
ಮರ್ಚೆಡ್ ಡೇಸ್ ಲೇಖನೆ:|ಗಂಗಾವತಿ.
# ತಾಯಪ್ಪ ಮರ್ಚೆಡ್.
ಕಳೆದ ಕೆಲವು ವರ್ಷಗಳ ಹಿಂದೆ ಈ ಹುಡುಗ ನಿಜ ಯಾರೆಂಬುದೇ ಯಾರಿಗೂ ಗೊತ್ತಿರಲಿಲ್ಲ, ಆದರೆ ಇಂದು ಜಗತ್ತಿನ ಫುಟ್ಬಾಲ್ ಅಂಗಳದಲ್ಲಿ ಇವನದ್ದೇ ಹವಾ, ಲಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಇಬ್ಬರ ಹೆಸರನ್ನು ಮೀರಿ ಬೆಳೆದು ನಿಂತಿರುವ ಈ 19 ರ ಹರೆಯದ ಯುವಕ ಈಗ ಫುಟ್ಬಾಲ್ ಪ್ರೇಮಿಗಳ ನಾಲಿಗೆಯ ಮೇಲೆ ಫುಟ್ಬಾಲ್ ರೀತಿಯಲ್ಲಿ ಗಿರಿಗಿಟ್ಲೆಯಂತೆ ತಿರುಗಿಸಿದ್ದಾನೆ.
ಮೆಸ್ಸಿಯ ಯುಗ ಮುಗಿಯುತ್ತಿದೆಯೋ ಎನ್ನುವಂತಿರುವ ಸಂದರ್ಭದಲ್ಲಿ, ಮೆಸ್ಸಿಯ ವಿದಾಯದ ಕ್ಷಣಗಳು ಎಲ್ಲಿ ಆರಂಭಗೊಂಡಿತು. ಅಲ್ಲಿಂದಲೇ ಈ ಯುವಕನ ವಿಜಯದ ಮಹಾಯಾತ್ರೆ ಆರಂಭವಾಗಿದೆ. ಫುಟ್ಬಾಲ್ ದೈತ್ಯರ ನಡುವೆ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಲು ಬಂದಿರುವ ಈ ಪ್ರತಿಭೆಯ ಹೆಜ್ಜೆಯು ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ಕನ್ನಡ ಸಿನಿಮಾದಲ್ಲಿ ಒಂದು ಡೈಲಾಗ್ ಬರುತ್ತದೆ “ನಾನು ಬರುವರೆಗೆ ಮಾತ್ರ ಬೇರೆಯವರ ಹವಾ ನಾನು ಬಂದ ಮೇಲೆ ನಂದೆ ಹವಾ ಎಲ್ಲರೂ ತಾವೇ ರಾಜ್ಯರು ಅನ್ಕೊಂಡಿದ್ರು, ಆದ್ರೆ ನಾನು ಬಂದಮೇಲೆ ನಂದೇ ಸಾಮ್ರಾಜ್ಯ” ಎನ್ನುವ ಡೈಲಾಗ್ ತರಾ, ಲ್ಯಾಮಿನೆ ಯಮಾಲ್ ಈ ಜಾಗತಿಕ ಫುಟ್ಬಾಲ್ ರಂಗಕ್ಕೆ ಕಾಲಿಟ್ಟ ತಕ್ಷಣ ತನ್ನದೇ ಆದ ಚಾಪು ಮೂಡಿಸಿ ಅಕ್ಷರಶಃ ಅದೇ ಛಾತಿಯನ್ನು ಮೆರೆದಿದ್ದಾನೆ.
ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವಂತೆ 19ನೇ ವಯಸ್ಸು, 19ನೇ ಜೆರ್ಸಿ ನಂಬರ್ ಹಾಗೂ ಜುಲೈ 19ರ ಮಹಾಫೈನಲ್ ರೋಚಕತೆಯು ಸ್ಪೇನ್ ತಂಡದ ಭವಿಷ್ಯವನ್ನು ಬೆಳಗಲು ಸಿದ್ಧವಾಗಿದೆ. ಫುಟ್ಬಾಲ್ ಲೋಕದಲ್ಲಿ ಯುವ ಪ್ರತಿಭೆಗಳಿಗೆ ಮಣೆ ಹಾಕುವ ಸ್ಪೇನ್ ದೇಶದ ಕೋಚ್ ಮತ್ತು ತಂಡದ ತಂತ್ರಗಾರಿಕೆಯು ಈಗ ಜಗತ್ತಿನ ಗಮನ ಸೆಳೆದಿದೆ.
ಸಾಮಾನ್ಯ ಹುಡುಗನಂತೆ ಇದ್ದ ಈ ಪ್ರತಿಭೆಯು ಇಂದು ಸ್ಪೇನ್ ತಂಡದ ಅತಿದೊಡ್ಡ ಅಸ್ತ್ರವಾಗಿ ರೂಪುಗೊಂಡಿದ್ದು, ಪ್ರತಿದಿನವೂ ಕೋಚ್ ನೀಡುತ್ತಿರುವ ಹೊಸ ಮಾರ್ಗದರ್ಶನದಿಂದ ಮತ್ತಷ್ಟು ನುರಿತ ಆಟಗಾರನಾಗಿ ಹೊರಹೊಮ್ಮುತ್ತಿದ್ದಾನೆ. ಕೋಚ್ ತಕ್ಕಂತೆ ಆಡುವ ಈ ಹುಡುಗನ ಆಟವು ಎದುರಾಳಿ ತಂಡಗಳ ನಡುಕ ಹುಟ್ಟಿಸುತ್ತಿದ್ದಾನೆ.
ಫಿಫಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಕನಸಿನೊಂದಿಗೆ ಮುನ್ನಡೆಯುತ್ತಿರುವ ಸ್ಪೇನ್ ತಂಡದ ಈ ಮಾಂತ್ರಿಕ ಆಟಗಾರ, ತನ್ನ ಅದ್ಭುತ ಡ್ರಿಬ್ಲಿಂಗ್ ಮತ್ತು ಗೋಲ್ ಗಳಿಸುವ ಕೌಶಲ್ಯದಿಂದ ಕೋಚ್ ನಂಬಿಕೆಯನ್ನು ಸಂಪೂರ್ಣವಾಗಿ ಉಳಿಸಿಕೊಂಡಿದ್ದಾನೆ. ಕೋಚ್ ತರಬೇತಿಯ ಶೈಲಿ ಮತ್ತು ಈ ಯುವಕನ ಶ್ರಮವೇ ಇಂದಿನ ಈ ಅದ್ಭುತ ಯಶಸ್ಸಿಗೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ಫುಟ್ಬಾಲ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯಲು ಸಿದ್ಧವಾಗಿರುವ ಈ 19ರ ಹರೆಯದ ಯುವ ಆಟಗಾರನ ಪಯಣವು ಕೇವಲ ಪ್ರಾರಂಭವಷ್ಟೇ ಆಗಿದ್ದು, ಮುಂಬರುವ ದಿನಗಳಲ್ಲಿ ಇವನ ಫುಟ್ಬಾಲ್ ಆಟವು ಜಗತ್ತನ್ನು ಮತ್ತಷ್ಟು ಆಳುವುದರಲ್ಲಿ ಯಾವುದೇ ಸಂಶಯವಿಲ್ಲ.