ಮರ್ಚೇಡ್ ಡೇಸ್ ಸುದ್ದಿ.
ರಾಯಚೂರು : ರಾಯಚೂರಿನ ಎಲ್.ಬಿ.ಎಸ್ ನಗರದ ನಿವಾಸಿಯೊಬ್ಬರು ಆಸ್ಪತ್ರೆಗೆ ತೆರಳಿದವರು ವಾಪಸ್ ಬಾರದೇ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಆತಂಕಕ್ಕೀಡಾಗಿರುವ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಎನ್.ನಾಗೇಂದ್ರ (50) ತಂದೆ ಭೀಮಾರಾವ್ ನಾಪತ್ತೆಯಾದ ವ್ಯಕ್ತಿ. ಇವರು ಕಳೆದ ಜೂನ್ 13ರಂದು ಬೆಳಿಗ್ಗೆ 9.30ರ ಸುಮಾರಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟವರು, ನಂತರ ಮರಳಿ ಮನೆಗೆ ಮರಳಿಲ್ಲ. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನ ಸಂಖ್ಯೆ: 64/2026) ದಾಖಲಾಗಿದೆ.
ನಾಪತ್ತೆಯಾದ ನಾಗೇಂದ್ರ ಅವರು ವಿಮಾ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಮರಾಠಿ ಸಮುದಾಯಕ್ಕೆ ಸೇರಿದವರು. ಇವರು ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹಾಗೂ ದಪ್ಪನೆಯ ಮೂಗಿನ ಲಕ್ಷಣಗಳನ್ನು ಹೊಂದಿದ್ದಾರೆ. ಕನ್ನಡ, ತೆಲುಗು, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಮಾತನಾಡಬಲ್ಲರು. ಮನೆಯಿಂದ ಹೊರಡುವಾಗ ಇವರು ಹಳದಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಲುಂಗಿಯನ್ನು ಧರಿಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ಚಹರೆಯ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ರಾಯಚೂರು ಮಾರ್ಕೆಟ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಾಗೇಂದ್ರ ಅವರ ಸುಳಿವು ಸಿಕ್ಕಿದ ಕೂಡಲೇ ಮಾರ್ಕೆಟ್ ಯಾರ್ಡ್ ಠಾಣೆಯ ಪಿ.ಎಸ್.ಐ ಅವರ ಮೊಬೈಲ್ ಸಂಖ್ಯೆ 9480803849 ಅಥವಾ ಠಾಣೆಯ ದೂರವಾಣಿ ಸಂಖ್ಯೆ 08532-235600ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.