Home ಸುದ್ದಿ ನಿವೃತ್ತಿಯ ಬಳಿಕವೂ ನಿಲ್ಲದ ದೇಶಪ್ರೇಮ: ರಾಯಚೂರು ಜಿಲ್ಲೆಯ ಮರ್ಚೆಡ್ ಗ್ರಾಮದಲ್ಲಿ ವಿನೂತನವಾಗಿ ನೆರವೇರಿದ 80ನೇ ಸ್ವಾತಂತ್ರ್ಯೋತ್ಸವ.
ಸುದ್ದಿ

ನಿವೃತ್ತಿಯ ಬಳಿಕವೂ ನಿಲ್ಲದ ದೇಶಪ್ರೇಮ: ರಾಯಚೂರು ಜಿಲ್ಲೆಯ ಮರ್ಚೆಡ್ ಗ್ರಾಮದಲ್ಲಿ ವಿನೂತನವಾಗಿ ನೆರವೇರಿದ 80ನೇ ಸ್ವಾತಂತ್ರ್ಯೋತ್ಸವ.

Share
Share

ಮರ್ಚಡ್ ಡೇಸ್ ಸುದ್ದಿ|ರಾಯಚೂರು.

ರಾಯಚೂರು: ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ನಿರಂತರವಾಗಿ ದೇಶಪ್ರೇಮದ ಪಾಠವನ್ನು ಬಿತ್ತುತ್ತಾ ಬಂದಿರುವ ನಿವೃತ್ತ ಶಿಕ್ಷಕ ಎಚ್.ಎಂ. ಬಾಬಾ ಅವರು, ಈ ಬಾರಿ ತಮ್ಮ ನಿವೃತ್ತಿಯ ನಂತರವೂ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಮರ್ಚೆಡ್ ಗ್ರಾಮದ ನಿವಾಸಿ ಹಾಗೂ ಇತ್ತೀಚೆಷ್ಟೇ ಸೇವಾ ನಿವೃತ್ತಿ ಹೊಂದಿರುವ ಎಚ್.ಎಂ. ಬಾಬಾ ಅವರು, ತಮ್ಮ ತೋಟದ ಕೃಷಿ ಭೂಮಿಯ ಪ್ರಕೃತಿಯ ಮಡಿಲಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಅತ್ಯಂತ ಸಡಗರದಿಂದ ನೆರವೇರಿಸಿದರು.

ಸುಮಾರು ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಪ್ರಾಮಾಣಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಬಾಬಾ ಅವರು, ತಮ್ಮ ಸೇವಾ ಅವಧಿಯಲ್ಲಿ ತಪ್ಪದೆ ಶಾಲಾ ಮಟ್ಟದಲ್ಲಿ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಆಗಸ್ಟ್ 15 ಕ್ಕಿಂತ ಮುಂಚಿತವಾಗಿ ಸೇವಾ ನಿವೃತ್ತಿಯನ್ನು ಹೊಂದಿದ್ದರೂ ಸಹ, ದೇಶಭಕ್ತಿಗೆ ನಿವೃತ್ತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾವು ಕೆಲಸದಿಂದ ನಿವೃತ್ತರಾದೆವು ಎಂಬ ಕಾರಣಕ್ಕೆ ರಾಷ್ಟ್ರಧ್ವಜ ವಂದನೆಯಿಂದ ದೂರ ಉಳಿಯದೆ, ಸ್ವಂತ ಖರ್ಚಿನಲ್ಲಿ ತಮ್ಮ ಹೊಲದಲ್ಲಿ ಸುಂದರವಾದ ಧ್ವಜಕಟ್ಟೆ ಹಾಗೂ ಧ್ವಜ ಕಂಬವನ್ನು ನಿರ್ಮಿಸಿಕೊಂಡು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ  ರೈತರ ಸ್ನೇಹಿತರು ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು. ರೈತರನ್ನು ಒಂದೆಡೆ ಸೇರಿಸಿ ಅವರೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಬಾಬಾ ಅವರು ಅನ್ನದಾತರಿಗೆ ಸ್ವಾತಂತ್ರ್ಯದ ಮಹತ್ವವನ್ನು ಸಾರಿದರು. ತೋಟದ ತಂಪಾದ ವಾತಾವರಣದಲ್ಲಿ ನಡೆದ ಈ ರಾಷ್ಟ್ರೀಯ ಹಬ್ಬದ ಸಂಭ್ರಮವು ಅಲ್ಲಿ ಸೇರಿದ ಪ್ರತಿಯೊಬ್ಬರಲ್ಲೂ ರೋಮಾಂಚನ ಮೂಡಿಸಿತು.

ಈ ವೇಳೆ ಮಾತನಾಡಿದ ಸ್ಥಳೀಯ ರೈತರು, “ನಾವು ಎಂದಿಗೂ ಧ್ವಜಾರೋಹಣ ಮಾಡುವುದನ್ನು ದೂರದಿಂದ ನೋಡಿದ್ದೇವೆಯೇ ಹೊರತು, ನೇರವಾಗಿ ಇಷ್ಟು ಹತ್ತಿರದಿಂದ ಭಾಗವಹಿಸಿರಲಿಲ್ಲ. ಇಂದು ನಮ್ಮ ಹೊಲದ ಬಳಿಯೇ ನಾವೇ ಸ್ವತಃ ಧ್ವಜ ವಂದನೆ ಸಲ್ಲಿಸಿದ್ದು ನಮ್ಮ ಜೀವನದಲ್ಲಿ ಅತ್ಯಂತ ಸಂತೋಷದ ಕ್ಷಣ” ಎಂದು ಭಾವನಾತ್ಮಕವಾಗಿ ನುಡಿದರು. ಬಳಿಕ ರೈತರು ನಿವೃತ್ತ ಶಿಕ್ಷಕರಿಗೆ ವಿಶೇಷವಾಗಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ಸಾಮಾನ್ಯವಾಗಿ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳಿಂದ ಹಲವರು ದೂರ ಉಳಿಯುತ್ತಾರೆ. ಆದರೆ, ಶಿಕ್ಷಕ ಎಚ್.ಎಂ. ಬಾಬಾ ಅವರು ತಮ್ಮ ಹೊಲದಲ್ಲಿಯೇ ಧ್ವಜಾರೋಹಣ ಮಾಡುವ ಮೂಲಕ ಇಳಿ ವಯಸ್ಸಿನಲ್ಲೂ ದೇಶದ ಗೌರವವನ್ನು ಹೆಚ್ಚಿಸುವುದರ ಜೊತೆಗೆ, ಸಮಾಜಕ್ಕೆ ಮತ್ತು ಯುವ ಜನತೆಗೆ ದೇಶಪ್ರೇಮದ  ಸಂದೇಶವನ್ನು ರವಾನಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...