Home ಸುದ್ದಿ ಆರೋಗ್ಯದೊಂದಿಗೆ ಐತಿಹಾಸಿಕ ಅರಿವು: ವಾಕಿಂಗ್ ಗೆಳೆಯರ ಬಳಗದಿಂದ ಹಿರೇಬೆಣಕಲ್ ಚಾರಣ ಯಶಸ್ವಿ.
ಸುದ್ದಿ

ಆರೋಗ್ಯದೊಂದಿಗೆ ಐತಿಹಾಸಿಕ ಅರಿವು: ವಾಕಿಂಗ್ ಗೆಳೆಯರ ಬಳಗದಿಂದ ಹಿರೇಬೆಣಕಲ್ ಚಾರಣ ಯಶಸ್ವಿ.

Share
Share

ಮರ್ಚೇಡ್ ಡೇಸ್ ಸುದ್ದಿ|ಕೊಪ್ಪಳ.

ಕೊಪ್ಪಳ : ನಿತ್ಯದ ನಡಿಗೆಯೊಂದಿಗೆ ಇತಿಹಾಸದ ಹೆಜ್ಜೆಗುರುತುಗಳನ್ನು ಅರಿಯುವ ಉತ್ಸಾಹದಿಂದ, ಭಾಗ್ಯನಗರದ ಆಂಜಿನೇಯ ಬಡಾವಣೆಯ ‘ವಾಕಿಂಗ್ ಗೆಳೆಯರ ಬಳಗ’ವು ಇತ್ತೀಚೆಗೆ ಗಂಗಾವತಿ ತಾಲೂಕಿನ ಪ್ರಸಿದ್ಧ ಬೃಹತ್ ಶಿಲಾಯುಗದ ತಾಣವಾದ ಹಿರೇಬೆಣಕಲ್‌ಗೆ ಸ್ಪೂರ್ತಿದಾಯಕ ಚಾರಣವನ್ನು ಹಮ್ಮಿಕೊಂಡಿತು. ಕೇವಲ ಆರೋಗ್ಯಕ್ಕಾಗಿ ಮಾತ್ರವಲ್ಲದೆ, ನಾಡಿನ ಪ್ರಾಚೀನ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವ ಮೂಲಕ ಗೆಳೆಯರ ಈ ಬಳಗವು ಇತರರಿಗೆ ಮಾದರಿಯಾಗಿದೆ. ಸ್ಥಳೀಯವಾಗಿ ‘ಮೋರರ ಗುಡ್ಡ’ ಎಂದೇ ಕರೆಯಲ್ಪಡುವ ಈ ಪ್ರದೇಶವು ಕ್ರಿಸ್ತಪೂರ್ವ 800 ರಿಂದ 200 ರ ಅವಧಿಗೆ ಸೇರಿದ್ದು, ದಕ್ಷಿಣ ಭಾರತದ ಅತಿ ದೊಡ್ಡ ಸಮಾಧಿ ನೆಲೆಗಳಲ್ಲಿ ಒಂದಾಗಿದೆ ಹಾಗೂ ಯುನೆಸ್ಕೋ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.

ಈ ಜ್ಞಾನಾರ್ಜನೆ ಮತ್ತು ಆರೋಗ್ಯಕರ ಚಾರಣದಲ್ಲಿ ಡಾ. ಗೋಣೆಪ ವಾಣಿ, ಮಂಜುನಾಥ್ ತಿಮ್ಮಲಾಪುರ, ಸಿದ್ದು ಕಮ್ಮಾರ್, ನರಸಿಂಹ, ಸಿದ್ದು ಬಾಷಿಂಗನವರು, ವಿದ್ಯಾಧರ, ಚೇತನ್ ಕುಮಾರ್, ಶಿವಾನಂದ, ಸಿದ್ದು ಹಿರೇಮಠ, ಸದಾಶಿವ, ಅಮರೇಶ್ ನಾಯಕ, ಗೌಡಪ್ಪ ಹಾಗೂ ಅವಿನಾಶ ಸೇರಿದಂತೆ ಬಳಗದ ಉತ್ಸಾಹಿ ಸದಸ್ಯರು ಹೆಗಲಿಗೆ ಹೆಗಲು ಕೊಟ್ಟು ಭಾಗವಹಿಸಿದ್ದರು. ಎಲ್ಲರೂ ಒಟ್ಟಾಗಿ ಸಾಗುತ್ತಾ ಪ್ರಕೃತಿಯ ಮಡಿಲಲ್ಲಿ ನಡಿಗೆಯ ಆನಂದವನ್ನು ಅನುಭವಿಸುವುದರೊಂದಿಗೆ ಐತಿಹಾಸಿಕ ಮಹತ್ವವನ್ನು ಕಣ್ತುಂಬಿಕೊಂಡರು.

ಸುಮಾರು 3000 ವರ್ಷಗಳ ಹಿಂದೆ ಇಲ್ಲೊಂದು ಕಬ್ಬಿಣ ಯುಗ ಅಥವಾ ಶಿಲಾಯುಗ ನಾಗರಿಕತೆ ಇತ್ತೆಂದು ಇತಿಹಾಸಕಾರರು ಗುರುತಿಸಿದ್ದಾರೆ. ಅಂದಿನ ಕಾಲದ ಜನರು ಗೋಪಾಲಕರು ಮತ್ತು ರೈತರಾಗಿದ್ದರಿಂದ ಬಂಡೆಗಳ ಮೇಲೆ ಆಕಳುಗಳ ಚಿತ್ರಗಳನ್ನು ಕೆತ್ತಿದ್ದು ವಿಶೇಷವಾಗಿತ್ತು. ಈ ತಾಣದಲ್ಲಿ ಮಹಾ ಶಿಲಾಯುಗದ ಸ್ಮಾರಕಗಳು, ನೀರಿನ ಕೊಳಗಳು, ಶಿಲಾ ವಸ್ತುಗಳು, ಕಲ್ಲು ಗಣಿಗಳು ಮತ್ತು ಪ್ರಾಚೀನ ಶೀಲಾ ಚಿತ್ರಗಳು ಇಂದಿಗೂ ಅಚ್ಚರಿ ಮೂಡಿಸುತ್ತಿವೆ.

ಮಹಾ ಶಿಲಾಯುಗದ ಕಾಲದಲ್ಲಿ ಆದಿಮಾನವರು ಪುನರ್ಜನ್ಮದ ಬಗ್ಗೆ ನಂಬಿಕೆ ಹೊಂದಿದ್ದು, ಮೃತರ ಆತ್ಮಗಳ ರಕ್ಷಣೆಗಾಗಿ ಮತ್ತು ಶವಗಳ ಅನುಕೂಲಕ್ಕಾಗಿ ನಾಲ್ಕು ಕಡೆ ಕಲ್ಲಿನ ಚಪ್ಪಡಿಗಳ ಮೂಲಕ ಈ ಸ್ಮಾರಕಗಳನ್ನು ನಿರ್ಮಿಸಿದ್ದಾರೆ ಎಂದು ಪುರಾತತ್ತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ. ಕೇವಲ ವ್ಯಾಯಾಮಕ್ಕೆ ಸೀಮಿತವಾಗದೆ ಇಂತಹ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಜ್ಞಾನ ವೃದ್ಧಿಸಿಕೊಳ್ಳುತ್ತಿರುವ ವಾಕಿಂಗ್ ಗೆಳೆಯರ ಈ ಒಡನಾಟವು ಎಲ್ಲರಿಗೂ ಒಂದು ಉತ್ತಮ ಪ್ರೇರಣೆಯಾಗಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...