ಮರ್ಚೇಡ್ ಡೇಸ್ ಸುದ್ದಿ|ಬೆಂಗಳೂರು.
ಬೆಂಗಳೂರು:ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಟೈಟಲ್ ಅನ್ನೇ ಬಳಸಿಕೊಂಡು, ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳ ವಿಚಾರವಾಗಿ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯದ ಪೋಸ್ಟರ್ ಬಿಡುಗಡೆ ಮಾಡಿದೆ.
ಶಿವಕುಮಾರ್ ಎಂಟರ್ಟೈನ್ಮೆಂಟ್ಸ್” ನಿರ್ಮಾಣ ಹಾಗೂ ಕೃಷ್ಣ ಬೈರೇಗೌಡ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಗುಂಡಿಗಳ ಮುಂದೆ ನಿಲ್ಲಿಸಿ ಕಾರ್ಟೂನ್ ಮಾದರಿಯಲ್ಲಿ ಚಿತ್ರಿಸಿರುವ ವಿಶಿಷ್ಟ ಪೋಸ್ಟರ್ಗಳನ್ನು ಬಿಜೆಪಿ ಸಿದ್ಧಪಡಿಸಿದೆ.
ಕೇವಲ ಪೋಸ್ಟರ್ಗೆ ಸೀಮಿತವಾಗದೆ, ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಅಣಕಿಸುವಂತೆ ವಿಶೇಷ ಹಾಡನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸಿನಿಮೀಯ ಶೈಲಿಯ ಈ ವಿಭಿನ್ನ ಅಣಕು ಅಭಿಯಾನ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದ್ದು, ಜನಸಾಮಾನ್ಯರಲ್ಲೂ ಭರ್ಜರಿ ಮನರಂಜನೆ ಮತ್ತು ಚರ್ಚೆಗೆ ಕಾರಣವಾಗಿದೆ.