ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತದೆ. ಸಮಾಜದಲ್ಲಿ ನಡೆಯುವ ಘಟನೆಗಳನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಆದ್ದರಿಂದ ಪತ್ರಿಕೋದ್ಯಮ ಪದವಿ ಮಾಡುವುದು ಕೇವಲ ಉದ್ಯೋಗ ಪಡೆಯುವುದಕ್ಕೆ ಮಾತ್ರವಲ್ಲ ಸಮಾಜ ಸೇವೆ ಮಾಡುವ ಒಂದು ಮಹಾನ್ ಅವಕಾಶವೂ ಆಗಿದೆ.
ಪತ್ರಿಕೋದ್ಯಮ ಪದವಿಯನ್ನು ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ ಉತ್ತಮವಾಗುತ್ತದೆ ಸ್ಪಷ್ಟವಾಗಿ ಮಾತನಾಡುವುದು ಸರಳವಾಗಿ ಬರೆಯುವುದು ಮತ್ತು ಜನರೊಂದಿಗೆ ಆತ್ಮವಿಶ್ವಾಸದಿಂದ ಸಂಪರ್ಕ ಸಾಧಿಸುವ ಸಾಮರ್ಥ್ಯ ಬೆಳೆಯುತ್ತದೆ ಇವು ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ಸಹ ಉಪಯೋಗಕ್ಕೆ ಬರುತ್ತದೆ.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ದೇಶದ ರಾಜಕೀಯ ಆರ್ಥಿಕತೆ ಸಂಸ್ಕೃತಿ ವಿಜ್ಞಾನ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಆಳವಾದ ಜ್ಞಾನ ದೊರೆಯುತ್ತದೆ ಇದರಿಂದ ಸಮಾಜದ ಬಗ್ಗೆ ಜಾಗೃತಿ ಮತ್ತು ಹೊಣೆಗಾರಿಕೆಯ ಮನೋಭಾವ ಹೆಚ್ಚಾಗುತ್ತದೆ ಸತ್ಯವನ್ನು ಹುಡುಕುವ ಗುಣ ಹಾಗೂ ವಿಮರ್ಶಾತ್ಮಕ ಚಿಂತನೆ ಬೆಳೆಸುವಲ್ಲಿ ಈ ಪದವಿ ಮಹತ್ವದ ಪಾತ್ರವಹಿಸುತ್ತದೆ.
ಇಂದು ಮಾಧ್ಯಮ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ದೂರದರ್ಶನ ಪತ್ರಿಕೆ ರೇಡಿಯೋ ಡಿಜಿಟಲ್ ಮೀಡಿಯಾ ಸಾಮಾಜಿಕ ಜಾಲತಾಣಗಳು ಮತ್ತು ಆನ್ಲೈನ್ ಸುದ್ದಿವಾಹಿನಿಗಳಲ್ಲಿ ಪತ್ರಿಕೋದ್ಯಮ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶಗಳಿವೆ ವರದಿಗಾರ ಸುದ್ದಿ ವಾಚಕ ಸಂಪಾದಕ ವಿಷಯ ಬರಹಗಾರ ಛಾಯಾಗ್ರಾಹಕ ಮತ್ತು ಡಿಜಿಟಲ್ ಮೀಡಿಯಾ ತಜ್ಞನಂತಹ ಅನೇಕ ವೃತ್ತಿಗಳನ್ನು ಆಯ್ಕೆ ಮಾಡಬಹುದು
ಪತ್ರಿಕೋದ್ಯಮ ಪದವಿ ವ್ಯಕ್ತಿತ್ವ ವಿಕಾಸಕ್ಕೂ ಸಹಕಾರಿ ಸಮಯಪಾಲನೆ ಜವಾಬ್ದಾರಿ ತ್ವರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಹ ಪತ್ರಕರ್ತರಿಗೆ ಸಾಧ್ಯವಾಗುತ್ತದೆ
ಕೊನೆಗೆ ಪತ್ರಿಕೋದ್ಯಮ ಪದವಿ ಜ್ಞಾನ ಕೌಶಲ್ಯ ಮತ್ತು ಸಮಾಜ ಸೇವೆಯ ಸಂಯೋಜನೆಯಾಗಿದೆ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವ ಧೈರ್ಯವನ್ನು ಈ ಶಿಕ್ಷಣ ನೀಡುತ್ತದೆ. ಆದ್ದರಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುವ ಯುವಕರಿಗೆ ಪತ್ರಿಕೋದ್ಯಮ ಪದವಿ ಅತ್ಯಂತ ಉಪಯುಕ್ತ ಮತ್ತು ಗೌರವಯುತ ಆಯ್ಕೆಯಾಗಿದೆ.
ಪತ್ರಿಕೋದ್ಯಮ (Journalism) ಕೋರ್ಸ್ ಮಾಡಿದವರಿಗೆ ಮಾಧ್ಯಮ ಸಂವಹನ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಅನೇಕ ಉದ್ಯೋಗಾವಕಾಶಗಳಿವೆ. ಪ್ರಮುಖ ಅವಕಾಶಗಳ ಪಟ್ಟಿ ಇಲ್ಲಿದೆ
1)ಸುದ್ದಿ ಮಾಧ್ಯಮ ಕ್ಷೇತ್ರ
ವರದಿಗಾರ (Reporter)
ಸುದ್ದಿ ನಿರೂಪಕ (News Anchor)
ಉಪಸಂಪಾದಕ (Sub-editor)
ಸಂಪಾದಕ (Editor)
ವಿಶೇಷ ವರದಿಗಾರ (Special Correspondent)
ತನಿಖಾ ಪತ್ರಕರ್ತ (Investigative Journalist)
2) ಡಿಜಿಟಲ್ ಮೀಡಿಯಾ ಕ್ಷೇತ್ರ
ಡಿಜಿಟಲ್ ಕಂಟೆಂಟ್ ರೈಟರ್
ವೆಬ್ ಪತ್ರಕರ್ತ (Web Journalist)
ಬ್ಲಾಗರ್
ಸೋಶಿಯಲ್ ಮೀಡಿಯಾ ಮ್ಯಾನೇಜರ್
SEO ಕಂಟೆಂಟ್ ಕ್ರಿಯೇಟರ್
ಪಾಡ್ಕಾಸ್ಟ್ ನಿರ್ಮಾಪಕ
3) ಪ್ರಸಾರ ಮಾಧ್ಯಮ (Broadcast Media)
ರೇಡಿಯೋ ಜಾಕಿ (RJ)
ರೇಡಿಯೋ ನಿರ್ಮಾಪಕ
ಟಿವಿ ಕಾರ್ಯಕ್ರಮ ನಿರ್ಮಾಪಕ
ವೀಡಿಯೋ ಪತ್ರಕರ್ತ
ಕ್ಯಾಮೆರಾ ಪರ್ಸನ್
4) ಸಾರ್ವಜನಿಕ ಸಂಪರ್ಕ (Public Relations – PRO)
ಅಧಿಕಾರಿ
ಕಾರ್ಪೊರೇಟ್ ಕಮ್ಯುನಿಕೇಶನ್ ಎಕ್ಸಿಕ್ಯೂಟಿವ್
ಮಾಧ್ಯಮ ಸಂಯೋಜಕ (Media Coordinator)
ಬ್ರಾಂಡ್ ಕಮ್ಯುನಿಕೇಶನ್ ತಜ್ಞ
5) ಜಾಹೀರಾತು ಮತ್ತು ಮಾರ್ಕೆಟಿಂಗ್
ಕಾಪಿರೈಟರ್
ಜಾಹೀರಾತು ವಿಷಯ ರಚನೆಗಾರ
ಮಾರ್ಕೆಟಿಂಗ್ ಕಮ್ಯುನಿಕೇಶನ್ ಎಕ್ಸಿಕ್ಯೂಟಿವ್
ಬ್ರಾಂಡ್ ಮ್ಯಾನೇಜರ್.
6)ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು
ಮಾಹಿತಿ ಅಧಿಕಾರಿ
ಜನಸಂಪರ್ಕ ಅಧಿಕಾರಿ
ಮಾಧ್ಯಮ ಸಲಹೆಗಾರ
7)ಸ್ವತಂತ್ರ ವೃತ್ತಿ (Freelancing)
ಫ್ರೀಲಾನ್ಸ್ ಪತ್ರಕರ್ತ
ಸ್ವತಂತ್ರ ಲೇಖಕ
ಯೂಟ್ಯೂಬ್ ಸುದ್ದಿ ವಾಹಿನಿ ನಿರ್ವಹಣೆ
ಕಂಟೆಂಟ್ ಕನ್ಸಲ್ಟಂಟ್
8)ಉನ್ನತ ಶಿಕ್ಷಣ ಮತ್ತು ಸಂಶೋಧನೆ
ಮಾಧ್ಯಮ ಅಧ್ಯಾಪಕ
ಸಂಶೋಧಕ
ಮಾಧ್ಯಮ ವಿಶ್ಲೇಷಕ
ಅಗತ್ಯ ಕೌಶಲ್ಯಗಳು
ಉತ್ತಮ ಬರವಣಿಗೆ ಮತ್ತು ಸಂವಹನ ಕೌಶಲ್ಯ
ಕನ್ನಡ ಮತ್ತು ಇಂಗ್ಲಿಷ್ ಭಾಷಾ ಜ್ಞಾನ
ಸಂದರ್ಶನ ನಡೆಸುವ ಸಾಮರ್ಥ್ಯ
ಡಿಜಿಟಲ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಜ್ಞಾನ
ವೀಡಿಯೋ ಎಡಿಟಿಂಗ್ ಮತ್ತು ಕಂಟೆಂಟ್ ನಿರ್ಮಾಣ ಕೌಶಲ್ಯ.
9)ಸಿನಿಮಾ ವರದಿಗಾರ
ಹೊಸ ಸಿನಿಮಾಗಳು ಶೂಟಿಂಗ್ಗಳು ಬಿಡುಗಡೆಗಳು ಮತ್ತು ಉದ್ಯಮದ ಬೆಳವಣಿಗೆಗಳ ಬಗ್ಗೆ ವರದಿ ಮಾಡುವುದು.
ನಟರು ನಿರ್ದೇಶಕರು ಮತ್ತು ನಿರ್ಮಾಪಕರ ಸಂದರ್ಶನಗಳನ್ನು ನಡೆಸುವುದು.
10)ಸಿನಿಮಾ ವಿಮರ್ಶಕ
ಸಿನಿಮಾಗಳ ವಿಮರ್ಶೆ ಬರೆಯುವುದು.
ಕಥೆ ಅಭಿನಯ ನಿರ್ದೇಶನ ಸಂಗೀತ ಮತ್ತು ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸುವುದು.
ಪತ್ರಿಕೆಗಳು ವೆಬ್ಸೈಟ್ಗಳು ಮತ್ತು ಯೂಟ್ಯೂಬ್ ಚಾನೆಲ್ಗಳಲ್ಲಿ ಕೆಲಸ ಮಾಡುವ ಅವಕಾಶ.
11) ಮನರಂಜನಾ ಡಿಜಿಟಲ್ ಕಂಟೆಂಟ್ ಕ್ರಿಯೇಟರ್
ಸಿನಿಮಾ ಸುದ್ದಿ ರಿವ್ಯೂ ವಿಶ್ಲೇಷಣೆ ಮತ್ತು ಸೆಲೆಬ್ರಿಟಿ ಅಪ್ಡೇಟ್ಗಳ ಕುರಿತು ವಿಡಿಯೋ ಅಥವಾ ಲೇಖನಗಳನ್ನು ಸೃಷ್ಟಿಸುವುದು.
ಸಾಮಾಜಿಕ ಮಾಧ್ಯಮಗಳಲ್ಲಿ ಸ್ವತಂತ್ರ ಬ್ರ್ಯಾಂಡ್ ನಿರ್ಮಿಸಿಕೊಳ್ಳುವ ಅವಕಾಶ.
12) ಸಿನಿಮಾ ಮ್ಯಾಗಜಿನ್ ಅಥವಾ ವೆಬ್ ಪೋರ್ಟಲ್ ಸಂಪಾದಕ
ಮನರಂಜನಾ ವಿಷಯಗಳ ಯೋಜನೆ ಮತ್ತು ಸಂಪಾದನೆ.
ಬರಹಗಾರರು ಮತ್ತು ವರದಿಗಾರರ ತಂಡವನ್ನು ನಿರ್ವಹಿಸುವುದು.
13) ಪಿಆರ್ ಮತ್ತು ಮೀಡಿಯಾ ಕೋಆರ್ಡಿನೇಷನ್
ಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತು ಕಲಾವಿದರ ಪರವಾಗಿ ಮಾಧ್ಯಮ ಸಂಪರ್ಕಗಳನ್ನು ನಿರ್ವಹಿಸುವುದು.
ಪತ್ರಿಕಾಗೋಷ್ಠಿ ಪ್ರಚಾರ ಕಾರ್ಯಕ್ರಮಗಳು ಮತ್ತು ಮೀಡಿಯಾ ಕವರೆಜ್ ವ್ಯವಸ್ಥೆ ಮಾಡುವುದು.
ಹೈದರಾಬಾದ್ ಕರ್ನಾಟಕದ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕೋರ್ಸ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡದಿರುವ ಕಾರಣಗಳು.
ಹೈದರಾಬಾದ್ ಕರ್ನಾಟಕ ಪ್ರದೇಶ ಇಂದಿನ ಕಲ್ಯಾಣ ಕರ್ನಾಟಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕ್ರಮೇಣ ಅಭಿವೃದ್ಧಿಯಾಗುತ್ತಿದ್ದರೂ ಪತ್ರಿಕೋದ್ಯಮ ಕೋರ್ಸ್ಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿದೆ. ಇದಕ್ಕೆ ಹಲವು ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಕಾರಣಗಳಿವೆ.
ಮೊದಲನೆಯದಾಗಿ ಹೇಳುವುದಾದರೆ ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರು ವೈದ್ಯಕೀಯ ಇಂಜಿನಿಯರಿಂಗ್ ಸರ್ಕಾರಿ ಉದ್ಯೋಗ ಶಿಕ್ಷಕ ವೃತ್ತಿ ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಎರಡನೆಯದಾಗಿ ಪತ್ರಿಕೋದ್ಯಮದ ಕುರಿತು ಸಮರ್ಪಕ ಅರಿವಿನ ಕೊರತೆ ಇದೆ. ಅನೇಕ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶಗಳು ಡಿಜಿಟಲ್ ಮೀಡಿಯಾ, ಟಿವಿ ಮಾಧ್ಯಮ ರೇಡಿಯೋ, ಸಾರ್ವಜನಿಕ ಸಂಪರ್ಕ (PRO) ಮತ್ತು ವಿಷಯ ಬರವಣಿಗೆ (Content Writing) ಮೊದಲಾದ ಅವಕಾಶಗಳ ಬಗ್ಗೆ ಮಾಹಿತಿ ಇರುವುದಿಲ್ಲ.
ಮೂರನೆಯದಾಗಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಕೋರ್ಸ್ ಪೂರ್ಣಗೊಂಡ ತಕ್ಷಣ ಹೆಚ್ಚಿನ ಸಂಬಳ ಸಿಗುವ ಕ್ಷೇತ್ರಗಳನ್ನು ಆಯ್ಕೆ ಮಾಡುವ ಪ್ರವೃತ್ತಿ ಇರುವುದರಿಂದ ಪತ್ರಿಕೋದ್ಯಮದಂತಹ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತದೆ.
ನಾಲ್ಕನೆಯದಾಗಿ ಈ ಭಾಗದಲ್ಲಿ ಗುಣಮಟ್ಟದ ಪತ್ರಿಕೋದ್ಯಮ ಶಿಕ್ಷಣ ನೀಡುವ ಸಂಸ್ಥೆಗಳು ಮತ್ತು ಪ್ರಾಯೋಗಿಕ ತರಬೇತಿ ಸೌಲಭ್ಯಗಳು ಸೀಮಿತವಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದತ್ತ ಆಕರ್ಷಣೆ ಕಡಿಮೆಯಾಗುತ್ತದೆ.
ಐದನೆಯದಾಗಿ ಭಾಷಾ ಕೌಶಲ್ಯ ಮತ್ತು ಸಂವಹನ ಕೌಶಲ್ಯಗಳ ಬಗ್ಗೆ ಆತ್ಮವಿಶ್ವಾಸದ ಕೊರತೆಯೂ ಒಂದು ಕಾರಣವಾಗಿದೆ. ಪತ್ರಿಕೋದ್ಯಮದಲ್ಲಿ ಉತ್ತಮ ಬರವಣಿಗೆ ಭಾಷಣ ಮತ್ತು ವಿಶ್ಲೇಷಣಾ ಸಾಮರ್ಥ್ಯ ಅಗತ್ಯವಾಗಿರುವುದರಿಂದ ಕೆಲವು ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಲು ಹಿಂಜರಿಯುತ್ತಾರೆ.
ಆದಾಗ್ಯೂ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಸಾಮಾಜಿಕ ಮಾಧ್ಯಮ ಆನ್ಲೈನ್ ಸುದ್ದಿ ಪೋರ್ಟಲ್ಗಳು ಯೂಟ್ಯೂಬ್ ಮತ್ತು ಡಿಜಿಟಲ್ ಕಂಟೆಂಟ್ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಅರಿವು ಮತ್ತು ತರಬೇತಿ ನೀಡಿದರೆ ಕಲ್ಯಾಣ ಕರ್ನಾಟಕದ ಯುವಕರು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಬಹುದು.
ಹೈದರಾಬಾದ್ ಕರ್ನಾಟಕದ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕೋರ್ಸ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡದಿರುವುದಕ್ಕೆ ಅರಿವಿನ ಕೊರತೆ ಉದ್ಯೋಗ ಭದ್ರತೆ ಬಗ್ಗೆ ಇರುವ ಸಂದೇಹ ಆರ್ಥಿಕ ಪರಿಸ್ಥಿತಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆ ಪ್ರಮುಖ ಕಾರಣಗಳಾಗಿವೆ. ಇವುಗಳನ್ನು ನಿವಾರಿಸಿದರೆ ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತದೆ ಅನ್ನಬಹುದು.
ಲೇಖಕರು.
ಮೇಘರಾಜ ಎಸ್. ಪತ್ರಿಕೋದ್ಯಮ ವಿದ್ಯಾರ್ಥಿ
ಎಸ ಕೆಎನ್ ಜಿ ಕಾಲೇಜ್ ಗಂಗಾವತಿ