ಸಿದ್ಧತೆ ಚುರುಕು: 41ನೇ ವಾರ್ಷಿಕ ಮಹೋತ್ಸವದ ಭಿತ್ತಿಪತ್ರ(ಪೋಸ್ಟರ್) ಅನಾವರಣ.
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ನಗರದ ಬೇರೊನಿ ಆಬಾದಿ ಮಸೀದಿ ಆವರಣದಲ್ಲಿರುವ ಐತಿಹಾಸಿಕ ಕರ್ನೂಲ್ ಸಾಹೇಬ್ ದರ್ಗಾ ಶರೀಫ್‌ನಲ್ಲಿ ಹಜರತ್ ಕರ್ನೂಲ್ ಸಾಹೇಬ್ ಅವರ 41ನೇ ವಾರ್ಷಿಕ ಉರುಸ್-ಎ-ಶರೀಫ್ ಮಹೋತ್ಸವವು ಅಕ್ಟೋಬರ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ಸಡಗರ-ಸಂಭ್ರಮದಿಂದ ಜರುಗಲಿದೆ.
ಉರುಸ್ ಅಂಗವಾಗಿ ಸೋಮವಾರ ಮಸೀದಿ ಆವರಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಅಧಿಕೃತ ಭಿತ್ತಿಪತ್ರವನ್ನು (ಪೋಸ್ಟರ್) ಬಿಡುಗಡೆಗೊಳಿಸಲಾಯಿತು. ಬೇರೊನಿ ಆಬಾದಿ ಮಸೀದಿ ಅಧ್ಯಕ್ಷ ಶಾಮಿದ್ ಮನಿಯರ್, ದರ್ಗಾ ಕಮಿಟಿ ಅಧ್ಯಕ್ಷ ತುಂಗಭದ್ರಾ ಹುಸೇನ್ ಸಾಬ್ ಹಾಗೂ ಕಾರ್ಯದರ್ಶಿ ಅನ್ವರ್ ಮನಿಯರ್ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಪೋಸ್ಟರ್ ಅನಾವರಣಗೊಳಿಸಿ ಸಿದ್ಧತೆಗಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ತುಂಗಭದ್ರಾ ಹುಸೇನ್ ಸಾಬ್ ಹಾಗೂ ಕಾರ್ಯದರ್ಶಿ ಅನ್ವರ್ ಮನಿಯರ್, “ಅಕ್ಟೋಬರ್ 2ರಿಂದ ಆರಂಭಗೊಳ್ಳುವ ಮೂರು ದಿನಗಳ ಈ ಮಹೋತ್ಸವದಲ್ಲಿ ಸಂದಲ್ ಶರೀಫ್, ವಿಶೇಷ ಪ್ರಾರ್ಥನೆ, ಖವ್ವಾಲಿ ಸೇರಿದಂತೆ ಹಲವು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ. ನಾಡಿನ ನಾನಾ ಭಾಗಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸರ್ವಧರ್ಮೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವರ್ಯರ ಕೃಪೆಗೆ ಪಾತ್ರರಾಗಬೇಕು” ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಾವಲಿ ಪೈಲ್ವಾನ್, ಹಟೇಲಿ ಭಾಷಾ, ಕೆ. ಸಾಧಿಕ್, ಸಾಹಿಲ್, ಆಯೂಬ್ ಖಾನ್, ದಾವೂದ್ ಭಾಷಾ, ಮೆಹಬೂಬ್ ಸೇರಿದಂತೆ ದರ್ಗಾ ಸಮಿತಿಯ ಸರ್ವ ಸದಸ್ಯರು, ಸಮಾಜದ ಹಿರಿಯರು ಉಪಸ್ಥಿತರಿದ್ದರು.