Home ಸುದ್ದಿ ತಾವರಗೇರಾ: ವಿರುಪಾಪುರ ಗ್ರಾಮದ ಒಳಚರಂಡಿ ಸಮಸ್ಯೆಗೆ ಮುಕ್ತಿ; ಕಿಡಿಗೇಡಿಗಳಿಗೆ ತಾ.ಪಂ. ಇಒ ಅಮರೇಶ್ ಖಡಕ್ ಎಚ್ಚರಿಕೆ.
ಸುದ್ದಿ

ತಾವರಗೇರಾ: ವಿರುಪಾಪುರ ಗ್ರಾಮದ ಒಳಚರಂಡಿ ಸಮಸ್ಯೆಗೆ ಮುಕ್ತಿ; ಕಿಡಿಗೇಡಿಗಳಿಗೆ ತಾ.ಪಂ. ಇಒ ಅಮರೇಶ್ ಖಡಕ್ ಎಚ್ಚರಿಕೆ.

Share
Share

 

ಮರ್ಚೆಡ್ ಡೇಸ್ ಸುದ್ದಿ|ತಾವರಗೇರಾ.

ತಾವರಗೇರಾ: ಸಮೀಪದ ವಿರುಪಾಪುರ ಗ್ರಾಮದಲ್ಲಿ ಕಳೆದ ಆಗಸ್ಟ್ 2 ರಿಂದ ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ಹಾಕಿ ಒಳಚರಂಡಿ ನೀರನ್ನು ರಸ್ತೆಗೆ ಹರಿಯ ಬಿಟ್ಟು, ಸಾರ್ವಜನಿಕರಿಗೆ ಹಾಗೂ ದಲಿತ ಬಡಾವಣೆಯ ಜನರಿಗೆ ಉಂಟಾಗಿದ್ದ ಕಗ್ಗಂಟಾದ ಸಮಸ್ಯೆಯನ್ನು ಕುಷ್ಟಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಅಮರೇಶ್‌ರವರು ಸ್ಥಳಕ್ಕೆ ಭೇಟಿ ನೀಡಿ ಯಶಸ್ವಿಯಾಗಿ ಬಗೆಹರಿಸಿದ್ದಾರೆ.

ಇಂದು ಬೆಳಿಗ್ಗೆ ವಿರುಪಾಪುರ ಗ್ರಾಮಕ್ಕೆ ಭೇಟಿ ನೀಡಿದ ಇಒ ಅಮರೇಶ್, ಸಿಪಿಐ ವಿಶ್ವನಾಥ ಹಿರೇಗೌಡ್ರ, ತಾವರಗೇರಾ ಪಿಎಸ್‌ಐ ಚಂದ್ರಪ್ಪ ಹೆಚ್ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಸವರಾಜ ರಾವಣಕಿ ಅವರ ಸಮ್ಮುಖದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಚರಂಡಿಗೆ ಹಾಕಲಾಗಿದ್ದ ಮಣ್ಣನ್ನು ತೆರವುಗೊಳಿಸಿ, ನೀರು ಮೊದಲಿನಂತೆ ಸುಸೂತ್ರವಾಗಿ ಒಳಚರಂಡಿಯಲ್ಲೇ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಚರಂಡಿ ಮುಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ಲೋಕ್ರೆ ಮತ್ತು ರವಿ ಲೋಕ್ರೆ ಅವರಿಗೆ ಇಒ ಖಡಕ್ ಎಚ್ಚರಿಕೆ ನೀಡಿದರು. “ನಿಮ್ಮ ಅಧಿಕಾರದ ಅವಧಿಯಲ್ಲಿ ಸರ್ಕಾರದ ಅನುದಾನ ಬಳಸಿ ನಿರ್ಮಿಸಿದ ಚರಂಡಿಯನ್ನು ಮುಚ್ಚಲು ನಿಮಗೆ ಅಧಿಕಾರ ನೀಡಿದವರು ಯಾರು? ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಚರಂಡಿಗೆ ಬಿಡುಗಡೆಯಾದ ಅನುದಾನದ ಹಣವನ್ನು ನೀವೇ ಸರ್ಕಾರಕ್ಕೆ ಮರುಪಾವತಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಮುಂದುವರಿದು ಮಾತನಾಡಿದ ಅಧಿಕಾರಿಗಳು, “ನಿಮ್ಮ ಜಮೀನಿಗೆ ಯಾವುದೇ ತೊಂದರೆಯಾಗದಂತೆ ಆರು ತಿಂಗಳ ಒಳಗಾಗಿ ಪರ್ಯಾಯ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಚರಂಡಿ ತೆರವುಗೊಳಿಸುವ ಅಥವಾ ಮುಚ್ಚುವ ಆಲೋಚನೆ ಮಾಡಬಾರದು” ಎಂದು ತಿಳಿಸಿದರು. ಸರ್ಕಾರ ಪ್ರತಿ ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ನೀಡಿದ್ದು, ಸಾರ್ವಜನಿಕರು ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರನ್ನು ಬಳಸಿ ಅನಗತ್ಯವಾಗಿ ಪೋಲು ಮಾಡಬಾರದು. ಅನಗತ್ಯ ನೀರು ರಸ್ತೆಗೆ ಹರಿದಾಗ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ತಿಳಿಹೇಳಿದರು.

ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಬಚ್ಚಲು ಇಂಗು ಗುಂಡಿಗಳನ್ನು ಮಾಡಿಕೊಂಡರೆ ವ್ಯರ್ಥ ನೀರು ಅಲ್ಲೇ ಶೇಖರಣೆಯಾಗುತ್ತದೆ. ರಸ್ತೆ ಹಾಗೂ ದಾರಿಗಳಲ್ಲಿ ಬಟ್ಟೆ ಒಗೆದು ಗ್ರಾಮದ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಹಾಳುಮಾಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ‘ಅನಘ’ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ, ಡಿಎಸ್‌ಎಸ್ ಅಧ್ಯಕ್ಷ ಹುಲುಗಪ್ಪ ಗಾಣದಾಳ, ಪ್ರಮುಖರಾದ ಹನುಮಂತ ದೇವರಮನಿ, ದೊಡ್ಡ ಬಸವ, ರಮೇಶ, ನಾರಾಯಣ, ಯಮನೂರ ತಳವಾರ ಸೇರಿದಂತೆ ಗ್ರಾಮದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

Share
Related Articles
ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...

ಅಂಕಣಸುದ್ದಿ

ಮಿಡ್ಲ್ ಕ್ಲಾಸ್ ದೀಪಾವಳಿ: ಬೆಳಕಿನ ಹಬ್ಬದ ಹಿಂದಿರುವ ಬಜೆಟ್ ಬದುಕು.

  ಮರ್ಚೆಡ್ ಡೇಸ್ ವಿಶೇಷ ಲೇಖನ: ಕೆಲವು ವರ್ಷಗಳ ಹಿಂದಿನ ಸಂಭ್ರಮ ಈಗಿಲ್ಲ; ಆಸೆಗಳು ದೊಡ್ಡದಿವೆ,...

ಸುದ್ದಿ

ಗಂಗಾವತಿ ನಗರಸಭೆಗೆ ಹೊಸ ಪೌರಾಯುಕ್ತರಾಗಿ ಮಂಜುನಾಥ್ ಮಲ್ಲಪ್ಪ ಗುಂಡೂರ ನೇಮಕ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ನಗರಸಭೆಯಲ್ಲಿ ಖಾಲಿಯಿದ್ದ ಪೌರಾಯುಕ್ತರ...