Home ಸುದ್ದಿ ನವಲಿ ವಾರದ ಸಂತೆ ಹರಾಜು ಯಶಸ್ವಿ: ಬಸವರಾಜ್ ನಾಯಕ್ ಹೆಗಲಿಗೆ ಮಾರುಕಟ್ಟೆ ಜವಾಬ್ದಾರಿ.
ಸುದ್ದಿ

ನವಲಿ ವಾರದ ಸಂತೆ ಹರಾಜು ಯಶಸ್ವಿ: ಬಸವರಾಜ್ ನಾಯಕ್ ಹೆಗಲಿಗೆ ಮಾರುಕಟ್ಟೆ ಜವಾಬ್ದಾರಿ.

Share
Share

ಮರ್ಚೆಡ್ ಡೇಸ್ ಸುದ್ದಿ.

ಕನಕಗಿರಿ: ತಾಲೂಕಿನ ಪ್ರಮುಖ ಗ್ರಾಮೀಣ ಮಾರುಕಟ್ಟೆಗಳಲ್ಲಿ ಒಂದಾದ ನವಲಿ ಗ್ರಾಮದ ಸಂತೆ ಮಾರುಕಟ್ಟೆಯ 2026-27ನೇ ಸಾಲಿನ ವಾರ್ಷಿಕ ಹರಾಜು ಪ್ರಕ್ರಿಯೆ ಬುಧವಾರ ಗ್ರಾಮ ಪಂಚಾಯತಿ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸ್ಥಳೀಯ ವ್ಯಾಪಾರಿಗಳು ಹಾಗೂ ಹರಾಜುದಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಈ ಪ್ರಕ್ರಿಯೆಯ ಕೊನೆಯ ಹಂತದಲ್ಲಿ, ₹1,52,000 ರ ಭಾರಿ ಮೊತ್ತಕ್ಕೆ ಬಸವರಾಜ್ ವಾಲ್ಮೀಕಿ ಅವರು ಸಂತೆಯ ನಿರ್ವಹಣಾ ಹಕ್ಕನ್ನು ತಮ್ಮದಾಗಿಸಿಕೊಂಡರು.

ಗ್ರಾಮ ಪಂಚಾಯಿತಿ ಅಧಿಕಾರಿ ವೀರಣ್ಣ ನಕ್ರಹಳ್ಳಿ ಅವರ ನೇತೃತ್ವ ಹಾಗೂ ಸಮ್ಮುಖದಲ್ಲಿ ಇಡೀ ಹರಾಜು ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಯಿತು.

“ಈ ಬಾರಿಯ ಹರಾಜಿನಿಂದ ಗ್ರಾಮ ಪಂಚಾಯಿತಿಗೆ ಉತ್ತಮ ಆದಾಯ ಹರಿದುಬಂದಿದೆ. ಈ ಮೊತ್ತವನ್ನು ಸಂತೆ ಮಾರುಕಟ್ಟೆಯ ಸಮರ್ಪಕ ನಿರ್ವಹಣೆ, ಕಟ್ಟುನಿಟ್ಟಿನ ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು.”

— ಪಂಚಾಯಿತಿ ಅಧಿಕಾರಿಗಳು

ಯಶಸ್ವಿಯಾಗಿ ನಡೆದ ಈ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಬಿಲ್ ಕಲೆಕ್ಟರ್ ಸಿದ್ದಪ್ಪ ಗಾಳಿ, ಜವಾನ ಜಾಹೀದ್, ಶಂಕ್ರಪ್ಪ ಭಜಂತ್ರಿ, ಮಹಾದೇವ ಹಡಪಾದ, ರಮೇಶ ತಾಂಡಾ, ಹನುಮೇಶ ಗಂಗಾವತಿ, ಯಮನೂರು ಚಲವಾದಿ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...