
ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ರಾಯಚೂರು: ಕಷ್ಟ ಎಲ್ಲರಿಗೂ ಇದ್ದಾವೆ, ಕಷ್ಟದ ಜೊತೆಗೆ ವಿದ್ಯಾಭ್ಯಾಸ ಮಾಡಿ” ಎಂಬ ಸ್ಪೂರ್ತಿದಾಯಕ ಸಂದೇಶದೊಂದಿಗೆ ರಾಯಚೂರು ತಾಲೂಕಿನ ಮರ್ಚೆಡ್ ಪ್ರೌಢಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರತಿಭಾ ಸನ್ಮಾನ ಸಮಾರಂಭವು ಬಹಳ ಯಶಸ್ವಿಯಾಗಿ ಆಚರಿಸಲ್ಪಟ್ಟಿತು.
ಈ ವಿಶೇಷ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ, ‘ಶ್ರೀ ರವಿ ಪಾಟೀಲ್ ಫೌಂಡೇಶನ್’ ವತಿಯಿಂದ ತಲಾ ರೂ. 10,000/- ರಂತೆ ಒಟ್ಟು ರೂ. 20,000/- ಗಳ ನಗದು ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು.
ಮುಂದುವರಿದು ಮಾತನಾಡಿದ ಫೌಂಡೇಶನ್ ಅಧ್ಯಕ್ಷರಾದ ರವಿ ಪಾಟೀಲ್ ಅವರು, ಮರ್ಚೆಡ್ ಪ್ರೌಢಶಾಲೆಯಿಂದ ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಯಚೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ‘ಒಂದು ಲಕ್ಷ ರೂಪಾಯಿ’ ಭರ್ಜರಿ ಧನಸಹಾಯ ನೀಡುವುದಾಗಿ ಘೋಷಣೆ ಮಾಡಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದರು.
ಒಂದು ವೇಳೆ ಆ ವರ್ಷ ಪ್ರಥಮ ಸ್ಥಾನ ಬಾರದಿದ್ದರೂ ಸಹ, ಆ ರೂ. 1 ಲಕ್ಷ ಹಣವನ್ನು ಶಾಲೆಗೆ ಡಿಪಾಸಿಟ್ ಇಟ್ಟು, ಬರುವ ಬಡ್ತಿಯ ಸಂಪೂರ್ಣ ಹಣವನ್ನು ಶಾಲೆಯ ಶೈಕ್ಷಣಿಕ ಪ್ರಗತಿಗೆ ಬಳಸಿಕೊಳ್ಳುವಂತೆ ಉದಾರವಾಗಿ ತಿಳಿಸುವ ಮೂಲಕ ಸಂಸ್ಥೆಯ ಮೇಲಿನ ತಮ್ಮ ಕಾಳಜಿಯನ್ನು ಪ್ರದರ್ಶಿಸಿದರು.
“ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು” ಎಂಬ ಆದರ್ಶದಡಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಹಾಗೂ ಗ್ರಾಮದ ಗಣ್ಯ ಮುಖಂಡರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.