Home ಸಾಹಿತ್ಯ ಮತ್ತು ಸಂಗೀತ ಕಾಲ ಎಷ್ಟೇ ಬದಲಾದರು ಬೇಡಿಕೆ ಕಡಿಮೆಯಾಗದ ಸಂಗೀತದ ಮೋಡಿ ಮಾಂತ್ರಿಕ: (ಬಿರುದು) ಇಸೈಜ್ಞಾನಿ ಇಳಿಯರಾಜ
ಸಾಹಿತ್ಯ ಮತ್ತು ಸಂಗೀತಸುದ್ದಿ

ಕಾಲ ಎಷ್ಟೇ ಬದಲಾದರು ಬೇಡಿಕೆ ಕಡಿಮೆಯಾಗದ ಸಂಗೀತದ ಮೋಡಿ ಮಾಂತ್ರಿಕ: (ಬಿರುದು) ಇಸೈಜ್ಞಾನಿ ಇಳಿಯರಾಜ

Share
Share

 

ಮರ್ಚೆಡ್ ಡೇಸ್ ವಿಶೇಷ ಲೇಖನ.

“ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು        ಹೇಳಿದಂತೆ…”

ಈ ಸಾಲುಗಳನ್ನು ಕೇಳಿದೊಡನೆ ಮನಸ್ಸಿನಾಳದಲ್ಲಿ ಒಂದು ತೆಳುವಾದ ನೋವು, ಮರೆಯಲಾಗದ ನೆನಪಿನ ತೆರೆಗಳು ಒಂದೇ ಕ್ಷಣಕ್ಕೆ ಮೈದಳೆಯುತ್ತವೆ.

ಕನ್ನಡದ ಮೇರುನಟ ಶಂಕರ್ ನಾಗ್ ಅಭಿನಯದ ‘ಗೀತಾ’ ಚಿತ್ರದ ಈ ಹಾಡು ಕೇವಲ ಒಂದು ಧ್ವನಿಯಲ್ಲ; ಅದು ವಿರಹದ ಪರಾಕಾಷ್ಠೆ. ದಶಕಗಳೇ ಉರುಳಿದರೂ, ಇಂದಿಗೂ ಎಷ್ಟೋ ಮಂದಿಯ ಮನಸ್ಸಿನ ಗಾಯಗಳಿಗೆ ಮದ್ದಾಗಿ, ಮತ್ತೆ ಮತ್ತೆ ಕೇಳಬೇಕೆನಿಸುವ ಮಾದಕ ಸಂಗೀತವಿದು.

ಈ ಅದ್ಭುತ ಲೋಕವನ್ನು ಸೃಷ್ಟಿಸಿದವನೇ ದಕ್ಷಿಣ ಭಾರತದ ಸಂಗೀತ ಮಾಂತ್ರಿಕ, ಮಧುರ ಭಾವನೆಗಳ ಅಧಿಪತಿ ಇಳಯರಾಜ.

ಸಂಗೀತದ ಅಕ್ಷರಗಳನ್ನು ಮೀರಿ, ಭಾಷೆಯ ಗಡಿಗಳನ್ನು ದಾಟಿ ನೇರವಾಗಿ ಹೃದಯಕ್ಕೆ ನಾಟುವ ಶಕ್ತಿ ಇಳಯರಾಜ ಅವರ ಸಂಗೀತಕ್ಕಿದೆ. ಅವರು ಸ್ವರಗಳನ್ನು ಜೋಡಿಸುವುದಿಲ್ಲ, ಬದಲಾಗಿ ಭಾವನೆಗಳನ್ನು ಹೆಣೆಯುತ್ತಾರೆ. ‘ಗೀತಾ’ ಚಿತ್ರದಲ್ಲಿನ ಆ ವಿರಹಗೀತೆಯನ್ನೇ ಗಮನಿಸಿ; ಅಲ್ಲಿನ ವಾದ್ಯಗಳ ಮೌನ ಕೂಡ ಮಾತನಾಡುತ್ತದೆ. ನಾಯಕ ಮತ್ತು ನಾಯಕಿ ನಾಟಕ ದೃಶ್ಯದ ಮೂಲಕ ಅಂತರಾಳದ ವೇದನೆಯನ್ನು, ಪ್ರೇಮಿಗಳಿಬ್ಬರ ಅಗಲಿಕೆಯನ್ನು ಅಷ್ಟೇ ತೀವ್ರತೆಯಿಂದ ಸಂಗೀತದಲ್ಲಿ ಹಿಡಿದಿಟ್ಟಿರುವ ಇಳಯರಾಜ ಅವರ ಸಾಮರ್ಥ್ಯ ಅಪ್ರತಿಮವಾದುದು.

ಇಳಯರಾಜ ಅವರ ಸಂಗೀತದ ವಿಶೇಷತೆಯೇ ಅಂದು—ಇಂದು ಎಂದಿಗೂ ಹಳೆಯದಾಗುವುದಿಲ್ಲ. ತಾಂತ್ರಿಕತೆ ಎಷ್ಟೇ ಬದಲಾದರೂ, ಡಿಜಿಟಲ್ ಯುಗದಲ್ಲಿ ಹೊಸ ಹೊಸ ಶಬ್ದಗಳು ಬಂದರೂ, ಅವರ ರಾಗಗಳಲ್ಲಿರುವ ‘ಪ್ಯೂರಿಟಿ’ (ಶುದ್ಧತೆ) ಮತ್ತು ಅಚ್ಚ ಹಸಿರಾದ ಭಾವನೆಗಳು ಇಂದಿಗೂ ಅಜರಾಮರ. ಅವರ ಹಾಡುಗಳನ್ನು ಕೇಳುವಾಗ ನಾವು ಯಾವುದೋ ಒಂದು ಕಾಲದ ನೆನಪಿನ ಅಂಗಳದಲ್ಲಿ ವಿಹರಿಸಿದಂತೆ. ಆ ಹಾಡು ನಮಗೆ ಅಂದು ನಾವು ಅನುಭವಿಸಿದ್ದ ದುಃಖವನ್ನೋ, ಖುಷಿಯನ್ನೋ, ಅಥವಾ ಕಳೆದುಕೊಂಡ ಕ್ಷಣಗಳನ್ನೋ, ನೆನಪಿಸಿ ಕಣ್ಣು ತೇವವಾಗಿಸುತ್ತದೆ. ಅದನ್ನೇ ನಾವು ‘ಸಂಗೀತದ ಶಕ್ತಿ’ ಎಂದು ಕರೆಯುವುದು.

ಸಂಗೀತ ಸಾಗರದಲ್ಲಿ ತಮ್ಮದೇ ಆದ ಅಲೆಗಳನ್ನು ಸೃಷ್ಟಿಸಿರುವ ಇಳಯರಾಜ ಅವರು, ದಕ್ಷಿಣ ಭಾರತದ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಕೇವಲ ಸಂಗೀತ ನಿರ್ದೇಶಕರಲ್ಲ, ಅವರು ಲಕ್ಷಾಂತರ ಜನರ ಭಾವನೆಗಳಿಗೆ ದನಿ ನೀಡಿದ ಕವಿ. ಮೌನದಲ್ಲಿಯೂ ಮಧುರತೆಯನ್ನು ಹುಡುಕುವ ಇವರ ಶೈಲಿ, ಕೇಳುಗನನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಇದೇ ತಿಂಗಳು ಜೂನ್ 2ರಂದು ಹುಟ್ಟುಹಬ್ಬ ಆಚರಿಸಿಕೊಂಡ (ನಿಜವಾಗಲೂ ಅವರ ಹುಟ್ಟಿದ ದಿನ ಇರುವದು ಜೂನ್ 3 ರಂದು ಅದೇ ದಿನ ಎಂ. ಕರುಣಾನಿಧಿಯವರ ಹುಟ್ಟಿದ ದಿನ ಇರುವುದರಿಂದ ಅವರ ಮೇಲಿರುವ ಪ್ರೀತಿಗಾಗಿ ಒಂದು ದಿನ ಮುಂಚಿತವಾಗಿ ಆಚರಿಸಿಕೊಳ್ಳುತ್ತಾರೆ ) ಈ ಸಂಗೀತ ಮಾಂತ್ರಿಕನಿಗೆ ನುಡಿ ನಮನ ಸಲ್ಲಿಸುತ್ತಾ, ಅವರು ಸೃಷ್ಟಿಸಿದ ಆ ಅತೀಂದ್ರಿಯ ಲೋಕದ ಹಾಡುಗಳನ್ನು ಮತ್ತೆ ಕೇಳುತ್ತಾ, ಆ ನೆನಪಿನ ಸುರುಳಿಯಲ್ಲಿ ಕಳೆದುಹೋಗುವುದು ಸಂಗೀತ ಪ್ರೇಮಿಗಳಾದ ನಮಗೆ ದೊರಕಿರುವದೆ ದೊಡ್ಡ ಸೌಭಾಗ್ಯ

ಲೇಖಕರು.

ತಾಯಪ್ಪ ಮರ್ಚಡ್

ಪತ್ರಕರ್ತರು ಗಂಗಾವತಿ.

 

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...