Home ಅಂಕಣ ಕಾಲ ಎಷ್ಟೇ ಆಧುನಿಕವಾದರೂ ಬದಲಾಗದ ಪ್ರೀತಿಯ ಬೆಸುಗೆ: ವೆಡ್ಡಿಂಗ್ ಆನಿವರ್ಸರಿ, ಬರ್ತ್‌ಡೇ  ಸರ್ಪ್ರೈಸ್ ಆಚರಣೆಯ ಹೊಸ ಟ್ರೆಂಡ್ …..
ಅಂಕಣಸುದ್ದಿ

ಕಾಲ ಎಷ್ಟೇ ಆಧುನಿಕವಾದರೂ ಬದಲಾಗದ ಪ್ರೀತಿಯ ಬೆಸುಗೆ: ವೆಡ್ಡಿಂಗ್ ಆನಿವರ್ಸರಿ, ಬರ್ತ್‌ಡೇ  ಸರ್ಪ್ರೈಸ್ ಆಚರಣೆಯ ಹೊಸ ಟ್ರೆಂಡ್ …..

Share
Share

 

ಮರ್ಚೆಡ್ ಡೇಸ್ ವಿಶೇಷ ಲೇಖನೆ:

ಇತ್ತೀಚೆಗಷ್ಟೇ ಅಂದರೆ ನಿನ್ನೆ ವಿಶ್ವ ತಂದೆಯರ ದಿನ (Father’s Day) ಮುಗಿಯಿತು. ಹೌದು, ದಿನದರ್ಶಕದ ಪುಟಗಳನ್ನು ತಿರುಗಿಸಿದರೆ ದಿನಕ್ಕೊಂದು ವಿಶೇಷ ದಿನಗಳು ಎದುರಾಗುತ್ತವೆ. ಆದರೆ, ಆ ದಿನಗಳನ್ನು ನಾವು ಹೇಗೆ ಆಚರಿಸುತ್ತೇವೆ ಮತ್ತು ಆ ಮೂಲಕ ನಮ್ಮವರಿಗಷ್ಟೇ ಅಲ್ಲದೆ ನಮಗೂ ಎಂತಹ ಸಂತೋಷವನ್ನು ತಂದುಕೊಳ್ಳುತ್ತೇವೆ ಎಂಬುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಇಂತಹ ವಿಶೇಷ ದಿನಗಳನ್ನು ಆಚರಿಸುವ ಮತ್ತು ಪ್ರೀತಿಪಾತ್ರರನ್ನು ಆಶ್ಚರ್ಯಚಕಿತರನ್ನಾಗಿಸುವ ಒಂದು ಸುಂದರವಾದ ಟ್ರೆಂಡ್ ಮುನ್ನೆಲೆಗೆ ಬರುತ್ತಿದೆ.

ನಿನ್ನೆ ತಂದೆಯರ ದಿನದಂದು ಕೆಲವು ಶಾಲೆಗಳಲ್ಲಿ ಒಂದು ಅಪರೂಪದ ಪ್ರಯತ್ನ ನಡೆಯಿತು. ಮಕ್ಕಳ ಕೈಯಿಂದಲೇ ಅವರ ತಂದೆಯಂದಿರಿಗೆ ಫೋನ್ ಮಾಡಿಸಿ ವಿಶ್ ಮಾಡಿಸಲಾಯಿತು. ಬ್ಯೂಸಿ ಶೆಡ್ಯೂಲ್‌ನಲ್ಲಿರುತ್ತಿದ್ದ ತಂದೆಗೆ ಇದ್ದಕ್ಕಿದ್ದಂತೆ ಮಗಳ ಕಡೆಯಿಂದ “ಐ ಲವ್ ಯು ಅಪ್ಪ, ” ಯುವರ್ ಮೈ ಹೀರೋ” ಎಂಬ ಮಾತು ಕೇಳಿದಾಗ ಆ ಕಡೆಯಿಂದ ಮೂಡಿದ ಆನಂದದ ಧ್ವನಿ, “ಥ್ಯಾಂಕ್ ಯು, ಐ ಲವ್ ಯು ಮಗಳೇ” ಎಂಬ ಪ್ರೀತಿಯ ಪ್ರತ್ಯುತ್ತರ—ಇದು ಕೇವಲ ಒಂದು ಫೋನ್ ಕರೆಯಲ್ಲ, ಕಣ್ಣಂಚನ್ನು ಒದ್ದೆ ಮಾಡುವಂತಹ ಹೆತ್ತವರ ಮತ್ತು ಮಕ್ಕಳ ನಡುವಿನ ಅಪ್ಪಟ ಪ್ರೀತಿಯ ಬೆಸುಗೆ.

ಸಂಸಾರ ಎಂಬ ಬಂಡಿ ಸುಗಮವಾಗಿ ಸಾಗಲು ಇಂತಹ ಸಣ್ಣ ಸಣ್ಣ ಆಶ್ಚರ್ಯಗಳು ಪೂರಕವಾಗುತ್ತವೆ. ಇತ್ತೀಚೆಗೆ ನಡೆದ ಒಂದು ಮಧುರವಾದ ಘಟನೆ: ನನ್ನ ಹೆಂಡತಿಯ ಹುಟ್ಟುಹಬ್ಬದ ದಿನ ಅವಳಿಗೆ ಕಿಂಚಿತ್ತೂ ಸುಳಿವು ಸಿಗದಂತೆ, ನಾನು ಮತ್ತು ಮಕ್ಕಳು ಒಟ್ಟಾಗಿ ಸೇರಿ ಒಂದು ಸಣ್ಣ ಪ್ಲಾನ್ ಮಾಡಿದೆವು. ಅವಳಿಗೆ ಗೊತ್ತಿಲ್ಲದಂತೆ ಅವಳ ಸುಂದರವಾದ ಫೋಟೋ ಒಂದನ್ನು ವಾಟ್ಸಾಪ್ ಸ್ಟೇಟಸ್ ಇಟ್ಟು, ಪ್ರೀತಿಯ ಶುಭ ಹಾರೈಕೆಗಳನ್ನು ಹಂಚಿಕೊಂಡೆವು. ಅಷ್ಟಕ್ಕೇ ನಿಲ್ಲಿಸದೆ, ಅಂದು ಅವಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮತ್ತು ಅವಳ ಹೆಸರಲ್ಲಿ ಅರ್ಚನೆ ಮಾಡಿಸಿ, ನಂತರ ನೆಚ್ಚಿನ ಹೋಟೆಲ್‌ಗೆ ಕರೆದೊಯ್ದು ಎಲ್ಲರೂ ಒಟ್ಟಾಗಿ ಊಟ ಮಾಡಿದೆವು.

ತನ್ನ ಹುಟ್ಟುಹಬ್ಬಕ್ಕೆ ಗಂಡ ಮತ್ತು ಮಕ್ಕಳು ಜಂಟಿಯಾಗಿ ನೀಡಿದ ಈ ಹಠಾತ್ ಆಶ್ಚರ್ಯವನ್ನು (ಸರ್ಪ್ರೈಸ್) ಕಂಡು ಆಕೆಯ ಮುಖದಲ್ಲಿ ಮೂಡಿದ ಆನಂದದ ಹೊಳಪು, ನನ್ನ ಇಡೀ ಕುಟುಂಬದ ಸೌಖ್ಯಕ್ಕೆ ಸಾಕ್ಷಿಯಾಗಿತ್ತು.

ರಸ್ತೆಯ ಮೇಲೆ ಜಗಳ, ಕ್ಲಾಸ್ ರೂಮಲ್ಲಿ ಗೆಳೆಯರ ಗಲಾಟೆ/ಗದ್ದಲ ಆಶ್ಚರ್ಯ ಮೂಡಿಸುವ ಹೊಸ ಸ್ಟೈಲ್!

ಈಗಿನ ಯುವ ಪೀಳಿಗೆಯಂತೂ ವಿಶ್ ಮಾಡುವುದರಲ್ಲೇ ಹೊಸ ಹೊಸ ಸಾಹಸಗಳನ್ನು ಮಾಡುತ್ತಿದ್ದಾರೆ.

ಇನ್ಸ್ಟಾಗ್ರಾಮ್ ಅಲ್ಲಿ ಒಂದು ವಿಡಿಯೋ ನೋಡ್ತಾ ಇದೆ

ಸ್ನೇಹಿತನೊಬ್ಬ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಮತ್ತೊಂದಿಬ್ಬರು ಬಂದು “ಏನ್ರೀ ಇಷ್ಟು ಸ್ಪೀಡ್ ಗಾಡಿ ಓಡಿಸ್ತೀರಾ? ನಿಮಗೇನಾದ್ರೂ ಬುದ್ಧಿ ಇದೆಯಾ?” ಎಂದು ಸುಮ್ಮನೆ ವೇಗವಾಗಿ ಹೋಗುವವರನ್ನು ನಿಲ್ಲಿಸಿ ರಸ್ತೆ ಪಕ್ಕಕ್ಕೆ ಕರೆದು ಗಲಾಟೆ ಮಾಡುವುದು, ಗಾಬರಿಯಿಂದ ಆತ ನೋಡುವಾಗ ಇದ್ದಕ್ಕಿದ್ದಂತೆ “ಹ್ಯಾಪಿ ಬರ್ತ್‌ಡೇ ಗೆಳೆಯಾ!” ಎಂದು ನಗುತ್ತಾ ಹೂಗುಚ್ಚ ನೀಡಿ ಶುಭ ಕೋರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಟ್ರೆಂಡ್ ಆಗಿದೆ.

ಅದೇ ರೀತಿಯಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊದಲೇ ಪ್ಲಾನ್ ಮಾಡಿಕೊಂಡು, ತರಗತಿಯ ರೂಮಿನಲ್ಲಿ ದೊಡ್ಡದಾಗಿ ಜಗಳ ಆಡುತ್ತಿರುವಂತೆ ನಟಿಸುತ್ತಾರೆ. ಗಾಬರಿಯಿಂದ ಆ ಜಗಳ ಬಿಡಿಸಲು ಓಡಿ ಬರುವ ಶಿಕ್ಷಕರಿಗೆ, ಇಡೀ ಕ್ಲಾಸ್ ಒಮ್ಮೆಲೇ “ವಿಶ್ ಯು ಹ್ಯಾಪಿ ಬರ್ತ್‌ಡೇ ಟೀಚರ್!” ಎಂದು ಕೂಗಿ ಕೇಕ್ ತಂದಿಟ್ಟಾಗ ಆ ಶಿಕ್ಷಕರ ಮುಖದಲ್ಲಿ ಮೂಡುವ ಆಶ್ಚರ್ಯ ಮತ್ತು ಹೆಮ್ಮೆಯ ಸಂತೋಷಕ್ಕೆ ಬೆಲೆ ಕಟ್ಟಲಾಗದು.

ಕೆಲವು ದಿನಗಳ ಹಿಂದೆ ನಡೆದ ಪ್ರಸಂಗ  ವಾಕಿಂಗ್ ಮುಗಿಸಿ ಬರುತ್ತಿದ್ದಾಗ ನನ್ನ ಪರಿಚಯಸ್ಥ ಸೋದರನ ಮಗ ಓಡಿ ಬಂದು, “ಅಪ್ಪ ಎಲ್ಲಿ ಹೋದರು?” ಎಂದು ಕೇಳಿದನು. “ಯಾಕೆ?” ಎಂದು ವಿಚಾರಿಸಿದಾಗ ಆತ ಹೆಮ್ಮೆಯಿಂದ ಹೇಳಿದ—ಇವತ್ತು ಅಪ್ಪ-ಅಮ್ಮನ ವೆಡ್ಡಿಂಗ್ ಆನಿವರ್ಸರಿ. ಅಪ್ಪನ ಕೈಯಿಂದಲೇ ಹೂಗುಚ್ಛ ಕೊಡಿಸಿ ಮಮ್ಮಿಗೆ ಸರ್ಪ್ರೈಸ್ ಕೊಡೋಕೆ ನಾವೆಲ್ಲಾ ಪ್ಲಾನ್ ಮಾಡಿದ್ದೀವಿ ಅಂಕಲ್ ಎಂದ.

ಗಂಡ-ಹೆಂಡತಿಯ ನಡುವಿನ ಇಂತಹ ಸಣ್ಣ ಸಣ್ಣ ಸರ್ಪ್ರೈಸ್‌ಗಳು, ದೈನಂದಿನ ಜಂಜಾಟದ ಬದುಕಿನಲ್ಲಿ ಪ್ರೀತಿಯ ಬೆಸಿಗೆಯನ್ನು ಸದಾ ಜೀವಂತವಾಗಿಡುತ್ತವೆ.

ಸಂತೋಷಕ್ಕೆ ಬೇಕಿಲ್ಲ ‘ಐಶ್ವರ್ಯ’,

ಬೇಕಿರುವುದು ‘ಮನಸ್ಸು,,

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ನಮಗೊಂದು ಸತ್ಯ ಅರ್ಥವಾಗುತ್ತದೆ.

ಬದುಕಿನಲ್ಲಿ ಸಣ್ಣ ಪುಟ್ಟ ಸಂಗತಿಗಳಲ್ಲೇ ನೆಮ್ಮದಿ ಕಾಣಲು ಹಣ, ಅಂತಸ್ತು ಅಥವಾ ಕೋಟಿ ಕೋಟಿ ಐಶ್ವರ್ಯ ಬೇಕಾಗಿಲ್ಲ. ಇರುವುದರಲ್ಲೇ, ಸಿಗುವ ಅಲ್ಪ ಸಮಯದಲ್ಲಿಯೇ ಪ್ರೀತಿಪಾತ್ರರ ಮುಖದಲ್ಲಿ ನಗು ಮೂಡಿಸುವುದು ಒಂದು ಅದ್ಭುತ ಕಲೆ.

ಇನ್ನೂ ಕೆಲವು ಜನರು ಅಭಿಪ್ರಾಯ ಇಂಥವೆಲ್ಲ ಟೆಂಡ್ ಮಾಡುವುದು ಕೇವಲ ಸೋಶಿಯಲ್ ಮೀಡಿಯಾಗಳಲ್ಲಿ ಅರಿ ಬಿಡಲು

ಪ್ರಚಾರಕ್ಕಾಗಿ ತಮ್ಮಲ್ಲಿರುವ ಟ್ಯಾಲೆಂಟ್ ಅನ್ನು ತೋರಿಸಲು

ವಿಡಿಯೋ ಅಂತಂದೆಲ್ಲ ಮಾಡ್ತಾರೆ. ಎನ್ನುವ ಆರೋಪವಿದೆ ಯಾವುದೇ ಅತಿಯಾಗಬಾರದು. ಅದು ಏನೇ ಇರಲಿ

ದಿನನಿತ್ಯದ ಓಟ, ಒತ್ತಡಗಳ ನಡುವೆ ನಮ್ಮವರಿಗಾಗಿ ಕೊಂಚ ಸಮಯ ಮೀಸಲಿಟ್ಟು, ಒಂದು ಸಣ್ಣ ಹೂವಿನ ಮೂಲಕವೋ, ನೆಚ್ಚಿನ ಹೋಟೆಲ್ ಕರೆದೊಯ್ದು ಊಟ ಮಾಡಿಸುವ ಮೂಲಕವೋ ಅಥವಾ ಒಂದು ಮಧುರವಾದ ಸರ್ಪ್ರೈಸ್ ಮೂಲಕವೋ ವಿಶ್ ಮಾಡುವುದು ಬದುಕನ್ನು ಸುಂದರವಾಗಿಸುತ್ತದೆ.

ಈ ಹೊಸ ತಲೆಮಾರಿನ ‘ಸರ್ಪ್ರೈಸ್ ಆಚರಣೆ’ಯ ಟ್ರೆಂಡ್ ಹೀಗೆಯೇ ಮುಂದುವರಿಯಲಿ, ಸಂಬಂಧಗಳ ನಡುವಿನ ಮಧುರತೆ ಮತ್ತಷ್ಟು ಹೆಚ್ಚಾಗಲಿ.

ಲೇಖನೆ:

ತಾಯಪ್ಪ ಮರ್ಚೆಡ್.

ಪತ್ರಕರ್ತರು ಗಂಗಾವತಿ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...