Home ಸುದ್ದಿ ನಮ್ಮೂರಿಗೆ ನಾವು ಅತಿಥಿಗಳು ಬೆಂಗಳೂರಿನಲ್ಲಿ ಬದುಕುತ್ತಿರುವ ಅಸಲಿ ಅನ್ನದಾತರು: ಕಣ್ಣೀರಿನ ಕಥೆ.
ಸುದ್ದಿ

ನಮ್ಮೂರಿಗೆ ನಾವು ಅತಿಥಿಗಳು ಬೆಂಗಳೂರಿನಲ್ಲಿ ಬದುಕುತ್ತಿರುವ ಅಸಲಿ ಅನ್ನದಾತರು: ಕಣ್ಣೀರಿನ ಕಥೆ.

Share
Share

 

ಮರ್ಚೇಡ್ ಡೇಸ್ ವಿಶೇಷ ವರದಿ. ರಾಯಚೂರು:

“ಹಾಯ್ ಫ್ರೆಂಡ್ಸ್…” ಅಂತ ಮುದ್ದಾಗಿ ನಗುತ್ತಾ ರೀಲ್ಸ್ ಮಾಡುವ 11 ವರ್ಷದ ಮಗುವಿನ ವಿಡಿಯೋ ನಾವು ನೀವು ಈ ವಿಡಿಯೋ ನೋಡಿದ್ದೇವೆ , ನನ್ನ ಮನದಲ್ಲಿ ಒಂದು ತೀವ್ರವಾದ ನೋವು ಮಿಂಚಿತು. ಆ ಮಗು ಹೇಳುವ ತನ್ನ ತನ್ನ ಊರಿಗೆ ಖುಷಿಯಿಂದ ಬರಬೇಕಾದ ಮಗು ಬೇಸರದಿಂದ ಹೇಳಿರುವ ಮಾತು ‘ಹಾಯ್ ಫ್ರೆಂಡ್ಸ್’  ನಮ್ಮೂರಿನ ಇಂದಿನ ವಾಸ್ತವಕ್ಕೂ ಕರ್ನಾಟಕದ ಉಳಿದ ಭಾಗಕ್ಕೂ  ಅಜಗಜಾಂತರವಿದೆ. ನಾನು ಮೂಲತಃ ರಾಯಚೂರು ಜಿಲ್ಲೆಯವಳಾದ ನಾನು ಇಂದು ಬೆಂಗಳೂರಿನ ಗಲ್ಲಿಗಳಲ್ಲಿ ಕೂಲಿ ಮಾಡುತ್ತಾ ಬದುಕುತ್ತಿದ್ದೇನೆ. ನನ್ನ ಪಾಲಿಗೆ ನನ್ನೂರಿನ ಮನೆ ಇವತ್ತು ಕೇವಲ ಒಂದು ಅತಿಥಿ ಮನೆಯಾಗಿದೆ.

ನಮ್ಮ ಹಳ್ಳಿಯಲ್ಲಿ ನಾಲ್ಕೈದು ಎಕರೆ ಹೊಲವಿದೆ. ಆದರೆ, ಮಳೆ ಬಂದರೆ ಬೆಳೆ ಇಲ್ಲ, ಬೆಳೆ ಬಂದರೂ ಬೆಲೆ ಇಲ್ಲ. ಬೆಲೆ ಸಿಕ್ಕರೂ ಅದನ್ನು ಕೊಳ್ಳುವವರೇ ಇಲ್ಲದ ದುಸ್ಥಿತಿ. ಅನ್ನ ಬೆಳೆಯುವ ಕೈಗಳೇ ಇಂದು ಅನ್ಯ ರಾಜ್ಯಗಳಿಗೆ ಗುಳೆ ಹೋಗಿ, ಹಸಿವಿನೊಂದಿಗೆ ಹೋರಾಡುತ್ತಿವೆ. ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರ್.. ಈ ಭಾಗದ ಹಳ್ಳಿಗಳ ಸ್ಥಿತಿ ಸ್ವಾತಂತ್ರ್ಯ ಸಿಕ್ಕ ಇಷ್ಟು ವರ್ಷಗಳಾದರೂ ಬದಲಾಗಿಲ್ಲ. ಸುತ್ತಲೂ ನದಿಗಳಿದ್ದರೂ ನೀರಾವರಿ ಇಲ್ಲದ ಅತಂತ್ರ ಸ್ಥಿತಿ ನಮ್ಮದು.

ಆಕಾಶದ ಕಡೆ ಮುಖ ಮಾಡಿ ‘ಬಾರೋ ಬಾರೋ ಮಳೆರಾಯ’ ಎಂದು ಹಾಡುವ ಕಂಠಗಳಲ್ಲಿ ಈಗ ಭಕ್ತಿಗಿಂತ ಹೆಚ್ಚಾಗಿ ಹತಾಶೆ ಇದೆ. ಕಪ್ಪೆ ಮದುವೆ ಮಾಡುವುದು, ದೇವರ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸುವುದು, ಕಲ್ಲು-ಮಣ್ಣನ್ನು ಬೇಡುವುದು.. ಹೀಗೆ ಮಳೆಗಾಗಿ  ನಾವು ಪಡುವ ಪಾಡು ಅಷ್ಟಿಷ್ಟಲ್ಲ. ಅತ್ತ ಮಳೆ ಬಾರದೆ ಬೆಳೆಗಳು ಒಣಗುತ್ತಿದ್ದರೆ, ಇತ್ತ ಬಾಯಾರಿದ ಮೂಕ ಪ್ರಾಣಿಗಳ ಗೋಳು ಕೇಳುವವರಿಲ್ಲ. ಈ ಬಿಸಿಲ ಧಗೆಗೆ ನಮ್ಮೂರು ಇಂದು ಬರಪೀಡಿತ ನಾಡಾಗಿದೆ.

ನಮ್ಮ ಹಳ್ಳಿಯಲ್ಲಿ ಎಂತಹ ಸೋಜಿಗವೆಂದರೆ, ಕುಡಿಯುವ ನೀರು ಸಿಗುವುದಿಲ್ಲ, ಆದರೆ ಬೀರು ಮದ್ದೆ  ಎಲ್ಲೆಡೆ  ಸಿಗುತ್ತವೆ! ಈ ಭಾಗಕ್ಕೆ ಬರುವ ಅಧಿಕಾರಿಗಳು ಸೇವಾ ಮನೋಭಾವದವರಲ್ಲ, ಬದಲಾಗಿ ದುಡ್ಡು ಮಾಡುವ ದೃಷ್ಟಿಯಿಂದ ಟ್ರಾನ್ಸ್‌ಫರ್ ಮಾಡಿಸಿಕೊಂಡು ಬರುವ ‘ಭ್ರಷ್ಟರು’. ಸರ್ಕಾರಿ ಯೋಜನೆಗಳು ಸಾಮಾನ್ಯ ಜನರಿಗೆ ತಲುಪುವಷ್ಟರಲ್ಲಿ ಲಂಚದ ರೂಪದಲ್ಲಿ ಅರ್ಧದಷ್ಟು ಕರಗಿಹೋಗಿರುತ್ತವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದ್ದರೂ, ಅದು ಕೇವಲ ಕಡತಗಳ ಮತ್ತು ನಿಯಮಗಳ ಸೆರೆಯಲ್ಲಿ ಬಂಧಿಯಾಗಿದೆ.

ಬೆಂಗಳೂರು, ಹೈದರಾಬಾದ್, ಮುಂಬೈ ನಗರಗಳು ನಮಗೆ ಅನ್ನ ನೀಡುವ ತಾಣಗಳಾಗಿವೆ ನಿಜ, ಆದರೆ ನಮ್ಮ ಮನಸ್ಸು ಇನ್ನೂ ನಮ್ಮೂರಿನ ಮಣ್ಣಿನ ಮೇಲೇ ಇದೆ. ಅಲ್ಲಿನ ಬರ, ಇಲ್ಲಿನ ಅನಿವಾರ್ಯತೆ.. ನಾವು ನಮ್ಮೂರುಗಳಿಗೆ ಅತಿಥಿಗಳಾಗಿದ್ದೇವೆ. ಈ ಭಾಗದ ಜನರ ಬದುಕನ್ನು ಹಸನಾಗಿಸಲು ಪ್ರತ್ಯೇಕ ಮತ್ತು ವ್ಯವಸ್ಥಿತ ಯೋಜನೆಗಳ ಅಗತ್ಯವಿದೆ. ‘ಪ್ರಜೆಗಳಿಂದ ಪ್ರಜೆಗಳಿಗಾಗಿ’ ಇರಬೇಕಾದ ಮಂಡಳಿಗಳು ನಿಜಕ್ಕೂ ನಮಗಾಗಿ ಬದಲಾಗದಿದ್ದರೆ.

ಇಲ್ಲವಾದರೆ, ಇಂದಿನ ಅತಿಥಿಗಳಾಗಿ ಬದುಕುಳಿದಿರುವ ನಾವು, ನಾಳೆ ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುವ ಆತಂಕ ಕಾಡುತ್ತಿದೆ. ನಮ್ಮೂರ ಮಣ್ಣಿನಲ್ಲಿ ನಮ್ಮ ಬೆವರು ಬಿದ್ದು, ಅಲ್ಲಿಯೇ ನಾವು ನೆಮ್ಮದಿಯಿಂದ ಉಣ್ಣುವ ಕಾಲ ಎಂದಿಗೆ ಬರುವುದು?

ಈ ರೀತಿಯ ಕಥೆಯನ್ನು ಓದಿದ ಮೇಲೆ, ನಿಮ್ಮ ಮನಸ್ಸಿನಲ್ಲಿರುವ ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಅಥವಾ ಸಮಾಜ ಏನು ಮಾಡಬೇಕು ಎಂದು ನೀವು  ಭಾವಿಸುತ್ತೀರಿ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...