Home ಸುದ್ದಿ ರೈತರು ಮತ್ತು ಕುರಿಗಾಹಿಗಳಿಗೆ ಸಿಹಿಸುದ್ದಿ: ಸೈದಾಪುರದಲ್ಲಿ ನಾಳೆಯಿಂದ ಜಾನುವಾರು, ಕುರಿ-ಆಡು ಸಂತೆ ಆರಂಭ!
ಸುದ್ದಿ

ರೈತರು ಮತ್ತು ಕುರಿಗಾಹಿಗಳಿಗೆ ಸಿಹಿಸುದ್ದಿ: ಸೈದಾಪುರದಲ್ಲಿ ನಾಳೆಯಿಂದ ಜಾನುವಾರು, ಕುರಿ-ಆಡು ಸಂತೆ ಆರಂಭ!

Share
Share

 

ಮರ್ಚೆಡ್ ಡೇಸ್ ಸುದ್ದಿ|ಸೈದಾಪುರ.

ಯಾದಗಿರಿ ಜಿಲ್ಲೆಯ ಸೈದಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರು, ರೈತರು ಮತ್ತು ಕುರಿಗಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಜಾನುವಾರು, ಕುರಿ ಹಾಗೂ ಆಡುಗಳನ್ನು ಮಾರಾಟ ಮಾಡಲು ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ, ದೂರದ ಊರುಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಈ ಬಹುದಿನಗಳ ಸಮಸ್ಯೆಗೆ ಇದೀಗ ದೊಡ್ಡ ಪರಿಹಾರ ದೊರೆತಂತಾಗಿದೆ.

ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರ ನಿರಂತರ ಹೋರಾಟ ಹಾಗೂ ಆಗ್ರಹಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಪರಿಣಾಮವಾಗಿ, ನಾಳೆ ಸೆಪ್ಟೆಂಬರ್ 24ರಿಂದ ಪ್ರತಿ ಗುರುವಾರ ಸೈದಾಪುರದ ಎಪಿಎಂಸಿ ಆವರಣದಲ್ಲಿ ಅಧಿಕೃತವಾಗಿ ಕುರಿ, ಆಡು, ದನ, ಕರು, ಎತ್ತು, ಎಮ್ಮೆ ಹಾಗೂ ಕೋಳಿ ಮಾರಾಟದ ಸಂತೆ ಆರಂಭವಾಗಲಿದೆ.

ಸಂತೆ ಆರಂಭದ ಹಿನ್ನೆಲೆಯಲ್ಲಿ ಈಗಾಗಲೇ ಎಪಿಎಂಸಿ ಆವರಣದಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸ್ಥಳೀಯವಾಗಿಯೇ ಮಾರುಕಟ್ಟೆ ಸೌಲಭ್ಯ ಲಭ್ಯವಾಗುವುದರಿಂದ ರೈತರು ಮತ್ತು ವ್ಯಾಪಾರಿಗಳು ದೂರದ ಊರುಗಳ ಸಂತೆಗಳಿಗೆ ತೆರಳುವುದು ತಪ್ಪಲಿದ್ದು, ಅವರ ಸಮಯ ಮತ್ತು ಸಾರಿಗೆ ವೆಚ್ಚ ಗಣನೀಯವಾಗಿ ಉಳಿತಾಯವಾಗಲಿದೆ.

ರೈತರ ಹಾಗೂ ಕುರಿಗಾಹಿಗಳ ಕಷ್ಟವನ್ನು ಅರಿತು, ಶೀಘ್ರವಾಗಿ ಮಾರುಕಟ್ಟೆ ಆರಂಭಿಸಲು ಕ್ರಮ ಕೈಗೊಂಡ ಸಂಬಂಧಪಟ್ಟ ಮಾರುಕಟ್ಟೆ ಅಧಿಕಾರಿಗಳಿಗೆ ಉಮೇಶ ಕೆ. ಮುದ್ನಾಳ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಸುತ್ತಮುತ್ತಲಿನ ರೈತರು, ಕುರಿಗಾಹಿಗಳು ಈ ಸಂತೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.

Share
Related Articles
ಸುದ್ದಿ

ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಥಮ ವರ್ಷದ...

ಸುದ್ದಿ

ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ವರದಾನ: ಡಾ. ಕೊಂತಮ್ ಸತೀಶ್ ಅವರಿಂದ ‘ಡೆವಲಪ್‌ಮೆಂಟ್ ಎಕನಾಮಿಕ್ಸ್’ ಕೃತಿ ರಚನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಉಪನ್ಯಾಸಕರು, ಸಂಶೋಧಕರು ಹಾಗೂ ಲೇಖಕರಾದ ಡಾ. ಸತೀಶ್ ಅವರ ಶೈಕ್ಷಣಿಕ ಕೊಡುಗೆಗೆ...

ಸುದ್ದಿ

*ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಇನ್‌ವರ್ಡ್ ವ್ಯವಸ್ಥೆ ಇಲ್ಲ: ಉನ್ನತ ಮಟ್ಟದ ತನಿಖೆಗೆ ಒತ್ತಾಯ – ಜೋಗಿನ್ ರಮೇಶ್ ನಾಯಕ್*

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಸಮರ್ಪಕ...