Home ಸುದ್ದಿ ಗಂಗಾವತಿಯಲ್ಲಿ ಖಾಕಿ ತಂಡ, ಬೆಳಗಿನ ಜಾವ 68 ರೌಡಿಶೀಟರ್‌ಗಳ ಮನೆಗೆ ಕೊಪ್ಪಳ ಎಸ್ಪಿ ದಿಢೀರ್ ದಾಳಿ.
ಸುದ್ದಿ

ಗಂಗಾವತಿಯಲ್ಲಿ ಖಾಕಿ ತಂಡ, ಬೆಳಗಿನ ಜಾವ 68 ರೌಡಿಶೀಟರ್‌ಗಳ ಮನೆಗೆ ಕೊಪ್ಪಳ ಎಸ್ಪಿ ದಿಢೀರ್ ದಾಳಿ.

Share
Share

 

ಮರ್ಚೇಡ್ ಡೇಸ್ ಸುದ್ದಿ.

ಗಂಗಾವತಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಇಂದು ಮುಂಜಾನೆ ರೌಡಿಶೀಟರ್‌ಗಳಿಗೆ ಬಿಗ್ ಶಾಕ್ ನೀಡಿದೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರ ನೇತೃತ್ವದಲ್ಲಿ ಖುದ್ದಾಗಿ ಕಣಕ್ಕಿಳಿದ ಪೊಲೀಸ್ ಪಡೆ, ಗಂಗಾವತಿ ನಗರದಾದ್ಯಂತ ಏಕಕಾಲಕ್ಕೆ ಭಾರಿ ರೇಡ್ ನಡೆಸಿದೆ.

ಇಂದು ಮುಂಜಾನೆ 5:30 ರಿಂದ ಆರಂಭಗೊಂಡು ಬೆಳಗ್ಗೆ 9:00 ಗಂಟೆಯವರೆಗೆ ಸತತವಾಗಿ ಈ ಕಾರ್ಯಾಚರಣೆ ನಡೆಯಿತು. ರೌಡಿ ನಿಗ್ರಹಕ್ಕಾಗಿ ಸನ್ನದ್ಧರಾಗಿದ್ದ 33 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿಕೊಂಡು ಎಸ್ಪಿ ಅವರು ಗಂಗಾವತಿ ನಗರದ ರೌಡಿಶೀಟರ್‌ಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿದರು. ಈ ಭೇಟಿಯ ವೇಳೆ ಒಟ್ಟು 68 ರೌಡಿಶೀಟರ್‌ಗಳ ಮನೆಗಳನ್ನು ಜಾಲಾಡಲಾಗಿದ್ದು, ಅವರ ಪ್ರಸ್ತುತ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಲಾಯಿತು.

ನಗರದ ಪ್ರಮುಖ ಪ್ರದೇಶವಾದ ಗುಂಡಮ್ಮ ಕ್ಯಾಂಪ್‌ನಲ್ಲಿರುವ ರೌಡಿಶೀಟರ್‌ಗಳ ಮನೆಗಳಿಗೆ ಎಸ್ಪಿ ಡಾ.ರಾಮ್ .ಎಲ್. ಅರಸುದ್ದಿ. ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಹುತೇಕರು ಸದ್ಯಕ್ಕೆ ಸಾಮಾನ್ಯ ಜೀವನ ನಡೆಸುತ್ತಿರುವುದು ಕಂಡುಬಂದಿದೆ.

ಆದರೆ, ಇದೇ ವೇಳೆ ಒಬ್ಬ ರೌಡಿಶೀಟರ್ ಮನೆಯಲ್ಲಿ ಬರೋಬ್ಬರಿ 3 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಈ ನಗದಿನ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಐಜಿಪಿ ಮತ್ತು ಡಿಐಜಿ ನೇತೃತ್ವದಲ್ಲಿ ‘ಆಂಟಿ ರೌಡಿ ಸ್ಕ್ವಡ್’’ ರಚನೆ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಕ್ರೈಂ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಐಜಿಪಿ ಮತ್ತು ಡಿಐಜಿ ಅವರ ನೇರ ನೇತೃತ್ವದಲ್ಲಿ ಎಸ್ ಪಿ, ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್‘ ಒಳಗೊಂಡಂತೆ ಆಂಟಿ ರೌ,ಡಿ ಸ್ಕ್ವಾಡ್” (Anti-Rowdy squad) ಅನ್ನು ರಚಿಸಲಾಗಿದೆ. ರೌಡಿಶೀಟರ್‌ಗಳ ಸಕಲ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡುವುದು ಮತ್ತು ಅವರನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡುವುದು ಈ ಸೆಲ್‌ನ ಮುಖ್ಯ ಉದ್ದೇಶವಾಗಿದೆ.

ರೌಡಿಶೀಟರ್‌ಗಳು ತಮ್ಮ ಮೇಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು.

ಅವರ ಮೇಲಿರುವ ಹಳೆಯ ಕೇಸುಗಳು ಮತ್ತು ಸದ್ಯ ದಾಖಲಾಗಿರುವ ಆರೋಪಗಳ ಹಿನ್ನೆಲೆಯನ್ನು ಕೂಲಂಕಷವಾಗಿ ಮರುಪರಿಶೀಲನೆ ನಡೆಸುವುದು.

ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮತ್ತೆ ಕೈಹಾಕದಂತೆ ಅವರ ಒಟ್ಟಾರೆ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವುದು.

ಇಂದಿನ ಈ ದಿಢೀರ್ ಕಾರ್ಯಾಚರಣೆಯು ಗಂಗಾವತಿ ನಗರದ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದ್ದರೆ, ಅಪರಾಧ ಜಗತ್ತಿನಲ್ಲಿ ತೊಡಗಿರುವವರಿಗೆ ಪೊಲೀಸ್ ಇಲಾಖೆ ಖಡಕ್ ಸಂದೇಶ ರವಾನಿಸಿದಂತಾಗಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...