Home ಸುದ್ದಿ ಕನ್ನಡದ ಕೋಗಿಲೆ ಎಸ್. ಜಾನಕಿ ಅವರಿಗೆ ಗಂಗಾವತಿಯಲ್ಲಿ ಭಾವುಕ ಶ್ರದ್ಧಾಂಜಲಿ: ‘ಕನ್ನಡಿಗರ ಮನ ಗೆದ್ದ ಧ್ವನಿ.’.
ಸುದ್ದಿ

ಕನ್ನಡದ ಕೋಗಿಲೆ ಎಸ್. ಜಾನಕಿ ಅವರಿಗೆ ಗಂಗಾವತಿಯಲ್ಲಿ ಭಾವುಕ ಶ್ರದ್ಧಾಂಜಲಿ: ‘ಕನ್ನಡಿಗರ ಮನ ಗೆದ್ದ ಧ್ವನಿ.’.

Share
Share

 

ಮರ್ಚೆಡ್ ಡೇಸ್ ಸುದ್ದಿ.

ಗಂಗಾವತಿ: ಕನ್ನಡದ ಅಜರಾಮರ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಎಸ್. ಜಾನಕಿ ಅವರ ನಿಧನಕ್ಕೆ ನಗರದ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ‘ಸಂಗೀತ ಸ್ವರಾಂಜಲಿ’ ಹವ್ಯಾಸಿ ಕಲಾವಿದರ ತಂಡದ ವತಿಯಿಂದ ಭಾವುಕ ನುಡಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಲಾವಿದರು ಮತ್ತು ಅಭಿಮಾನಿಗಳು ಗಾಯಕಿಯ ಗೀತಗಾಯನದ ಮೂಲಕ ಮೌನ ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ. ನಿಂಗಜ್ಜ ಮಾತನಾಡಿ, “ಕನ್ನಡ ನಾಡಿನ ಸಾಂಸ್ಕೃತಿಕ ಸೌಂದರ್ಯಕ್ಕೆ ಮಾರುಹೋಗಿ, ಸಾಂಸ್ಕೃತಿಕ ರಾಜಧಾನಿ ಮೈಸೂರನ್ನೇ ತಮ್ಮ ಬದುಕಿನ ಕೊನೆಯ ತಾಣವನ್ನಾಗಿಸಿಕೊಂಡದ್ದು ನಮ್ಮ ಭಾಗ್ಯ. ಕನ್ನಡ ಭಾಷೆ ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ ಎಂಬುದಕ್ಕೆ ಜಾನಕಿ ಅಮ್ಮನವರೇ ಸಾಕ್ಷಿ. 10,000ಕ್ಕೂ ಹೆಚ್ಚು ಭಕ್ತಿ, ಭಾವಗೀತೆ ಮತ್ತು ಚಿತ್ರಗೀತೆಗಳನ್ನು ಹಾಡಿ ಕನ್ನಡಿಗರ ಮನಸಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು,” ಎಂದು ಸ್ಮರಿಸಿದರು.

ಜಾನಕಿ ಅಮ್ಮನವರ ಸಾಧನೆಯನ್ನು ಕೊಂಡಾಡಿದ ಅವರು, “ಡಾ. ರಾಜಕುಮಾರ್ ಅವರ ಸಿನಿಮಾಗಳಲ್ಲಿ ಜಾನಕಿ ಅಮ್ಮನವರ ಕಂಠಸಿರಿ ಅವಿನಾಭಾವ ಸಂಬಂಧ ಹೊಂದಿತ್ತು. ಬದುಕಿರುವಾಗಲೇ ಅವರಿಗೆ ‘ಭಾರತ ರತ್ನ’ ಗೌರವ ಸಿಗಬೇಕಿತ್ತು ಎಂಬುದು ಅಭಿಮಾನಿಗಳ ಆಶಯವಾಗಿತ್ತು. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ಹೆಮ್ಮೆಯ ವಿಷಯ. ಅವರು ಮೈಸೂರಿನಲ್ಲಿಯೇ ಕೊನೆಯುಸಿರೆಳೆದ ಮೂಲಕ ಕನ್ನಡಿಗರ ಔದಾರ್ಯವನ್ನು ಪಡೆದಿದ್ದಾರೆ. ಅವರ ಮಧುರ ಕಂಠ ಮುಂಬರುವ ದಿನಗಳಲ್ಲಿ ಮತ್ತೆ ಕನ್ನಡಿಗರ ಪಾಲಿಗೆ ಮರುಕಳಿಸಲಿ,” ಎಂದು ಪ್ರಾರ್ಥಿಸಿದರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತ ಸುದರ್ಶನ್ ವೈದ್ಯ ಸೇರಿದಂತೆ ಪರಶುರಾಮ ದೇವರಮನೆ, ಹನುಮಂತಪ್ಪ ಹುಲಿಹೈದರ್, ಪೊಲಕಾಲ್ ಯಲ್ಲಪ್ಪ, ಧೂಳ್ ವೆಂಕಟೇಶ, ತಿಪ್ಪೇಸ್ವಾಮಿ, ಆನಂದ ಪೇಂಟರ್, ಕೃಷ್ಣವೇಣಿ, ಐಲಿ ಸಣ್ಣ ಮಾರುತಿ, ಐಲಿ ರಮೇಶ, ಗಿರಿಜಮ್ಮ, ರುಕ್ಮುದ್ದೀನ್, ನೂರ ಅಹಮದ್ ಹಾಗೂ ಮತ್ತಿತರರು ಉಪಸ್ಥಿತರಿದ್ದು, ಗಾಯಕಿಯೊಂದಿಗಿನ ತಮ್ಮ ನೆನಪುಗಳನ್ನು ಹಂಚಿಕೊಂಡರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...