ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು ಜೂನ್ 05 (ಕರ್ನಾಟಕ ವಾರ್ತೆ): ರಾಯಚೂರು ತಾಲೂಕಿನಾದ್ಯಂತಹ ಪೆಟ್ರೋಲ್ ಬಂಕ್ಗಳಲ್ಲಿ ಹಾಗೂ ಗ್ಯಾಸ್ ಏಜೆನ್ಸಿಗಳಲ್ಲಿ ಸಾಕಷ್ಟು ಮಟ್ಟದ ದಾಸ್ತಾನು ಸೌಲಭ್ಯವಿದ್ದು, ಸಾರ್ವಜನಿಕರು, ಗ್ರಾಹಕರು, ವಾಹನ ಮಾಲೀಕರು ಯಾವುದೇ ರೀತಿಯಾಗಿ ಆತಂಕಪಡದAತೆ ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಅವರು ತಿಳಿಸಿದ್ದಾರೆ.
ಯಾರಾದರೂ ಪೆಟ್ರೋಲ್, ಡೀಸೆಲ್ ಬಂಕ್ ಅಥವಾ ಗ್ಯಾಸ ಏಜೇನ್ಸಿ ಮಾಲಿಕರು ಅಥವಾ ವಿತರಕರು ಎಲ್.ಪಿ.ಜಿ ಗ್ಯಾಸ್, ಪೆಟ್ರೋಲ್ ಅಥವಾ ಡೀಸೆಲ್ಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ಏಜೇನ್ಸಿ ಮಾಲಿಕರು ಅಥವಾ ವಿತರಕರ ವಿರುದ್ದ ಶಿಸ್ತು ಕ್ರಮ ಕೈಗೊಂಡು ಮಾರಾಟ ಪರವಾನಗಿಯನ್ನು ರದ್ದು ಮಾಡಲಾಗುವುದು.
ಪೆಟ್ರೋಲ್ ಬಂಕ್ ಅಥವಾ ಗ್ಯಾಸ್ ಏಜೇನ್ಸಿ ಮಾಲಿಕರು/ವಿತರಕರು ನೋ ಸ್ಟಾಕ್ ಎಂದು ಬಿತ್ತಿ ಪತ್ರವನ್ನು ಅಂಟಿಸಬಾರುದು. ಮುಂಜಾಗ್ರತವಾಗಿ ದಾಸ್ತಾನು ಸಂಗ್ರಹಣೆಯನ್ನು ಪರಿಗಣಿಸಿ ಎಲ್.ಪಿ.ಜಿ ಗ್ಯಾಸ್/ ಪೆಟ್ರೋಲ್, ಡೀಸೆಲ್ ಖರೀದಿ ಮಾಡಿ ಸಾರ್ವಜನೀಕರಿಗೆ ಮಾರಾಟ ಮಾಡುವುದು.
ಪೆಟ್ರೋಲ್ ಅಥವಾ ಡೀಸೆಲ್ ನಲ್ಲಿ ಯಾವುದೇ ರೀತಿ ಅಭಾವ ಇರುವುದಿಲ್ಲ. ಯಾವುದೇ ರೀತಿಯಾಗಿ ಕೃತಕವಾಗಿ ಅಭಾವ ಸೃಷ್ಟಿಸುವ ಸಾಮಾಜಿಕ ಜಾಲತಾಣದಲ್ಲಿ ಬರುವಂತಹ ಸಂದೇಶಗಳಿಗೆ ಕಿವಿಕೊಡದೇ ನಿಶ್ಚಿಂತೆಯಾಗಿ ಇರಬೇಕೆಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಅವರು