Home ಸುದ್ದಿ ರಾಯಚೂರಿನ ಗಮಗಮಿಸುವ ಮಂಡಕ್ಕಿ ಒಗ್ಗರಣಿ – ವಿಧಾನಸೌಧದ ‘ಫ್ರೀಡಂ ಹಬ್ಬ’ದಲ್ಲಿ ಜನರ ಅಚ್ಚುಮೆಚ್ಚಿನ ರುಚಿ.
ಸುದ್ದಿ

ರಾಯಚೂರಿನ ಗಮಗಮಿಸುವ ಮಂಡಕ್ಕಿ ಒಗ್ಗರಣಿ – ವಿಧಾನಸೌಧದ ‘ಫ್ರೀಡಂ ಹಬ್ಬ’ದಲ್ಲಿ ಜನರ ಅಚ್ಚುಮೆಚ್ಚಿನ ರುಚಿ.

Share
Share
ಮರ್ಚೆಡ್ ಡೇಸ್|ಬೆಂಗಳೂರು.

ಬೆಂಗಳೂರಿನ : ಐತಿಹಾಸಿಕ ವಿಧಾನಸೌಧದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ‘ಫ್ರೀಡಂ ಹಬ್ಬ’ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಹಾಗೂ ದೇಶಭಕ್ತಿಯ ಸಡಗರದಿಂದ ಜರುಗಿತು. ಈ ಸ್ವಾತಂತ್ರ್ಯ ಹಬ್ಬ ಹಾಗೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಾಡಿನ ವಿವಿಧಡೆಯಿಂದ ಆಗಮಿಸಿದ್ದ ನೂರಾರು ಸಾರ್ವಜನಿಕರು ಮತ್ತು ಗಣ್ಯರು ಉತ್ಸಾಹದಿಂದ ಭಾಗವಹಿಸಿದ್ದರು.

ಈ ವಿಶೇಷ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ರಾಯಚೂರು ಜಿಲ್ಲೆಯ ಸಾಂಪ್ರದಾಯಿಕ ರುಚಿಕರ ತಿನಿಸುಗಳನ್ನು ಪರಿಚಯಿಸಲಾಯಿತು. ರಾಯಚೂರು ಜನರ ಬಲು ಪ್ರೀತಿಯ ಮತ್ತು ಅಚ್ಚಮೆಚ್ಚಿನ ತಿಂಡಿಯಾದ ಸ್ಪೆಷಲ್ ಮಂಡಕ್ಕಿ ಒಗ್ಗಾಣಿ ಹಾಗೂ ಬಿಸಿಬಿಸಿಯಾದ ಒಗ್ಗರಣಿ ಮಿರ್ಚಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯ ಕೇಂದ್ರವಾಯಿತು.

ವಿಧಾನಸೌಧದಲ್ಲಿ ನಡೆಯುತ್ತಿರುವ ‘ಫ್ರೀಡಂ ಹಬ್ಬ’ ಕಾರ್ಯಕ್ರಮದ ಆವರಣದಲ್ಲಿ ಮಂಡಕ್ಕಿ ಒಗ್ಗರಣೆಯ ಘುಮ್ ಘುಮ್ ಪರಿಮಳ ಹರಡುತ್ತಿದ್ದಂತೆ, ಅಲ್ಲಿಗೆ ಆಗಮಿಸಿದ ಸಾರ್ವಜನಿಕರು ರಾಯಚೂರು ಜಿಲ್ಲೆಯ ಖ್ಯಾತ ಸ್ಪೆಷಲ್ ವಗ್ಗಣಿ ಮಿರ್ಚಿ ಹಾಗೂ ಮಂಡಕ್ಕಿಯನ್ನು ಸವಿಯಲು ಮುಗಿಬಿದ್ದರು. ಇದರ ವಿಶಿಷ್ಟ ರುಚಿ ಎಲ್ಲರ ಮನಸೂರೆಗೊಂಡಿತು.

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಹಾಗೂ ಹಬ್ಬದಲ್ಲಿ ಭಾಗವಹಿಸಿದ ಎಲ್ಲರೂ ಈ ವಿಭಿನ್ನ ಹಾಗೂ ಸಾಂಪ್ರದಾಯಿಕ ತಿಂಡಿಯನ್ನು ಸವಿದು ಸೈ ಎಂದರು. ಒಟ್ಟಾರೆಯಾಗಿ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಯಚೂರಿನ ಸಾಂಪ್ರದಾಯಿಕ ರುಚಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಯಿತು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...