ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ರಾಯಚೂರು: ಜುಲೈ 28 : ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಗುಂಜಳ್ಳಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು (ಯರಗೇರಾ)ದಲ್ಲಿ ಖಾಲಿ ಇರುವ ವಿವಿಧ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕಾಲೇಜಿನಲ್ಲಿ ಒಟ್ಟು 07 ಹುದ್ದೆಗಳು ಖಾಲಿ ಇದ್ದು, ವಿಷಯವಾರು ವಿದ್ಯಾರ್ಹತೆ ಈ ಕೆಳಗಿನಂತಿದೆ:
ಕನ್ನಡ ಮತ್ತು ಆಂಗ್ಲ ವಿಷಯ: ತಲಾ 01 ಹುದ್ದೆ (ಎಮ್.ಎ., ಬಿಇಡ್.)
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯ: ತಲಾ 01 ಹುದ್ದೆ (ಎಮ್.ಎಸ್ಸಿ., ಬಿಇಡ್.)
ಗಣಕಯಂತ್ರ ವಿಷಯ: 01 ಹುದ್ದೆ (ಎಮ್.ಎಸ್ಸಿ., ಬಿಇಡ್.)
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ 03ರೊಳಗಾಗಿ ಕಾಲೇಜಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಆಗಸ್ಟ್ 05ರಂದು ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರ ಮೊಬೈಲ್ ಸಂಖ್ಯೆ 9886976422 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.