
ಮರ್ಚೇಡ್ ಡೇಸ್ ಸುದ್ದಿ|ಗಂಗಾವತಿ.
ಹೇರೂರು:ಶರನ್ನವರಾತ್ರಿಯ ಮಂಗಳಕರ ದಿನಗಳನ್ನು ಪುರಸ್ಕರಿಸಿ ಹೇರೂರಿನ ಹಿರೇಮಠದಲ್ಲಿ 10 ದಿನಗಳ ಕಾಲ ಶ್ರೀದೇವಿಯ ಪುರಾಣ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 11 ರಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮವು ಅಕ್ಟೋಬರ್ 21 ರವರೆಗೆ ನಡೆಯಲಿದೆ.
ಪೂಜ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗುವ ಈ ಪುರಾಣ ಮಹೋತ್ಸವಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ಭಕ್ತ ಸಮೂಹಕ್ಕೆ ಹಾರ್ದಿಕ ಸ್ವಾಗತ ಕೋರಲಾಗಿದೆ. ದಸರಾ ಸೇವಾ ಸಮಿತಿ ಮತ್ತು ವೀರಶೈವ ಸೇವಾ ಸಮಾಜದ ಮುಖಂಡರಾದ ವೀರಯ್ಯ ಸ್ವಾಮಿ ಹಿರೇಮಠ ಮತ್ತು ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ.