Home ಸುದ್ದಿ 13 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ: ನಾಳೆ (ನ.19) ವಿಶ್ವದಾದ್ಯಂತ ‘GTA 6’ ಗ್ರ್ಯಾಂಡ್ ಎಂಟ್ರಿ!
ಸುದ್ದಿ

13 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ: ನಾಳೆ (ನ.19) ವಿಶ್ವದಾದ್ಯಂತ ‘GTA 6’ ಗ್ರ್ಯಾಂಡ್ ಎಂಟ್ರಿ!

Share
Share

 

ಮರ್ಚೆಡ್ ಡೇಸ್ ಸುದ್ದಿ:ಬೆಂಗಳೂರು / ನವದೆಹಲಿ.
ಮಧ್ಯರಾತ್ರಿ 12 ಗಂಟೆಯಿಂದಲೇ ಭಾರತದಲ್ಲಿ ಲಭ್ಯ; ₹12,600 ಕೋಟಿ ವೆಚ್ಚದ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಡಿಯೋ ಗೇಮ್‌ಗೆ 90s ಕಿಡ್ಸ್ ಫಿದಾ!

 

ಜಗತ್ತಿನ ಗೇಮಿಂಗ್ ಪ್ರಿಯರು ಹಾಗೂ ವಿಶೇಷವಾಗಿ 90ರ ದಶಕದ ಯುವಜನತೆ 20213 ರಿಂದ ಕಳೆದ 13 ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಕ್ಷಣ ಕೊನೆಗೂ ಬಂದಿದೆ. ರಾಕ್‌ಸ್ಟಾರ್ ಗೇಮ್ಸ್ (Rockstar Games) ಸಂಸ್ಥೆಯ ಬಹುನಿರೀಕ್ಷಿತ ವಿಡಿಯೋ ಗೇಮ್ ‘ಗ್ರ್ಯಾಂಡ್ ಥೆಫ್ಟ್ ಆಟೋ VI’ (GTA 6) ನಾಳೆ, ಅಂದರೆ ನವೆಂಬರ್ 19, 2026 ರಂದು ವಿಶ್ವದಾದ್ಯಂತ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. 2013ರಲ್ಲಿ GTA 5 ಬಿಡುಗಡೆಯಾದ ಬರೋಬ್ಬರಿ 13 ವರ್ಷಗಳ ನಂತರ ಈ ಹೊಸ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಗೇಮಿಂಗ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯರಾತ್ರಿ 12:00 ಗಂಟೆಗೆ (ನವೆಂಬರ್ 19, 12:00 AM IST) ಈ ಗೇಮ್ ಆಡಲು ಲಭ್ಯವಾಗಲಿದೆ. ಸದ್ಯಕ್ಕೆ ಇದು PlayStation 5 (PS5) ಮತ್ತು ಗೇಮಿಂಗ್ ಕನ್ಸೋಲ್‌ಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಕಂಪ್ಯೂಟರ್ (PC) ಗೇಮರ್‌ಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗಿದ್ದು, ಪಿಸಿ ಆವೃತ್ತಿಯ ಬಿಡುಗಡೆ ದಿನಾಂಕವನ್ನು ಸಂಸ್ಥೆ ಇನ್ನೂ ಘೋಷಿಸಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ GTA 6 ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ $79.99 ಆಗಿದ್ದರೆ, ಅಲ್ಟಿಮೇಟ್ ಆವೃತ್ತಿಯ (Ultimate Edition) ಬೆಲೆ $99.99 ನಿಗದಿಯಾಗಿದೆ. ಅಲ್ಟಿಮೇಟ್ ಆವೃತ್ತಿಯನ್ನು ಖರೀದಿಸುವವರಿಗೆ ವಿಶೇಷ ವಾಹನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ವಿಶೇಷ ಉಡುಪುಗಳು ಮತ್ತು ಹೆಚ್ಚುವರಿ ಬೋನಸ್ ಮಿಷನ್‌ಗಳು ಲಭ್ಯವಿರಲಿವೆ.

ರಾಕ್‌ಸ್ಟಾರ್ ಗೇಮ್ಸ್ ಅಧಿಕೃತವಾಗಿ ಬಜೆಟ್ ಮೊತ್ತವನ್ನು ಬಹಿರಂಗಪಡಿಸದಿದ್ದರೂ, ಮಾರುಕಟ್ಟೆ ತಜ್ಞರ ಪ್ರಕಾರ ಈ ಗೇಮ್ ನಿರ್ಮಾಣಕ್ಕೆ ಸುಮಾರು $1 ಬಿಲಿಯನ್‌ನಿಂದ $1.5 ಬಿಲಿಯನ್ (ಸುಮಾರು ₹8,400 ಕೋಟಿಯಿಂದ ₹12,600 ಕೋಟಿ) ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. 4,700ಕ್ಕೂ ಹೆಚ್ಚು ನುರಿತ ತಂತ್ರಜ್ಞರು ಹಲವು ವರ್ಷಗಳ ಕಾಲ ಹಗಲಿರುಳು ಶ್ರಮಿಸಿ ಈ ಗೇಮ್ ರೂಪಿಸಿದ್ದು, ಇದು ವಿಶ್ವದ ಇತಿಹಾಸದಲ್ಲೇ ಅತಿ ಹೆಚ್ಚು ಬಂಡವಾಳ ಹೂಡಿ ನಿರ್ಮಿಸಲಾದ ಅತ್ಯಂತ ದುಬಾರಿ ವಿಡಿಯೋ ಗೇಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

GTA ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಮುಖ್ಯ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ. ಮಹಿಳಾ ಪಾತ್ರ ಲೂಸಿಯಾ ಕ್ಯಾಮಿನೋಸ್ (Lucia Caminos) ಮತ್ತು ಪುರುಷ ಪಾತ್ರ ಜೇಸನ್ ಡುವಾಲ್ (Jason Duval) ಒಟ್ಟಾಗಿ ನಡೆಸುವ ರೋಚಕ ದರೋಡೆ ಹಾಗೂ ಅಪರಾಧ ಜಗತ್ತಿನ ಕಥೆಯನ್ನು ಈ ಗೇಮ್ ಹೊಂದಿದೆ.

ಅಮೆರಿಕದ ಫ್ಲೋರಿಡಾ ಮಾದರಿಯ ‘ಲಿಯೋನಿಡಾ’ (Leonida) ಎಂಬ ಕಾಲ್ಪನಿಕ ರಾಜ್ಯದಲ್ಲಿ ಈ ಗೇಮ್ ನಡೆಯುತ್ತದೆ. ವಿಶೇಷವೆಂದರೆ, 90ರ ದಶಕದ ಮಕ್ಕಳ ನೆಚ್ಚಿನ ‘ವೈಸ್ ಸಿಟಿ’ (Vice City) ಇಲ್ಲಿ ಅತ್ಯಾಧುನಿಕ ಮತ್ತು ಹೊಸ ರೂಪದಲ್ಲಿ ಮತ್ತೆ ಕಾಣಿಸಿಕೊಂಡಿದೆ.

ಗ್ರಾಫಿಕ್ಸ್ ಮತ್ತು ಸ್ಟೋರೇಜ್: ಅತ್ಯಂತ ನೈಜವಾದ (Hyper-realistic) ಗ್ರಾಫಿಕ್ಸ್ ಹೊಂದಿರುವ ಈ ಗೇಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕನ್ಸೋಲ್‌ನಲ್ಲಿ ಸುಮಾರು 212 GB ವರೆಗೆ ಫ್ರೀ ಸ್ಪೇಸ್ (Storage) ಅಗತ್ಯವಿದೆ.

90ರ ದಶಕದಲ್ಲಿ ಜನಿಸಿದವರು ತಮ್ಮ ಬಾಲ್ಯದಲ್ಲಿ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಅಥವಾ ಮನೆಗಳಲ್ಲಿ GTA Vice City ಮತ್ತು 2004ರಲ್ಲಿ ಬಂದ GTA San Andreas (ಮುಖ್ಯ ಪಾತ್ರ CJ – Carl Johnson) ಆಡುತ್ತಾ ಬೆಳೆದವರು. ಆ ಬಾಲ್ಯದ ನೆನಪುಗಳನ್ನು ಹೊತ್ತ ಹಳೆಯ ‘ವೈಸ್ ಸಿಟಿ’ ಇದೀಗ 13 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮರಳುತ್ತಿರುವುದು 90s ಕಿಡ್ಸ್‌ಗಳಲ್ಲಿ ಎಲ್ಲಿಲ್ಲದ ಕ್ರೇಜ್ ಮತ್ತು ಭಾವನಾತ್ಮಕ ಸಂಭ್ರಮವನ್ನು ಹುಟ್ಟುಹಾಕಿದೆ.

ಮರ್ಚೇಡ್ ಡೇಸ್ ಸುದ್ದಿ.
ಸಂಪರ್ಕಿಸಿ: 7975090443 | ಇಮೇಲ್: marcheddays@gmail.com
Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...