Home ಸುದ್ದಿ ಕೊಪ್ಪಳ: ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್‌ನಲ್ಲಿ ಅವಧಿ ಮೀರಿದ ವಸ್ತು ಪೂರೈಕೆ, ವಿದ್ಯಾರ್ಥಿಗಳ ಜೀವ ಮತ್ತು ಆರೋಗ್ಯದ ಜೊತೆ ಚೆಲ್ಲಾಟ.
ಸುದ್ದಿ

ಕೊಪ್ಪಳ: ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್‌ನಲ್ಲಿ ಅವಧಿ ಮೀರಿದ ವಸ್ತು ಪೂರೈಕೆ, ವಿದ್ಯಾರ್ಥಿಗಳ ಜೀವ ಮತ್ತು ಆರೋಗ್ಯದ ಜೊತೆ ಚೆಲ್ಲಾಟ.

Share
Share

ಮರ್ಚೇಡ್ ಡೇಸ್|ವಿಶೇಷ ವರದಿ.
 ಕಿಟ್‌ ವಿತರಣೆಯಲ್ಲಿ ವಿಳಂಬ, ಅವಧಿ ಮೀರಿದ ಮೊಟ್ಟೆ ವಿತರಣೆ; ಇಂಟರ್‌ನೆಟ್, ಶೌಚಾಲಯ ನೈರ್ಮಲ್ಯ, ಪುಸ್ತಕಗಳಿಗೂ ಕೊರತೆ

ಕೊಪ್ಪಳ : ಜಿಲ್ಲೆಯ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಬೇಕಾದ ವಸತಿ ನಿಲಯಗಳು ಇಂದಿಲ್ಲಿ ನಿರ್ಲಕ್ಷ್ಯದ ನಿಲುವಿಗೆ ಸಾಕ್ಷಿಯಾಗಿದೆ. ಕೊಪ್ಪಳ ನಗರದ ಹೇಮರೆಡ್ಡಿ ಮಲ್ಲಮ್ಮ ಗುಡಿ ಸಮೀಪದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ (MWD-373) ಮೂಲಭೂತ ಸೌಲಭ್ಯಗಳು ತೀರಾ ಹದಗೆಟ್ಟಿದ್ದು, ಕಳಪೆ ಮಟ್ಟದ ವ್ಯವಸ್ಥೆಯ ನಡುವೆ ವಿದ್ಯಾರ್ಥಿಗಳು ದಿನ ತಳ್ಳುವಂತಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಜೀವ, ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸ್ಥಿತಿ ಪೋಷಕರ ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ತಿಂಗಳುಗಟ್ಟಲೆ ವಿಳಂಬವಾಗಿ ಸಿಗುವ ವೈಯಕ್ತಿಕ ಬಳಕೆಯ ವಸ್ತುಗಳ ಕಿಟ್‌ಗಳಲ್ಲಿ ಎಕ್ಸ್‌ಪೈರ್| ಡೇಟ್ ಇರಲಾರದ   ಕೊಬ್ಬರಿ ಎಣ್ಣೆ ಸೇರಿದಂತೆ ಕಳಪೆ ಗುಣಮಟ್ಟದ ಸಾಬೂನು ಹಾಗೂ ಟೂತ್‌ಪೇಸ್ಟ್‌ಗಳನ್ನು ನೀಡಲಾಗುತ್ತಿದೆ.

ನಿಲಯದ ಕುಡಿಯುವ ನೀರು ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿದ್ದು, ಕಲುಷಿತ ನೀರನ್ನೇ ಕುಡಿಯುವಂತಾಗಿದೆ. ಶೌಚಾಲಯಗಳ ಸ್ವಚ್ಛತೆ ತಿಂಗಳಗಟ್ಟಲೆ ಮಾಡುವುದೇ ಇಲ್ಲ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ.

ಊಟಕ್ಕೆ ಬಳಸುವ ಬೇಳೆ-ಸಾಂಬಾರ ಮತ್ತು ತರಕಾರಿ ಪಲ್ಲೆಯಲ್ಲಿ ವನಸ್ಪತಿ ಬಳಸಲಾಗುತ್ತಿದ್ದು, ವನಸ್ಪತಿ ಬಳಸಬಾರದು ಎಂದು ಗೊತ್ತಿದ್ದರೂ. ಇಲ್ಲಿ ಬಳಸುತ್ತಾರೆ. ವಿದ್ಯಾರ್ಥಿಗಳಿಗೆ ಕೊಳೆತ ಹಾಗೂ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ತುರ್ತು ಸಮಯಕ್ಕೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯೂ ಸಹ (First Aid Box) ಲಭ್ಯವಿಲ್ಲ.

ನಿಲಯದಲ್ಲಿ ಇಂಟರ್‌ನೆಟ್‌ ಸೌಲಭ್ಯವಿಲ್ಲದೆ ಹಾಗೂ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕಗಳ ಕೊರತೆಯಿಂದ ಕಲಿಕೆಗೆ ತೀವ್ರ ತೊಂದರೆಯಾಗಿದೆ.

ಈ ಎಲ್ಲ ವಿಷಯಗಳ ಬಗ್ಗೆ ವಾರ್ಡನ್ ಗುರುರಾಜ್ ಅವರನ್ನು ಕೇಳಿದರೆ, ನಾನು ‘ಇನ್‌ಚಾರ್ಜ್ ವಾರ್ಡನ್ ಮಾತ್ರ ಎಂದು ಹರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ.

ತಾಲೂಕು ಅಧಿಕಾರಿಗಳಾದ ರವಿ ಪೂಜಾರಿ ಅವರ ಬಳಿ ದೂರಿಕೊಂಡರೆ, ಸರ್ಕಾರದಿಂದ ಅನುದಾನ ಬಂದಿಲ್ಲ, ಹೀಗಾಗಿ ಲಭ್ಯವಿರುವ ಹಣದಲ್ಲಿ ವಸ್ತು ತರಲಾಗಿದೆ” ಎಂದು ಬೇಜವಾಬ್ದಾರಿಯ ಸಿದ್ಧ ಉತ್ತರ ನೀಡಿದ್ದಾರೆ. ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ರಾಯಚೂರಿನ ಮಲ್ಕಾಪುರ ಮತ್ತು ಸಿಂಧನೂರು ಹಾಗೂ ಕಲಬುರಗಿಯ ವಸತಿ ನಿಲಯಗಳಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ ಘಟನೆಗಳು ವರದಿಯಾಗಿವೆ. ಕೊಪ್ಪಳದಲ್ಲೂ ಇಂತಹ ಅನಾಹುತ ಸಂಭವಿಸುವ ಎಲ್ಲ ಲಕ್ಷಣವನ್ನು ಹೊಂದಿರುವ.

ಈ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಅನಾಹುತವು ಘಟಿಸುವಕಿಂತ ಮುನ್ನವೇ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿ ಕಾರಿಗಳಾದ ಅಜ್ಮೀರ್ ಅಲಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು. ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...