ಮರ್ಚೆಡ್ ಡೇಸ್ ಸುದ್ದಿ|ಬೆಂಗಳೂರು.
ಬೆಂಗಳೂರು :ವಿದ್ಯುತ್ ಸರಬರಾಜು ಕಂಪನಿ (Bescom) ತನ್ನ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಜುಲೈ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮನೆ ಬಾಗಿಲಿಗೆ ಫಿಸಿಕಲ್ ವಿದ್ಯುತ್ ಬಿಲ್ ವಿತರಣೆ ಮಾಡುವುದನ್ನು ನಿಲ್ಲಿಸಿದೆ. ಬದಲಾಗಿ ಗ್ರಾಹಕರಿಗೆ SMS ಹಾಗೂ ಇ-ಮೇಲ್ ಮೂಲಕವೇ ನೇರವಾಗಿ ವಿದ್ಯುತ್ ಬಿಲ್ ರವಾನಿಸಲು ಬೆಸ್ಕಾಂ ಮುಂದಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೆ ತೆರಳಿ ಗ್ರಾಹಕರ ವಿವರಗಳನ್ನು ಪರಿಶೀಲಿಸುವ ಕಾಯಕದಲ್ಲಿ ಮೀಟರ್ ರೀಡರ್ಗಳು ಸಂಪೂರ್ಣವಾಗಿ ನಿರತರಾಗಿದ್ದಾರೆ. ಮೀಟರ್ ರೀಡರ್ಗಳು ಈ ಪರಿಶೀಲನಾ ಕಾರ್ಯದಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ತೊಂದರೆಯಾಗದಂತೆ ಈ ತಾತ್ಕಾಲಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಬೆಸ್ಕಾಂ ಅಧಿಕೃತವಾಗಿ ತಿಳಿಸಿದೆ.
ಈ ಹೊಸ ತಾತ್ಕಾಲಿಕ ವ್ಯವಸ್ಥೆಯ ಮೂಲಕ ಗ್ರಾಹಕರು ಡಿಜಿಟಲ್ ರೂಪದಲ್ಲಿಯೇ ತಮ್ಮ ಬಿಲ್ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರದ ಈ ಹೆಜ್ಜೆಯಿಂದ ಬಿಲ್ ವಿತರಣೆಯಲ್ಲಿ ಉಂಟಾಗುತ್ತಿದ್ದ ವ್ಯತ್ಯಾಸಗಳನ್ನು ತಪ್ಪಿಸಬಹುದಲ್ಲದೆ, ಸಾರ್ವಜನಿಕರು ಆನ್ಲೈನ್ ಮೂಲಕವೇ ಸುಲಭವಾಗಿ ತಮ್ಮ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗಲಿದೆ.