Home ಸುದ್ದಿ ಸಂಪೂರ್ಣ ಮಳೆಗಾಗಿ ಮಂತ್ರಾಲಯದತ್ತ ಆರ್ಯ ವೈಶ್ಯ, ಸಮಾಜದ ಭಕ್ತಿಯ ಹೆಜ್ಜೆ.
ಸುದ್ದಿ

ಸಂಪೂರ್ಣ ಮಳೆಗಾಗಿ ಮಂತ್ರಾಲಯದತ್ತ ಆರ್ಯ ವೈಶ್ಯ, ಸಮಾಜದ ಭಕ್ತಿಯ ಹೆಜ್ಜೆ.

Share
Share
ರೈತರ ಸುಭಿಕ್ಷಕ್ಕಾಗಿ ಐದನೇ ವರ್ಷದ ಪಾದಯಾತ್ರೆಗೆ                                       ಭಕ್ತಿಭಾವದ ಚಾಲನೆ.

ಮರ್ಚೆಡ್ ಡೇಸ್ ಸುದ್ದಿ.

ನಾಡಿನಲ್ಲಿ ಸಂಪೂರ್ಣ ಮಳೆ ಸುರಿದು ಸಮೃದ್ಧ ಬೆಳೆ ಬೆಳೆಯಲಿ, ರೈತರ ಬದುಕು ಹಸನಾಗಲಿ ಎಂಬ ಮಹತ್ಕಾಂಕ್ಷೆಯೊಂದಿಗೆ ಆರ್ಯವೈಶ್ಯ ಸಮಾಜದ  ಕನ್ನಿಕಾಪರಮೇಶ್ವರಿ ದೇವಸ್ಥಾನ (ಹಿರೇಜಂತಕಲ್–ವಿರುವಾಪುರ) ಹಾಗೂ ನವಬೃಂದಾವನ ಭಜನಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾದ ಐದನೇ ವರ್ಷದ ಮಂತ್ರಾಲಯ ಪಾದಯಾತ್ರೆಗೆ ಭಾನುವಾರ ಭಕ್ತಿಭಾವದಿಂದ ಚಾಲನೆ ದೊರೆಯಿತು. ಜುಲೈ 19ರಂದು ಬೆಳಿಗ್ಗೆ 6.30ಕ್ಕೆ ಆರಂಭವಾದ ಪಾದಯಾತ್ರೆಯು ಜುಲೈ 23ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು, ನೂರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಆರ್ಯವೈಶ್ಯ ಸಮಾಜ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ, ಈ ಬಾರಿ ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವರುಣ ದೇವರ ಕೃಪೆ, ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ತಾಯಿ ಕನ್ನಿಕಾಪರಮೇಶ್ವರಿಯ ಆಶೀರ್ವಾದದಿಂದ ಉತ್ತಮ ಮಳೆ ಸುರಿದು ರೈತರ ಬದುಕು ಸುಭಿಕ್ಷವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಭಜನಾ ಮಂಡಳಿಯ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಠಿ ಮಾತನಾಡಿ, “ರೈತ ಸುಭಿಕ್ಷವಾಗಿದ್ದರೆ ದೇಶವೂ ಸುಭಿಕ್ಷವಾಗಿರುತ್ತದೆ. ನಾಡಿನ ಜನರ ಒಳಿತಿಗಾಗಿ ಹಾಗೂ ಉತ್ತಮ ಮಳೆಯಾಗಲೆಂದು ಈ ಪಾದಯಾತ್ರೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು. ಗುರುಗಳಾದ ಬಿಮ್ ಭಟ್ ಜೋಶಿ ಪಾದಯಾತ್ರಿಗಳಿಗೆ ಆಶೀರ್ವಚನ ನೀಡಿ, ರಾಜ್ಯಾದ್ಯಂತ ಉತ್ತಮ ಮಳೆ-ಬೆಳೆ ಉಂಟಾಗಿ ಜನಜೀವನ ಸಮೃದ್ಧಿಯಾಗಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಹಣವಾಳ ಚಂದ್ರಶೇಖರ ಶ್ರೇಷ್ಠಿ, ಚಂದ್ರು ಬನ್ನಿಗೋಳ, ಮಂಜುನಾಥ ಹಣವಾಳ, ದತ್ತಾತ್ರೇಯ, ಗುಂಡೂರ ಪ್ರಲಾದ್, ದಮ್ಮೂರು ಸುರೇಶ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ರುಕ್ಮಿಣಿ, ಭಜನಾ ಮಂಡಳಿಯ ಅಧ್ಯಕ್ಷೆ ದಮ್ಮೂರು ಮಂಜುಳಾ, ಸುಮಲತಾ, ದೀಪಾ ಬನ್ನಿಗೋಳ, ವಾಸವಿ ಯುವಜನ ಸಂಘದ ಗೌರವಾಧ್ಯಕ್ಷ ವೆಂಕಟೇಶ ದರೋಜಿ, ಬೆನ್ನೂರ ಪ್ರಹ್ಲಾದ್, ಅಧ್ಯಕ್ಷ ಮಂಜುನಾಥ ಸೇರಿದಂತೆ ಆರ್ಯವೈಶ್ಯ ಸಮಾಜದ ಮುಖಂಡರು, ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ಸಿಗೆ ಶುಭ ಹಾರೈಸಿದರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...