Home ಸುದ್ದಿ ವಿಧಾನಸೌಧದಲ್ಲಿ ಬಿಸಿ ಬಿಸಿ ಚರ್ಚೆ ‘ಎರಡುಸಂಸಾರ’, ಹೊರಗೆ ಜನರ ಹಾಹಾಕಾರ!
ಸುದ್ದಿ

ವಿಧಾನಸೌಧದಲ್ಲಿ ಬಿಸಿ ಬಿಸಿ ಚರ್ಚೆ ‘ಎರಡುಸಂಸಾರ’, ಹೊರಗೆ ಜನರ ಹಾಹಾಕಾರ!

Share
Share
ಮರ್ಚೆಡ್ ಡೇಸ್ ಸುದ್ದಿ |ವಿಶೇಷ ವರದಿ.

ವಿಧಾನಸೌಧದಲ್ಲಿ ಮೊನ್ನೆ ಕೇಳಿಬಂದ ‘ಎರಡೆರಡು ಸಂಸಾರ’ದ ಮಾತು ಈಗ ರಾಜಕೀಯ ವಲಯದಿಂದ ಚರ್ಚೆಗೆ ಬಂದು ವಿಷಯ ಹಳ್ಳಿ ಕಟ್ಟೆ, ಚಹಾ ಅಂಗಡಿ, ನಗರದ ಹೋಟೆಲ್‌ಗಳವರೆಗೂ ಬಂದು ಕುಳಿತಿದೆ. ಸದನದಲ್ಲಿ ಹಾಸ್ಯ ಚಟಾಕಿಯೊಂದಿಗೆ ಹೇಳಿದ ವಿಷಯ; ಕ್ಷೇತ್ರದ ಜನರ ಕಣ್ಣುಗಳು ದೊಡ್ಡದಾಗಿವೆ! ಸಾಮಾನ್ಯ ಮನುಷ್ಯನಿಗೆ ಒಂದು ಸಂಸಾರ ನಿಭಾಯಿಸುವುದೇ ದೊಡ್ಡ ಕಷ್ಟಕರ ಆದರೆ ರಾಜಕೀಯ ನಾಯಕರಿಗೆ ಒಂದಕ್ಕಿಂತ ಹೆಚ್ಚು ‘ಸಂಸಾರವನ್ನು ನಿಭಾಯಿಸುವದು ಅದು ಹೇಗೆ ಎನ್ನುವ ಮಾತು ಮುನ್ನಡೆಗೆ ಬರುತ್ತಿವೆ, ಜನರ ಬಾಯಿಂದ ಬಾಯಿಗೆ ಈ ವಿಷಯ ಚರ್ಚೆಯ- ವೇದಿಕೆಯಾಗಿದೆ !

ರಾಜಕಾರಣಿಗೆ ಮತಕ್ಷೇತ್ರವೇ ಮೊದಲ ಜವಾಬ್ದಾರಿ. ಆದರೆ ಬೆಂಗಳೂರಿನ ರಾಜಕೀಯ ಬದುಕಿನ ಬಗ್ಗೆ ಕೇಳಿಬರುವ ಈ ಮಾತುಗಳ ಪ್ರಕಾರ, ಕೆಲವರ ಜೀವನದಲ್ಲಿ ‘ಕ್ಷೇತ್ರ’ಗಳ ಸಂಖ್ಯೆಯೇ ಹೆಚ್ಚಾಗಿದೆಯಂತೆ! ಒಂದು ಮನೆ ಊರಲ್ಲಿ, ಮತ್ತೊಂದು ರಾಜಧಾನಿಯಲ್ಲಿ, ಮೂರನೆಯದು ಎಲ್ಲಿದೆ ಎಂಬುದು ಜನರ ಕುತೂಹಲ. ಹೀಗೆ ಮನೆಗಳ ಲೆಕ್ಕ ಹಾಕುತ್ತಾ ಹೋದರೆ ಕೊನೆಗೆ ಮತದಾರರು ಗೆಲ್ಲಿಸಿದ ಅಸಲಿ ಕ್ಷೇತ್ರ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ! ಕ್ಷೇತ್ರದ ಜನರ ಸಮಸ್ಯೆ ಕೇಳಲು ಸಮಯ ಬೇಕು; ಆದರೆ ಇಷ್ಟು ಸಂಸಾರದ ನಡುವೆ ‘ಕ್ಷೇತ್ರ’ಗಳ ಸಮಸ್ಯೆ ಕೇಳಲು ಸಾಧ್ಯವೇ  ಎಂಬ ಮಾತು ಈಗ ಚಹಾ ಕಪ್‌ಗಳಲ್ಲಿ         ಹೋಗೆಯಾಡುತ್ತಿದೆ.

ಇನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ರಾಜಕೀಯ ಅಂಗಳದಲ್ಲಂತೂ ಇಂಥ ಕಥೆಗಳು ಕೇಳಿಬಂದಾಗ ಜನರ ಕಲ್ಪನೆಗೆ ಬ್ರೇಕ್ ಇರುವುದಿಲ್ಲ. “ಊರಲ್ಲಿ ಒಂದು, ಬೆಂಗಳೂರಲ್ಲಿ ಇನ್ನೊಂದು!” ಎಂದು ಯಾರಾದರೂ ತಮಾಷೆ ಮಾಡಿದರೆ ಸಾಕು, ಪಕ್ಕದ ಮೇಜಿನವನು ಇನ್ನೊಂದು ಕಥೆ ಸೇರಿಸುತ್ತಾನೆ. ಮದುವೆಯಾಗಿರುವುದೋ, ಇಲ್ಲವೋ, ಸಂಬಂಧವೇನೋ—ಯಾವುದಕ್ಕೂ ಖಚಿತ ದಾಖಲೆ ಇಲ್ಲ; ಆದರೆ ಗಾಸಿಪ್ ಮಾತ್ರ ಗಾಳಿಗಿಂತ ವೇಗ! ಪ್ರಶ್ನಿಸಿದರೆ ‘ಅದು ಖಾಸಗಿ ವಿಷಯ’ ಎಂಬ ಉತ್ತರ. ಸರಿ, ಖಾಸಗಿ ವಿಷಯ ಖಾಸಗಿಯೇ ಇರಲಿ; ಆದರೆ ಸಾರ್ವಜನಿಕ ಜೀವನದ ಸಮಯ ಮತ್ತು ಜವಾಬ್ದಾರಿ ಮಾತ್ರ ಸಾರ್ವಜನಿಕರದ್ದಲ್ಲವೇ ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ.

ಸಂಸಾರಗಳ ಸಂಖ್ಯೆ ಎಷ್ಟೇ ಇರಲಿ, ರಾಜಕೀಯದ ‘ಲೆಕ್ಕಾಚಾರ’ ಮಾತ್ರ ಬೇರೆ. ಆಸ್ತಿ, ವ್ಯವಹಾರ, ರಿಯಲ್ ಎಸ್ಟೇಟ್, ಬೇನಾಮಿ ಆಸ್ತಿಗಳ ಬಗ್ಗೆ ರಾಜಕೀಯ ವಲಯದಲ್ಲಿ ಕೇಳಿಬರುವ ಆರೋಪ–ಪ್ರತ್ಯಾರೋಪಗಳು ವರ್ಷಗಳಿಂದ ಜನರ ಕುತೂಹಲ ಕೆರಳಿಸುತ್ತಲೇ ಇವೆ. ಆದರೆ ದಾಖಲೆ ಇಲ್ಲದೆ ಯಾರ ಮೇಲೂ ಆರೋಪದ ಮುದ್ರೆ ಒತ್ತುವುದು ಸರಿಯಲ್ಲ. ಅಧಿಕಾರದಲ್ಲಿರುವವರು ತಮ್ಮ ಆಸ್ತಿ–ವ್ಯವಹಾರಗಳ ಬಗ್ಗೆ ಕಾನೂನುಬದ್ಧ ಪಾರದರ್ಶಕತೆ ಕಾಪಾಡಿದರೆ ಇಂಥ ಗುಲ್ಲುಗಳಿಗೆ ಅರ್ಧ ಬ್ರೇಕ್ ಬೀಳುತ್ತದೆ. ಇಲ್ಲದಿದ್ದರೆ ಒಂದು ವದಂತಿ ಮತ್ತೊಂದಕ್ಕೆ ವೇದಿಕೆಯಾಗುತ್ತಾ, ಕೊನೆಗೆ ಗಾಳಿ ಸುದ್ದಿಯಾಗಿ ಆಗಿ ರಾಜಕೀಯದ ಬೀದಿಗೆ ಇಳಿಯುತ್ತದೆ!

ಇತ್ತ ಉತ್ತರ ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವು ಭಾಗಗಳಲ್ಲಿ ಕುಡಿಯುವ ನೀರು, ನಿರುದ್ಯೋಗ, ರಸ್ತೆ, ನೀರಾವರಿ, ರೈತರ ಸಮಸ್ಯೆ, ಗ್ರಾಮೀಣ ಮೂಲಸೌಕರ್ಯ, ಸರ್ಕಾರಿ ಕಚೇರಿಗಳ ವಿಳಂಬ—ಇಂತಹ ನಿಜವಾದ ಪ್ರಶ್ನೆಗಳು ಜನರ ಮುಂದೆ ಸಾಲಾಗಿ ನಿಂತಿವೆ. ಮತದಾರರು ನಾಯಕನಿಂದ ಕೇಳುವುದು ದೊಡ್ಡ ದೊಡ್ಡ ಅರಮನೆಗಳ ಕಥೆಯಲ್ಲ; ತಮ್ಮ ಊರಿಗೆ ನೀರು ಯಾವಾಗ ಬರುತ್ತದೆ, ರಸ್ತೆ ಯಾವಾಗ ಸರಿಯಾಗುತ್ತದೆ, ಯುವಕರಿಗೆ ಕೆಲಸ ಯಾವಾಗ ಸಿಗುತ್ತದೆ ಎಂಬ ಸರಳ ಪ್ರಶ್ನೆ. ಆದ್ದರಿಂದ ಜನಪ್ರತಿನಿಧಿಗಳ ವೈಯಕ್ತಿಕ ಬದುಕಿನ ಚರ್ಚೆಗಿಂತ, ಅವರು ಜನರಿಗಾಗಿ ಎಷ್ಟು ಸಮಯ ಕೊಡುತ್ತಾರೆ ಎಂಬುದೇ ಸಾರ್ವಜನಿಕ ಜೀವನದ ನಿಜವಾದ ‘ಕ್ಷೇತ್ರ ಪರೀಕ್ಷೆ’.

ಈಗ ಹಳ್ಳಿ ಕಟ್ಟೆಯಿಂದ ವಿಧಾನಸೌಧದವರೆಗೂ ಕೇಳಿಬರುತ್ತಿರುವ ಪ್ರಶ್ನೆ ಒಂದೇ—“ಸಾಹೇಬ್ರೇ, ಕ್ಷೇತ್ರ ಎಷ್ಟೇ ಇರಲಿ; ನಮ್ಮ ಕ್ಷೇತ್ರ ಮರೆಯಬೇಡಿ!” ರಾಜಕೀಯದಲ್ಲಿ ವೈಯಕ್ತಿಕ ಬದುಕು ಖಾಸಗಿಯೇ ಸರಿ. ಆದರೆ ಮತ ಕೇಳಿ ಗೆದ್ದ ಮೇಲೆ ಜನರ ಸಮಸ್ಯೆ ಸಾರ್ವಜನಿಕ ಜವಾಬ್ದಾರಿ. ಹೀಗಾಗಿ ಸಂಸಾರ ಸಾಗರ ಎಷ್ಟೇ ದೊಡ್ಡದಾಗಿರಲಿ, ಜನರ ಮತಕ್ಷೇತ್ರವೇ ಮೊದಲ ಆದ್ಯತೆ ಆಗಬೇಕು. ಇಲ್ಲವಾದರೆ ಚಹಾ ಅಂಗಡಿಯ ಚರ್ಚೆ ನಾಳೆ ಚುನಾವಣಾ ವೇದಿಕೆಗೆ ಬಂದು ನಿಂತರೆ, ಆಗ ಕೇಳಿಬರುವುದು ಒಂದೇ ಅದು ಅಭಿವೃದ್ಧಿಯ ಚರ್ಚೆ…

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...