Home Sports ಕ್ರಿಕೆಟ್ ಆಟದಲ್ಲಿ ಹೇರಳವಾದ ಅವಕಾಶಗಳಿವೆ ಉತ್ತಮ‌ ತರಬೇತಿ ಪಡೆಯಿರಿ: ಡಿವೈಎಸ್ಪಿ. ಮುತ್ತಣ್ಣ ಸವರಗೋಳ.
Sportsಸುದ್ದಿ

ಕ್ರಿಕೆಟ್ ಆಟದಲ್ಲಿ ಹೇರಳವಾದ ಅವಕಾಶಗಳಿವೆ ಉತ್ತಮ‌ ತರಬೇತಿ ಪಡೆಯಿರಿ: ಡಿವೈಎಸ್ಪಿ. ಮುತ್ತಣ್ಣ ಸವರಗೋಳ.

Share
Share

ಮರ್ಚೆಡ್ ಡೇಸ್ ಸುದ್ದಿ.

ಕೊಪ್ಪಳ : ನಗರದ ದದೆಗಲ್ ರಸ್ತೆಯ ಜಿಲ್ಲಾ ಕ್ರೀಡಾಂಗಣ ಕೊಪ್ಪಳ ಕ್ರಿಕೆಟ್ ಕ್ಲಬ್ ನಿಂದ ನಡೆದಿ ಎರಡು ತಿಂಗಳ ಬೇಸಿಗೆ ಶಿಬರದ ಸಮಾರೋಪ ಸಮಾರಂಭ ಜರುಗಿತು..

ಈ ಸಮಾರಂಭವನ್ನು ನಗರದ ಶಿಲ್ಪಾ ಗ್ರ್ಯಾಂಡ್ ಹತ್ತಿರ ಇರುವ ಗ್ರೀನ್ ಟರ್ಫ್ ನಲ್ಲಿ ಆಯೋಜಿಸಲಾಗಿತ್ತು, ಸಮಾರಂಭವನ್ನು ಡಿವೈಎಸ್ಪಿ ಮುತ್ತಣ್ಣ ಸವರಗೋಳ ಉದ್ಘಾಟಿಸಿ ಮಾತನಾಡಿದರು. ದೈಹಿಕ ಹಾಗೂ ಮಾನಸಿಕವಾಗಿ ನಾವು ಸಧೃಡವಾಗಿರಬೇಕಾದರೆ ಸ್ಪೋರ್ಟ್ಸ್ ಗಳಲ್ಲಿ ತೊಡಗಿಸಿಕೊಳ್ಳಬೇಕು,

ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ,

ಆರೋಗ್ಯಕ್ಕೆ ಸ್ಪೋರ್ಟ್ಸ್ ಅಷ್ಟೇ ಮುಖ್ಯ, ಕೆಲವರಿಗೆ ಶಿಕ್ಷಣದಲ್ಲಿ ಆಸಕ್ತಿ ಇದ್ದರೆ, ಕೆಲವರಿಗೆ ಸ್ಪೋರ್ಟ್ಸ್ ಲ್ಲಿ ಇರುತ್ತೆ, ಎಲ್ಲರೂ ಐಎಎಸ್, ಐಪಿಎಸ್, ಡಾಕ್ಟರ್, ಇಂಜಿನಿಯರ್ ಆಗಲೂ ಆಗುವುದಿಲ್ಲ,‌ ಸ್ಪೋರ್ಟ್ಸ್ ಲ್ಲಿ ಕೂಡ ಒಳ್ಳೆ ಹೆಸರು ಮಾಡಿರುವ ನಿದರ್ಶನಗಳಿವೆ, ಪಾಲಕರು ಸಹ ಮಕ್ಕಳಿಗೆ ಕೇವಲ ಓದುವುದಕ್ಕೆ ಒತ್ತಡ ಹಾಕದೆ ಅವರನ್ನು ಕ್ರೀಡೆಗಳಲ್ಲಿ ತೊಡುಗುವಂತೆ ಮಾಡಬೇಕು. ಮಾನಸಿಕವಾಗಿ ಸಧೃಡವಾಗಿರಬೇಕಾದರೆಸ್ಪೋರ್ಟ್ಸ್ಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ಅಗತ್ಯ. ಕ್ರಿಕೆಟ್ ಲ್ಲಿ ಇತ್ತೇಚೆಗೆ ಸಾಕಷ್ಟು ಪ್ರತಿಭೆಗಳ ಬರುತ್ತಿದ್ದಾರೆ. ಅವಕಾಶಗಳು ಸಹ ಇಬೆ. ಉತ್ತಮ ತರಬೇತಿ ಪಡೆದು ನೀವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ. ಎಡಿ .ವಿಠಲ ಜಾಬಗೌಡರ್ ಮಾತ್ನಾಡಿ, ಕ್ರೀಡಾ ಇಲಾಖೆ ವತಿಯಿಂದಲೂ ಈ ಬಾರಿ ಬೇಸಿಗೆ ಹಲವು ತರಬೇತಿಗಳನ್ನು ಶಿಬರಗಳನ್ನು ಹಮ್ಮಿಕೊಳ್ಳಲಾಗಿತ್ತು, ಅದೇ ರೀತಿ ಪ್ರತಿ ವರ್ಷ ಕೊಪ್ಪಳ‌ ಕ್ರಿಕೆಟ್ ಕ್ಲಬ್ ವತಿಯಿಂದ ಫೈರೋಜ್ ಅಲಿ ಅವರು ಬೇಸಿಗೆ ಕ್ರಿಕೆಟ್ ತರಬೇತಿಯನ್ನು ಹಮ್ಮಿಕೊಳ್ಳುತ್ತಾರೆ. ಇತ್ತೀಚೆಗೆ ಕ್ರಿಕೆಟ್ ಬೆಳೆಯುತ್ತಿರುವ ಕ್ರೀಡೆ ಸಾಕಷ್ಟು ಅವಕಾಶಗಳು ಇವೆ, ಆರೋಗ್ಯಕ್ಕೆ ಕ್ರೀಡೆ ಬಹಳ ಮುಖ್ಯ, ಓದಿನ‌ ಜೊತೆಗೆ, ಕ್ರಿಕೆಟ್, ಹಾಕಿ, ಶೆಟಲ್, ಈಜು, ವಾಲಿಬಾಲ್, ಬಾಸ್ಕೆಟ್ ಬಾಲ್ ಹೀಗೆ ಒಂದಲ್ಲ ಒಂದು ಕ್ರೀಡೆಯನ್ನು ಮೈಗೂಡಿಸಿಕೊಂಡು ಆರೋಗ್ಯವಾಗಿರಬೇಕು ಎಂದರು.

ಬೇಸಿಗೆ ಶಿಬರದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದವರಿಗೆ ಉತ್ತಮ ಬ್ಯಾಟ್ಸ್‌ಮನ್‌, ಬೌಲರ್, ಫಿಲ್ಡರ್ ಪ್ರಶಸ್ತಿಗಳನ್ನು ನೀಡಲಾಯಿತು, ಶಿಬರದಲ್ಲಿ ಭಾಗವಹಸಿದ್ದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.

ಸಮಾರಂಭದಲ್ಲಿ ಕೊಪ್ಪಳ ಕ್ರಿಕೆಟ್ ತರಬೇತಿದಾರ ಫೈರೋಜ್ ಅಲಿ ಪ್ರಸ್ತಾವಿಕ ಮಾತ್ನಾಡಿದರು.

ಅತಿಥಿಗಳಾಗಿ ಖಲೀಲ‌ ಪಟೇಲ್, ಕೆಪಿಟಿಸಿಎಲ್ ನೌಕರ ರಾಘವೇಂದ್ರ ಬಡಿಗೇರ, ಪಾಲಕರಾದ ಮುದಿಯಪ್ಪ, ಸಹಾಯಕ ತರಬೇತಿದಾರ ದರ್ಶನ ಭಾಗವಹಸಿದ್ದರು.

 

 

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...