ಮರ್ಚೆಡ್ ಡೇಸ್ ಸುದ್ದಿ
ಕನಕಗಿರಿ: ಕೇರಳದ ಹಿರಿಯ
ನಾಯಕ, ಸಿಪಿಐ(ಎಂ) ಪೊಲಿಟ್ಬ್ಯೂರೋ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ಖಂಡಿಸಿ ಸಿಪಿಐಎಂ ಕನಕಗಿರಿ ತಾಲೂಕು ಸಮಿತಿ ವತಿಯಿಂದ ಶುಕ್ರವಾರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತನಾಡಿ ಎಕ್ಸಲಾಜಿಕ್ ಪ್ರಕರಣಕ್ಕೂ ಪಿಣರಾಯಿ ವಿಜಯನ್ ಅವರಿಗೂ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿದ್ದರೂ ಕೇಂದ್ರ ಸರ್ಕಾರ ರಾಜಕೀಯ ಬೇಟೆ ಮುಂದುವರಿಸಿದೆ. ಅವರು ವೀಣಾ ಅವರ ತಂದೆ ಎಂಬ ಒಂದೇ ಕಾರಣಕ್ಕೆ ಗುರಿಯಾಗಿಸಲಾಗುತ್ತಿದೆ. ಸಿಎಂಆರ್ಎಲ್ ಡೈರಿಯಲ್ಲಿನ ಇತರರನ್ನು ಬಿಟ್ಟು ಪಿಣರಾಯಿ ಅವರನ್ನೇ ಗುರಿಯಾಗಿಸಿರುವುದು ದುರುದ್ದೇಶ ತೋರಿಸುತ್ತದೆ.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ಧ್ವನಿ ಅಡಗಿಸುತ್ತಿದೆ. ಇದರ ವಿರುದ್ಧ ದೇಶಾದ್ಯಂತ ಜನಜಾಗೃತಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ತಾಲೂಕು ಸಮಿತಿ ಮುಖಂಡರಾದ ಮಲ್ಲಪ್ಪ ಮ್ಯಾಗಡೆ, ಪರಶುರಾಮ, ನಿಂಗಪ್ಪ, ಮೌಲಾ ಹುಸೇನ್, ಹೊನ್ನೂರು ಸಾಬ್, ಹೊನ್ನಪ್ಪ ಪಾಮಣ್ಣ, ಕೆಂಚಪ್ಪ, ಶಿವು ಕಜ್ಜಿ, ವೆಂಕಟೇಶ್ ಭಾವಿಕಟ್ಟಿ, ಶಿವಕುಮಾರ್, ರಮೇಶ್ ಹೀರೆಡಂಕನಲ್ ಇದ್ದರು.