Home ಸುದ್ದಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶ್ರಾವಣ ಸಂಭ್ರಮ; ಅಂಜನಾದ್ರಿಯಲ್ಲಿ ತ್ರಿವರ್ಣ ಹೂವಿನ ಅಲಂಕಾರದೊಂದಿಗೆ ವಿಜೃಂಭಣೆಯ ಪೂಜೆ, 40 ಸಾವಿರಕ್ಕೂ ಅಧಿಕ ಭಕ್ತರ ಭೇಟಿ.
ಸುದ್ದಿ

ಸ್ವಾತಂತ್ರ್ಯ ದಿನಾಚರಣೆ ಹಾಗೂ ಶ್ರಾವಣ ಸಂಭ್ರಮ; ಅಂಜನಾದ್ರಿಯಲ್ಲಿ ತ್ರಿವರ್ಣ ಹೂವಿನ ಅಲಂಕಾರದೊಂದಿಗೆ ವಿಜೃಂಭಣೆಯ ಪೂಜೆ, 40 ಸಾವಿರಕ್ಕೂ ಅಧಿಕ ಭಕ್ತರ ಭೇಟಿ.

Share
Share

 

ಮರ್ಚೆಡ್ ಡೇಸ್ ಸುದ್ದಿ|ಅಂಜನಾದ್ರಿ.

ಗಂಗಾವತಿ: ಹನುಮನ ಜನ್ಮಸ್ಥಳವೆಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಇಂದು ಶ್ರಾವಣ ಮಾಸದ ವಿಶೇಷ ಪೂಜೆ ಹಾಗೂ 80ನೇ ಸ್ವಾತಂತ್ರ್ಯೋತ್ಸವದ  ಸಂಭ್ರಮ ಜೋಡಿ ಕಳೆಕಟ್ಟಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂಜನಾದ್ರಿ ಬೆಟ್ಟದ ದೇವಸ್ಥಾನದಲ್ಲಿ  ಭಾರತದ ರಾಷ್ಟ್ರಧ್ವಜದ ತ್ರಿವರ್ಣ ಬಣ್ಣದ (ಕೇಸರಿ, ಬಿಳಿ, ಹಸಿರು) ದೇವರಿಗೆೆ ಹೂವಿನ ಹಾರಗಳು ಅತ್ಯಂತ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಈ ವಿಶಿಷ್ಟ ಹೂವಿನ ಅಲಂಕಾರವು ನೋಡುಗರ ಕಣ್ಮನ ಸೆಳೆಯುವುದರೊಂದಿಗೆ ನೆರೆದಿದ್ದ ಭಕ್ತರಲ್ಲಿ ದೇಶಭಕ್ತಿ ಹಾಗೂ ಧರ್ಮಭಕ್ತಿಯನ್ನು ಇಮ್ಮಡಿಸಿತು.

ಶ್ರಾವಣ ಮಾಸದ ಶನಿವಾರ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ರಜಾ ದಿನ ಒಟ್ಟಿಗೆ ಬಂದಿದ್ದರಿಂದ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಹರಿದುಬಂದಿದ್ದರು. ಅಂಜನಾದ್ರಿ ಬೆಟ್ಟ ಮತ್ತು ವಲಯ ಪ್ರದೇಶವು ಸುಮಾರು 40,000ಕ್ಕೂ ಅಧಿಕ ಭಕ್ತಾದಿಗಳಿಂದ ತುಂಬಿ ತುಳುಕುತ್ತಿತ್ತು. ಮುಂಜಾನೆಯಿಂದಲೇ ಬೆಟ್ಟದ ತಪ್ಪಲಿನಿಂದ ಹಿಡಿದು ಮೇಲ್ಭಾಗದವರೆಗೆ ಭಕ್ತರ ದಂಡು ಕಂಡುಬಂದಿದ್ದು, ಪ್ರಮುಖ ರಸ್ತೆಗಳಲ್ಲಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಸಾಲುಗಟ್ಟ ವಾಹನಗಳು ನಿಂತಿರುವುದು ಕಂಡುಬಂದಿತು.

ಭಕ್ತರ ಭಾರೀ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿ ಹಾಗೂ ಸ್ಥಳೀಯ ಸಿಬ್ಬಂದಿ ವರ್ಗವು ಯಾವುದೇ ಅಹಿತಕರ ಘಟನೆಗಳು ಅಥವಾ ತೊಂದರೆಯಾಗದಂತೆ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಿದ್ದರು. ಆಗಮಿಸಿದ ಸರ್ವ ಭಕ್ತರಿಗೂ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಲ್ಲದೆ, ಬೆಟ್ಟದ ಮೇಲಿರುವ ಪ್ರಸಾದ ನಿಲಯದಿಂದ ಇಂದು ಮುಂಜಾನೆಯಿಂದಲೇ ನಿರಂತರವಾಗಿ ಆರಂಭವಾದ ಪ್ರಸಾದ ವಿತರಣೆಯು ಸಂಜೆಯವರೆಗೆ ಅವಿರತವಾಗಿ ಮುಂದುವರಿಯಿತು.

ಅಪಾರ ಜನಸಂದಣಿ ಇದ್ದರೂ ಸಹ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಹವಾದ ದರ್ಶನ ಮತ್ತು ವ್ಯವಸ್ಥಿತ ಪ್ರಸಾದ ವಿತರಣೆಯನ್ನು ಕೈಗೊಂಡ ಸಿಬ್ಬಂದಿ ವರ್ಗದ ಕಾರ್ಯತತ್ಪರತೆಯನ್ನು ಭಕ್ತಾದಿಗಳು ಕೊಂಡಾಡಿದರು. ಶ್ರಾವಣದ ಪವಿತ್ರತೆ ಮತ್ತು ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರೀಯ ಹಬ್ಬದ ಸಂಭ್ರಮದ ಈ ಅಪರೂಪದ ಸಂಗಮದಲ್ಲಿ ಪಾಲ್ಗೊಂಡು ಅಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದ ಭಕ್ತರು ಧನ್ಯತಾ ಭಾವ ವ್ಯಕ್ತಪಡಿಸಿದರು.

Share
Related Articles
ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...

ಅಂಕಣಸುದ್ದಿ

ಮಿಡ್ಲ್ ಕ್ಲಾಸ್ ದೀಪಾವಳಿ: ಬೆಳಕಿನ ಹಬ್ಬದ ಹಿಂದಿರುವ ಬಜೆಟ್ ಬದುಕು.

  ಮರ್ಚೆಡ್ ಡೇಸ್ ವಿಶೇಷ ಲೇಖನ: ಕೆಲವು ವರ್ಷಗಳ ಹಿಂದಿನ ಸಂಭ್ರಮ ಈಗಿಲ್ಲ; ಆಸೆಗಳು ದೊಡ್ಡದಿವೆ,...

ಸುದ್ದಿ

ಗಂಗಾವತಿ ನಗರಸಭೆಗೆ ಹೊಸ ಪೌರಾಯುಕ್ತರಾಗಿ ಮಂಜುನಾಥ್ ಮಲ್ಲಪ್ಪ ಗುಂಡೂರ ನೇಮಕ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ನಗರಸಭೆಯಲ್ಲಿ ಖಾಲಿಯಿದ್ದ ಪೌರಾಯುಕ್ತರ...