ಮರ್ಚೆಡ್ ಡೇಸ್ ಸುದ್ದಿ.
ಶಿಲಾಂಗ್: ಮೇಘಾಲಯದ ಶಿಲಾಂಗ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ‘ಜೀರೋ ಟ್ರಾಫಿಕ್’ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದು, ಈ ಘಟನೆಯು ದೇಶದಲ್ಲಿ ‘ವಿಐಪಿ ಸಂಸ್ಕೃತಿ’ಯ ವಿರುದ್ಧ ಜನರ ಆಕ್ರೋಶಕ್ಕೆ ಸಾಕ್ಷಿಯಾಗಿದೆ.
ಅಮಿತ್ ಶಾ ಅವರ ಭೇಟಿಯ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಜೀರೋ ಟ್ರಾಫಿಕ್ ವ್ಯವಸ್ಥೆಯಿಂದಾಗಿ, ರಸ್ತೆಯಲ್ಲಿ ಸಾಲುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರೋಸಿಹೋದ ಜನರು ಪ್ರತಿಭಟನೆಯ ರೂಪದಲ್ಲಿ ತಮ್ಮ ವಾಹನಗಳ ಹಾರ್ನ್ ಮೊಳಗಿಸಲು ಪ್ರಾರಂಭಿಸಿದರು. ಓರ್ವ ವ್ಯಕ್ತಿಯಿಂದ ಪ್ರಾರಂಭವಾದ ಈ ಹಾರ್ನ್ ಸದ್ದು ಕ್ಷಣಾರ್ಧದಲ್ಲೇ ವ್ಯಾಪಕವಾಗಿ ಹರಡಿ, ಅಲ್ಲಿ ನೆರೆದಿದ್ದ ನೂರಾರು ಜನರು ಸಾಮೂಹಿಕವಾಗಿ ಹಾರ್ನ್ ಮೊಳಗಿಸುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನರ ಆಕ್ರೋಶ ಮತ್ತು ನಿರಂತರ ಹಾರ್ನ್ ಸದ್ದಿಗೆ ಮಣಿದ ಅಮಿತ್ ಶಾ, ಅಂತಿಮವಾಗಿ ತಮ್ಮ ಪ್ರಯಾಣದ ಮಾರ್ಗವನ್ನು ಬದಲಾಯಿಸಿಕೊಳ್ಳಬೇಕಾಯಿತು. ಈ ಘಟನೆಯನ್ನು ಉಲ್ಲೇಖಿಸಿರುವ. ನ .ಜಗದೀಶ್’ ಎಂಬವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದ ಅಹಂ ಮೆರೆಯುವ ನಾಯಕರಿಗೆ ಜನರು ಹೇಗೆ ಪಾಠ ಕಲಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಟೀಕಿಸಿದ್ದಾರೆ.