Home ಅಂಕಣ “ಜೂನ್ 1” – ಇದು ನಮ್ದಾ ಅಥವಾ ಎಲ್ಲರದ್ದಾ? ಹುಟ್ಟುಹಬ್ಬ ಗೊಂದಲದ ಸಾಮೂಹಿಕ ಬರ್ತಡೇ…
ಅಂಕಣಸುದ್ದಿ

“ಜೂನ್ 1” – ಇದು ನಮ್ದಾ ಅಥವಾ ಎಲ್ಲರದ್ದಾ? ಹುಟ್ಟುಹಬ್ಬ ಗೊಂದಲದ ಸಾಮೂಹಿಕ ಬರ್ತಡೇ…

Share
Share

 

 

 

ನಮಸ್ಕಾರ ಓದುಗರೇ,

ನಮ್ಮ ಜೀವನದಲ್ಲಿ ಹುಟ್ಟುಹಬ್ಬ ಅಂದ್ರೆ ಒಂದು ವಿಶೇಷ ಸಂಭ್ರಮ. ಅಮ್ಮ ಮಾಡುವ ಪಾಯಸ, ಗೆಳೆಯರ ಹಾರೈಕೆ, ಆ ದಿನದ ವಿಶೇಷ ಫೋಟೋ ಶೂಟ್… ಎಲ್ಲವೂ ನಮ್ಮದೇ ಎಂಬ ಹೆಮ್ಮೆ. ಆದರೆ, ಇತ್ತೀಚೆಗೆ ‘ಜೂನ್ 1’ ಅನ್ನೋ ದಿನಾಂಕ ನೋಡಿದ್ರೆ ಯಾರಿಗಾದರೂ ತಲೆ ತಿರುಗೋದು ಗ್ಯಾರಂಟಿ! ಯಾಕೆ ಗೊತ್ತಾ?

ಅಫಿಶಿಯಲ್ ಬರ್ತಡೆ ನಾ ಅಥವಾ ಆಫೀಸ್ ದಾಖಲೆ ಬರ್ತಡೆ ನಾ?

ಪ್ರಸ್ತುತ ಕಾಲಮಾನದಲ್ಲಿ, ಹುಟ್ಟಿದ ತಕ್ಷಣ ತಂದೆ-ತಾಯಿ, ಆಸ್ಪತ್ರೆ, ಶಾಲೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್‌… ಹೀಗೆ ಎಲ್ಲೆಲ್ಲೂ ನಿಖರವಾದ ಜನ್ಮ ದಿನಾಂಕ ದಾಖಲಾಗುತ್ತಿತ್ತು. ಆದರೆ, ಸ್ವಲ್ಪ ಹಿಂದೆ ಹಳೇ ಕಾಲದ ದಾಖಲೆಗಳ ದೃಶ್ಯವೇ ಬೇರೆ. ಅಂದಿನ ಕಾಲದ ಅನೇಕರಿಗೆ ಅಸಲಿ ಜನ್ಮದಿನ ಯಾವುದು ಅಂತ ಗೊತ್ತೇ ಇರಲಿಲ್ಲ. ಆಗ ಸರ್ಕಾರಿ ಶಾಲೆಗೆ ದಾಖಲಾತಿ ಮಾಡುವಾಗ ಆಫೀಸರ್‌ಗಳು ಸುಲಭದ ದಾರಿಯನ್ನು ಹುಡುಕುತ್ತಿದ್ದರು. ಅದೇ “ಜೂನ್ 1”!

“ಏನ್ರಿ, ಹುಟ್ಟಿದ್ದು ಯಾವಾಗ?” ಅಂದ್ರೆ, “ಗೊತ್ತಿಲ್ಲ ಸಾಹೇಬ್ರೇ” ಅಂದ ತಕ್ಷಣ, “ಸರಿ ಬಿಡಿ, ಜೂನ್ ಒಂದಕ್ಕೇ ಬರೆದುಬಿಡೋಣ” ಎಂದು ಪೆನ್ನು ತಿದ್ದುವ ಆಫೀಸರ್‌ಗಳೇ ಹೆಚ್ಚು. ಪರಿಣಾಮ? ದೇಶದ ಲಕ್ಷಾಂತರ ಜನರ ಅಧಿಕೃತ ಹುಟ್ಟುಹಬ್ಬ ಒಂದೇ ದಿನ!

ಈಗ ನೋಡಿ, ಜೂನ್ 1 ಬಂತು ಅಂದ್ರೆ ಅದೆಷ್ಟು ಜನರಿಗೆ ಹುಟ್ಟುಹಬ್ಬ! ಆ ದಿನ ವಿಶ್ ಮಾಡ್ತೀವಿ ಅಂದ್ರೆ, ಅದು ಅವರಿಗಾಗೋ ಅಥವಾ ಲಿಸ್ಟ್‌ನಲ್ಲಿರೋ ಎಲ್ಲರಿಗಾಗೋ ಅನ್ನೋದು ಅರ್ಥವಾಗಲ್ಲ. ಒಬ್ಬರಿಗೆ ವಿಶ್ ಮಾಡೋಣ ಅಂದ್ರೆ, ಇನ್ನೊಬ್ಬರು “ನನಗೂ ಇವತ್ತೇ ಹುಟ್ಟುಹಬ್ಬ” ಅಂತಾರೆ. ಫೇಸ್‌ಬುಕ್, ವಾಟ್ಸಾಪ್ ನೋಟಿಫಿಕೇಶನ್ ನೋಡಿದ್ರೆ, ಅಂದು ಇಡೀ ದೇಶವೇ ಹುಟ್ಟುಹಬ್ಬ ಆಚರಿಸುತ್ತಿರುವಂತೆ ಭಾಸವಾಗುತ್ತದೆ.

‘ಗ್ರ್ಯಾಂಡ್’ ಆಗಿ ಸೆಲೆಬ್ರೇಟ್ ಮಾಡೋಣ ಅಂದ್ರೆ ಮುಜುಗರ. “ನಿಮ್ದು ಅಸಲಿ ಹುಟ್ಟುಹಬ್ಬನಾ ಅಥವಾ ಆಫೀಸರ್ ಕೊಟ್ಟ ‘ಜೂನ್ 1’ ಹುಟ್ಟುಹಬ್ಬನಾ?” ಅಂತ ಕೇಳೋ ಧೈರ್ಯ ಯಾರಿಗಿದೆ?

ಆದರೆ ಒಂದು ವಿಷಯ ಒಪ್ಪಿಕೊಳ್ಳಲೇಬೇಕು, ಜೂನ್ 1 ರಂದು ಹುಟ್ಟಿದವರದ್ದು ಅಫಿಶಿಯಲ್ ಜೂನ್ 1 ಅದ್ಭುತ ಸಾಮೂಹಿಕ ಶಕ್ತಿ ಇದೆ. ಅಂದು ನೀವು ಒಬ್ಬರೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ದೇಶದ ದಕ್ಷ ಆಡಳಿತ ವ್ಯವಸ್ಥೆಯ ಒಂದು ಭಾಗವಾಗಿ, ಇಡೀ ಭಾರತದೊಂದಿಗೆ ಹೆಮ್ಮೆಯಿಂದ ಬರ್ತ್‌ಡೇ ಆಚರಿಸುತ್ತಿದ್ದೀರಿ. ಇದು ಯಾರಿಗೂ ಸಿಗದ ವಿಶೇಷ ಗೌರವ!

ಆದ್ದರಿಂದ, ಈ ಜೂನ್ 1 ರಂದು ಯಾರಾದರೂ ನಿಮಗೆ ವಿಶ್ ಮಾಡಿದರೆ, ಕನ್ಫ್ಯೂಸ್ ಆಗಬೇಡಿ. “ಹೌದು, ನಾನು ಸಾರ್ವಜನಿಕ ಹುಟ್ಟುಹಬ್ಬದ ಸ್ಪೆಷಲ್ ಆವೃತ್ತಿ” ಎಂದು ನಗುತ್ತಾ ಸ್ವೀಕರಿಸಿ ಅಷ್ಟೇ.

ನಿಮಗೂ, ನಿಮ್ಮ ನೆರೆಯವರಿಗೂ, ನಿಮ್ಮ ಶಾಲಾ ಶಿಕ್ಷಕ ಬರೆದುಕೊಟ್ಟ ಆ ಜೂನ್ 1ವಿಶೇಷ ದಿನಾಂಕದಂದು ಹುಟ್ಟಿದ ನಿಮ್ಮೆಲ್ಲರಿಗೂ ಸಾರ್ವಜನಿಕ ಹುಟ್ಟುಹಬ್ಬದ ಶುಭಾ

ಶಯಗಳು!

ತಾಯಪ್ಪ ಮರ್ಚೆಡ್

ಪತ್ರಕರ್ತರು ಗಂಗಾವತಿ

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...