ಅಸ್ತಮಾ (ದಮ್ಮು)ರೋಗಿಗಳಿಗಾಗಿ ದಶಕಗಳ ಉಚಿತ ಉಚಿತ ಸೇವೆ.
ಮರ್ಚೆಡ್ ಡೇಸ್ ಸುದ್ದಿ.
ವಿಶೇಷ ವರದಿ ಕೊಪ್ಪಳ:
ಕಳೆದ 55 ವರ್ಷಗಳಿಂದ ಅಸ್ತಮಾ (ದಮ್ಮು) ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ವಿತರಣೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸಮಾಜ ಸೇವೆಗೆ ಒಂದು ಮಾದರಿಯಾಗಿದೆ. ರಾಯಚೂರು ಶಿವಯ್ಯ ಶೆಟ್ಟಿಯವರ ಸ್ಮರಣಾರ್ಥವಾಗಿ ಅವರ ಕುಟುಂಬದವರು ಈ ಶ್ಲಾಘನೀಯ ಕಾರ್ಯವನ್ನು ಕೈಗೊಂಡಿದ್ದಾರೆ.
ಈ ಸೇವೆಯು ಪ್ರತಿವರ್ಷ ಜೂನ್ 8 ರಂದು ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಟಗನಹಳ್ಳಿ ಗ್ರಾಮದಲ್ಲಿ ನಡೆಯುತ್ತದೆ. ಈ ವಿಶೇಷ ಚಿಕಿತ್ಸಾ ಶಿಬಿರವು ಕೇವಲ ಸ್ಥಳೀಯರಿಗೆ ಮಾತ್ರವಲ್ಲದೆ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ರೋಗಿಗಳಿಗೆ ವರದಾನವಾಗಿದೆ.
ಒಂದೇ ಸಮಯದಲ್ಲಿ ಸಾವಿರಾರು ರೋಗಿಗಳಿಗೆ ಔಷಧವನ್ನು ನೀಡುವ ಈ ವಿಶಿಷ್ಟ ಕಾರ್ಯಕ್ರಮವು ರೋಗಿಗಳಲ್ಲಿ ಅಪಾರ ನಂಬಿಕೆಯನ್ನು ಮೂಡಿಸಿದೆ.
ಈ ವರ್ಷದ ಉಚಿತ ಔಷಧ ವಿತರಣೆಯು 08-06-2026, ಸೋಮವಾರ ಸಂಜೆ 7:39 ಗಂಟೆಗೆ ನಡೆಯಲಿದೆ. ಅಸ್ತಮಾ ರೋಗಿಗಳು ಔಷಧವನ್ನು ಪಡೆಯಲು ಆಸಕ್ತರಾಗಿದ್ದರೆ, ಕುಟಗನಹಳ್ಳಿ ಗ್ರಾಮಕ್ಕೆ ಕನಿಷ್ಠ 3 ಗಂಟೆಗಳ ಮುಂಚಿತವಾಗಿ ತಲುಪಬೇಕೆಂದು ಸೂಚಿಸಲಾಗಿದೆ.