Home ಸುದ್ದಿ ಕೇರಳ ಸರ್ಕಾರದ ಮಾದರಿ ಹೆಜ್ಜೆ: ಫುಟ್ಬಾಲ್ ಪ್ರೇಮಿ ವಿದ್ಯಾರ್ಥಿಗಳ ಪರ ಐತಿಹಾಸಿಕ ನಿರ್ಧಾರ.
ಸುದ್ದಿ

ಕೇರಳ ಸರ್ಕಾರದ ಮಾದರಿ ಹೆಜ್ಜೆ: ಫುಟ್ಬಾಲ್ ಪ್ರೇಮಿ ವಿದ್ಯಾರ್ಥಿಗಳ ಪರ ಐತಿಹಾಸಿಕ ನಿರ್ಧಾರ.

Share
Share

 

ಮರ್ಚೆಡ್ ಡೇಸ್ ಸುದ್ದಿ.|ಕೇರಳ

ಕೇರಳ: ಫುಟ್ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ಭಾವನೆ, ಕೋಟ್ಯಂತರ ಹೃದಯಗಳ ಉತ್ಸಾಹ. ಈ ಮಾತನ್ನು ಅಕ್ಷರಶಃ ನಿಜವಾಗಿಸಿ ತೋರಿಸಿದೆ ಕೇರಳ ಸರ್ಕಾರ.

ಕಳೆದ ಭಾನುವಾರ (ಜುಲೈ 19 ರಂದು) ನಡೆದ ಹೈ-ವೋಲ್ಟೇಜ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ರೋಚಕತೆಯನ್ನು ಯುವ ಜನತೆ ಹಾಗೂ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ಮುಕ್ತವಾಗಿ ಆನಂದಿಸಲೆಂದು ಕೇರಳ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರ ಈಗ ಇಡೀ ದೇಶದ ಗಮನ ಸೆಳೆದಿದೆ. ರಾತ್ರಿ ತಡವಾಗಿ ಮುಕ್ತಾಯಗೊಳ್ಳುವ. ಮಹತ್ವದ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಮರುದಿನ ಬೆಳಗಿನ ಶಾಲೆ-ಕಾಲೇಜುಗಳ ನಿದ್ರೆಯ ಮಂಪರು ಅಥವಾ ಒತ್ತಡವಿರಬಾರದು ಎಂಬ ದೂರದೃಷ್ಟಿಯಿಂದ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ (ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು) ರಜೆ ಘೋಷಿಸಿ ಮಾದರಿಯಾಗಿದೆ.

ಸಾಮಾನ್ಯವಾಗಿ ಆಡಳಿತ ವ್ಯವಸ್ಥೆಗಳು ಕೇವಲ ಕಡತಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಗೆ ಸೀಮಿತಗೊಳ್ಳುತ್ತವೆ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳ ನಾಡಿಮಿಡಿತವನ್ನು ಅರಿತು, ಅವರ ಕಾಲ್ಚೆಂಡಿನ(ಫುಟ್ಬಾಲ್) ಕ್ರೇಜ್‌ಗೆ ಬೆಲೆಕಟ್ಟಿದ ಕೇರಳ ಸರ್ಕಾರದ ಈ ಜನಪರ ಮತ್ತು ಯುವಜನ ಸ್ನೇಹಿ ಕ್ರಮಕ್ಕೆ ನಿಜಕ್ಕೂ ಸ್ಮರಣೀಯ.

ಕೇವಲ ಅಂಕಗಳಿಕೆ ಮಾತ್ರವಲ್ಲ, ವಿದ್ಯಾರ್ಥಿಗಳ   ಸರ್ವಾಂಗೀಣ ವಿಕಾಸ ಹಾಗೂ ಅವರ ಉತ್ಸಾಹಕ್ಕೆ       ಬೆಂಬಲ ನೀಡುವುದೇ ನಿಜವಾದ ಶಿಕ್ಷಣ ಎಂಬುದನ್ನು ಈ    ನಿರ್ಧಾರ ಸಾರಿದೆ.

ಅಭಿಮಾನಿಗಳ ಹರ್ಷೋದ್ಗಾರ: ರಾತ್ರಿ ಇಡೀ ವಿಶ್ವಕಪ್ ರೋಚಕತೆಯಲ್ಲಿ ಮಿಂದೆದ್ದ ಫುಟ್ಬಾಲ್ ಪ್ರೇಮಿಗಳಿಗೆ ಸಿಕ್ಕ ಅತಿ ದೊಡ್ಡ ಉಡುಗೊರೆ ಇದು.

“ಓದು-ಬರಕೆ ಮಾತ್ರವಲ್ಲ, ಕ್ರೀಡಾಭಿಮಾನಕ್ಕೂ ನಮ್ಮ ಸರ್ಕಾರ ಸ್ಪಂದಿಸುತ್ತದೆ” ಎಂಬುದನ್ನು ಸಾಬೀತುಪಡಿಸಿರುವ ಕೇರಳ ಸರ್ಕಾರದ ಈ ನಿರ್ಧಾರಕ್ಕೆ ನಾಡಿನಾದ್ಯಂತ ಫುಟ್ಬಾಲ್ ಅಭಿಮಾನಿಗಳಿಂದ ಮತ್ತು ವಿದ್ಯಾರ್ಥಿಗಳಿಂದ ಭರ್ಜರಿ ಸ್ವಾಗತ ಹಾಗೂ ಶ್ಲಾಘನೆ ವ್ಯಕ್ತವಾಗಿದೆ. ಕ್ರೀಡೆಯ ಮೇಲಿನ ಪ್ರೀತಿಗೆ ರಾಜಕೀಯ ಮತ್ತು ಆಡಳಿತದ ಗಡಿ ಮೀರಿ ಬೆಂಬಲ ನೀಡಿದ ಕೇರಳ ಸರ್ಕಾರದ ಈ ಹೆಜ್ಜೆ ಇಡೀ ದೇಶಕ್ಕೆ ಮಾದರಿಯಾಗಿದೆ!

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...