Home ಸುದ್ದಿ ಬರಗಾಲ ನೀಗಲು ವರುಣದೇವನಿಗೆ ಮೊರೆ: ಶ್ರೀರಾಮನಗರ ವಿದ್ಯಾರ್ಥಿಗಳಿಂದ ‘ಹುಯ್ಯೋ ಹುಯ್ಯೋ.. ಮಳೆರಾಯ’ ಜಾನಪದ (ಸಂಪ್ರದಾಯದ ಆಚರಣೆ) ಪ್ರಾರ್ಥನೆ.
ಸುದ್ದಿ

ಬರಗಾಲ ನೀಗಲು ವರುಣದೇವನಿಗೆ ಮೊರೆ: ಶ್ರೀರಾಮನಗರ ವಿದ್ಯಾರ್ಥಿಗಳಿಂದ ‘ಹುಯ್ಯೋ ಹುಯ್ಯೋ.. ಮಳೆರಾಯ’ ಜಾನಪದ (ಸಂಪ್ರದಾಯದ ಆಚರಣೆ) ಪ್ರಾರ್ಥನೆ.

Share
Share

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಶ್ರೀರಾಮನಗರ :  ಕಲ್ಯಾಣ ಕರ್ನಾಟ ಹಾಗೂ ಉತ್ತರ ಕರ್ನಾಟಕ ಈ ಭಾಗಗಳಲ್ಲಿ ತೀವ್ರವಾದ ಮಳೆಯ ಕೊರತೆ ಹಾಗೂ ಬರಗಾಲದ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲು,  ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವರುಣದೇವನನ್ನು ಒಲಿಸಲು ವಿಶಿಷ್ಟ ಜಾನಪದ ಆಚರಣೆಯ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುತ್ತಮುತ್ತಲಿನ ಶೇಕಡಾ 80% ರಷ್ಟು ಕೃಷಿ ಪ್ರದೇಶವು ಮಳೆಯಿಲ್ಲದೆ ಬಾಡುತ್ತಿರುವುದರಿಂದ, ರೈತರ ಕಷ್ಟಕ್ಕೆ ಸ್ಪಂದಿಸುವ ಸದುದ್ದೇಶದಿಂದ ಈ ಐತಿಹಾಸಿಕ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಕೆಕೆ ಬಾಗ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ, ಶಾಲೆಯ ಮಕ್ಕಳು ಸಾಂಪ್ರದಾಯಿಕ ‘ಗುರ್ಜಿ ವರ್ಧ’ ವೇಷ ಧರಿಸಿದರು. ಮೈಮೇಲೆ ಬೇವಿನ ಸೊಪ್ಪುಗಳನ್ನು ಸುತ್ತಿಕೊಂಡು, ‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ’ ಎಂದು ಹಾಡುತ್ತಾ, ‘ಹುಯ್ಯೋ ಹುಯ್ಯೋ ಮಳೆರಾಯ’ ಎಂದು ಹಳ್ಳಿಯಾದ್ಯಂತ ಕುಣಿದು ಕುಪ್ಪಳಿಸುವ ಮೂಲಕ ಮಳೆರಾಯನನ್ನು ಭಕ್ತಿಯಿಂದ ಕರೆಯಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಮಾತನಾಡಿ, ಪ್ರದೇಶದಲ್ಲಿ ಶೇಕಡಾ 61% ರಷ್ಟು ಮಳೆ ಕೊರತೆಯಿದ್ದು ರೈತರು ಕಂಗಾಲಾಗಿದ್ದಾರೆ. ರೈತರ ಕಷ್ಟವನ್ನು ಮನಗಂಡು ಮಕ್ಕಳು ಈ ಜಾನಪದ ಆಚರಣೆಯ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದರು. ಇದೇ ವೇಳೆ ಗುರ್ಜಿ ಆಕೃತಿ ಹೊತ್ತ ವಿದ್ಯಾರ್ಥಿಯ ಮೇಲೆ ನೀರು ಸುರಿಯುವ ಸಾಂಕೇತಿಕ ವಿಧಿ ನೆರವೇರಿಸಲಾಯಿತು.

ಮುಖ್ಯ ಗುರುಗಳಾದ ಶಾರುನ್ ಕುಮಾರಿ ಮಾತನಾಡಿ, ನಾಡಿನಾದ್ಯಂತ ಮಳೆ ಬೇಗನೆೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಶಾಂತಿ, ರವಿಕುಮಾರ್, ಜಗದೀಶ್, ಕುಮಾರಿ ಲಾವಣ್ಯ ಸೇರಿದಂತೆ ಸಮಸ್ತ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ‘ಬಾರೋ ಬಾರೋ ಮಳೆರಾಯ’ ಎಂದು ಪ್ರಾರ್ಥನೆಯಲ್ಲಿ  ಪಾಲ್ಗೊಂಡರು.

 

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...