Home ಸುದ್ದಿ ಗಂಗಾವತಿ ನಗರಸಭೆಯ ದ್ವಂದ್ವ ನಿಲುವು: ಒಂದೇ ಜಮೀನಿನ ದಾಖಲೆಗೆ ಎರಡು ವಿಭಿನ್ನ ಹಿಂಬರಹ.
ಸುದ್ದಿ

ಗಂಗಾವತಿ ನಗರಸಭೆಯ ದ್ವಂದ್ವ ನಿಲುವು: ಒಂದೇ ಜಮೀನಿನ ದಾಖಲೆಗೆ ಎರಡು ವಿಭಿನ್ನ ಹಿಂಬರಹ.

Share
Share

ಒಮ್ಮೆ “ಕಡತ ಲಭ್ಯವಿಲ್ಲ”, ಮತ್ತೊಮ್ಮೆ ಮತ್ತೊಮ್ಮೆ “ಹಿಂದೆಯೇ ದಾಖಲೆ ನೀಡಲಾಗಿದೆ” ಎಂದು ಉಲ್ಲೇಖ; ಜಿಲ್ಲಾಡಳಿತದಿಂದ ಸಮಗ್ರ ತನಿಖೆಗೆ ಅರ್ಜಿದಾರರ ಆಗ್ರಹ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ : ಇಲ್ಲಿನ ನಗರಸಭೆ ವ್ಯಾಪ್ತಿಯ ಜಮೀನೊಂದರ ದಾಖಲೆ ನೀಡುವ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ನೀಡಿರುವ ಎರಡು ಪರಸ್ಪರ ವಿರುದ್ಧ ಹಿಂಬರಹಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಡಳಿತಾತ್ಮಕ ಗೊಂದಲ ಹಾಗೂ ಸಂಶಯಕ್ಕೆ ಎಡೆಮಾಡಿಕೊಟ್ಟಿವೆ.

ಗಂಗಾವತಿ ಗ್ರಾಮದ ಸರ್ವೆ ನಂಬರ್ 46/2 ಮತ್ತು 46/3ಕ್ಕೆ ಸೇರಿದ ವಸತಿ ವಿನ್ಯಾಸ (ಲೇಔಟ್) ಹಾಗೂ ಅದರ ಮೂಲ ಕಡತಗಳ ದೃಢೀಕೃತ ಪ್ರತಿಗಳನ್ನು ಕೋರಿ ಅರ್ಜಿದಾರ ರಮೇಶ್ ಜೋಗಿನ್ ನಾಯಕ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ನಗರಸಭೆ ನೀಡಿದ ಉತ್ತರಗಳು ಒಂದಕ್ಕೊಂದು ತಾಳೆಯಾಗದೆ ಅನುಮಾನಗಳನ್ನು ಹುಟ್ಟುಹಾಕಿವೆ.

ನಗರಸಭೆಯು 2026ರ ಜೂನ್ 29ರಂದು ನೀಡಿದ ಮೊದಲ ಹಿಂಬರಹದಲ್ಲಿ (ಸಂಖ್ಯೆ: ನಸಗಂ/ವಿನ್ಯಾಸ/33-07/2026-27), ಒಟ್ಟು 7 ಎಕರೆ 9 ಗುಂಟೆ ವಿಸ್ತೀರ್ಣದ ಈ ಜಮೀನಿನ ವಸತಿ ವಿನ್ಯಾಸದ ಕಡತವು ವಿನ್ಯಾಸ ವಿಭಾಗದಲ್ಲಿ ಲಭ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

ಆದರೆ, ಕೇವಲ ಎರಡು ತಿಂಗಳ ಅಂತರದಲ್ಲಿ, ಅಂದರೆ 2026ರ ಆಗಸ್ಟ್ 27ರಂದು ನೀಡಲಾದ ಎರಡನೇ ಹಿಂಬರಹದಲ್ಲಿ (ಸಂಖ್ಯೆ: ನಸಗಂ/ವಿನ್ಯಾಸ/34-35(08-09)/2026-27) ತದ್ವಿರುದ್ಧ ಮಾಹಿತಿ ನೀಡಲಾಗಿದೆ. ಸ.ನಂ. 46/2ಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸಂಪೂರ್ಣ ಮಾಹಿತಿಯನ್ನು ಈಗಾಗಲೇ 2025ರ ಮಾರ್ಚ್ 12 ಮತ್ತು ಸೆಪ್ಟೆಂಬರ್ 9ರಂದೇ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಜಮೀನಿನ ವಿಸ್ತೀರ್ಣದಲ್ಲೂ (3 ಎಕರೆ 24 ಗುಂಟೆ ಮತ್ತು 3 ಎಕರೆ 25 ಗುಂಟೆ) ವ್ಯತ್ಯಾಸಗಳನ್ನು ತೋರಿಸಲಾಗಿದೆ.

ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಮೊದಲು “ಕಡತವೇ ಲಭ್ಯವಿಲ್ಲ” ಎಂದಿದ್ದ ನಗರಸಭೆ, ನಂತರ “2025ರಲ್ಲೇ ದಾಖಲೆ ನೀಡಲಾಗಿದೆ” ಎಂದು ಹೇಳಿರುವುದು ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಮೂಲ ಕಡತವೇ ಇಲ್ಲದಿದ್ದರೆ 2025ರಲ್ಲಿ ಯಾವ ಆಧಾರದ ಮೇಲೆ ದಾಖಲೆಗಳನ್ನು ಒದಗಿಸಲಾಯಿತು? ಒಂದು ವೇಳೆ ಕಡತ ಅಸ್ತಿತ್ವದಲ್ಲಿದ್ದರೆ ಜೂನ್ ತಿಂಗಳಲ್ಲಿ ಅರ್ಜಿದಾರರಿಗೆ “ಕಡತ ಲಭ್ಯವಿಲ್ಲ” ಎಂದು ಹಿಂಬರಹ ನೀಡಿದ್ದು ಏಕೆ? ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

ನಗರಸಭೆಯ ಕಡತ ನಿರ್ವಹಣೆಯಲ್ಲಿ ಗಂಭೀರ ಲೋಪವಾಗಿರುವ ಶಂಕೆ ವ್ಯಕ್ತವಾಗಿದ್ದು, ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಉನ್ನತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು. ಮೂಲ ಕಡತದ ವಾಸ್ತವ ಸ್ಥಿತಿ, ಹಿಂಬರಹಗಳಲ್ಲಿನ ಗೊಂದಲ ಹಾಗೂ ವಿಸ್ತೀರ್ಣದ ವ್ಯತ್ಯಾಸದ ಬಗ್ಗೆ ದಾಖಲೆ ಆಧಾರಿತ ಸಮಗ್ರ ತನಿಖೆ ನಡೆಸಿ, ನೈಜ ದಾಖಲೆಗಳನ್ನು ಒದಗಿಸಬೇಕು ಎಂದು ಅರ್ಜಿದಾರರು ಹಾಗೂ ನಾಗರಿಕರು ಒತ್ತಾಯಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...