Home ಅಂಕಣ ಕ್ರಾಂತಿಯ,ದೇವರ ನಾಡಿನಲ್ಲಿ ದೀಪದ ಕೆಳಗೆ ಕತ್ತಲು: ದುಡಿಯದೆ ದುಡ್ಡು ಬೇಡುವ ‘ನೋಕ್ಕು ಕೂಲಿ’ಯ ವಿಚಿತ್ರ ಪದ್ಧತಿ ಕೆಲವು ವರ್ಷದ ಕೆಳಗೆ ರೂಢಿಯಲ್ಲಿ ಇತ್ತು.
ಅಂಕಣಸುದ್ದಿ

ಕ್ರಾಂತಿಯ,ದೇವರ ನಾಡಿನಲ್ಲಿ ದೀಪದ ಕೆಳಗೆ ಕತ್ತಲು: ದುಡಿಯದೆ ದುಡ್ಡು ಬೇಡುವ ‘ನೋಕ್ಕು ಕೂಲಿ’ಯ ವಿಚಿತ್ರ ಪದ್ಧತಿ ಕೆಲವು ವರ್ಷದ ಕೆಳಗೆ ರೂಢಿಯಲ್ಲಿ ಇತ್ತು.

Share
Share

 

ಮರ್ಚೆಡ್ ಡೇಸ್ ವಿಶೇಷ ಲೇಖನೆ:

ಸಾಕ್ಷರತೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ, ಪ್ರಗತಿಪರ ಚಿಂತನೆ ಹಾಗೂ ವಿಶಿಷ್ಟ ಸಂಸ್ಕೃತಿಗೆ ಹೆಸರಾದ ಕೇರಳ ರಾಜ್ಯವು ಭಾರತದ  ಬುದ್ಧಿವಂತರ ನಾಡು ಎಂದೇ ಪರಿಗಣಿಸಲ್ಪಟ್ಟಿದೆ. ಆದರೆ, ಇಂತಹ ವಿದ್ಯಾವಂತ ಹಾಗೂ ಜಾಗೃತ ಸಮಾಜದಲ್ಲಿ ಒಂದು ಕಾಲದಲ್ಲಿ ಇಂತದ್ದು ಒಂದು ಪದ್ಧತಿ ಇತ್ತು ಎಂಬುವುದು ಸೂಜಿಗ ಎನಿಸುತ್ತದೆ. ಬೇರೂರಿದ್ದ ಅನ್ಯಾಯದ ಪದ್ಧತಿಯೇ ‘ನೋಕ್ಕು ಕೂಲಿ’ ಅಂದರೆ  ಶ್ರಮ ಪಟ್ಟು ಕೆಲಸ ಮಾಡುವರನ್ನು ನಿಂತು ನೋಡಿದ್ದಕ್ಕೇ ಕೂಲಿ ಪಡೆಯುವ ವಿಚಿತ್ರ ಹಾಗೂ ಶೋಷಣೆಯ ಚಾಳಿ.

ಈ ವಿಚಿತ್ರ ಪದ್ಧತಿಯಡಿ ಯಾವುದೇ ಕಷ್ಟದ ಕೆಲಸ ಮಾಡದೆ, ಭಾರವಾದ ವಸ್ತುಗಳನ್ನು ಎತ್ತದೆ ಅಥವಾ ಬೆವರು ಹರಿಸದೆ, ಕೇವಲ ಸ್ಥಳದಲ್ಲಿ ನಿಂತು ಕೆಲಸ ನೋಡುವುದಕ್ಕೇ ಕಾರ್ಮಿಕ ಸಂಘಟನೆಗಳ ಹೆಸರಿನಲ್ಲಿ ಮಾಲೀಕರಿಂದ ಹಣ ವಸೂಲಿ ಮಾಡಲಾಗುತ್ತಿತ್ತು. ದುಡಿಯದೆ ಹಣ ಸಂಪಾದಿಸುವ ಈ ಸೋಮಮಾರಿತನದ ಸಂಸ್ಕೃತಿಯು ರಾಜ್ಯದ ನೈತಿಕ ಮೌಲ್ಯಗಳಿಗೆ ತೀವ್ರ ಧಕ್ಕೆ ತಂದಿತ್ತು.

ಕಮ್ಯುನಿಸ್ಟ್ ವಿಚಾರಧಾರೆಯ ಹಾಗೂ ಕಾರ್ಮಿಕ ಪರ ಹೋರಾಟಗಳು ಬೇರೂರಿರುವ ಈ ನೆಲದಲ್ಲಿ, ಶ್ರಮಿಕರ ಹೆಸರಿನಲ್ಲಿ ಹುಟ್ಟಿಕೊಂಡ ಇಂತಹ ಸಂಘಟಿತ ಸುಲಿಗೆಯಿಂದಾಗಿ ಬಂಡವಾಳ ಹೂಡಿಕೆದಾರರು ಮತ್ತು ಉದ್ಯಮಿಗಳು ಕಂಗಾಲಾಗಿದ್ದರು. ಇದರಿಂದಾಗಿ ರಾಜ್ಯದ ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡು, ಉದ್ಯೋಗಾವಕಾಶಗಳು ಕಡಿಮೆಯಾಗಿ ಯುವಕರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕ್ರಾಂತಿಕಾರಿ ಸಿದ್ಧಾಂತಗಳು ಮತ್ತು ಬುದ್ಧಿಜೀವಿಗಳು ಮುಂಚೂಣಿಯಲ್ಲಿರುವ ಪಕ್ಷದ ಆಡಳಿತದಲ್ಲೇ ಇಂತಹ ಪದ್ಧತಿಗಳು ವರ್ಷಗಳ ಕಾಲ ಮುಂದುವರಿದಿದ್ದು ನಿಜಕ್ಕೂ ವಿಪರ್ಯಾಸ. ಜಗತ್ತಿಗೆ ಹೊಸ ಆರ್ಥಿಕ ಹಾಗೂ ಸಾಮಾಜಿಕ ಪಾಠಗಳನ್ನು ಕಲಿಸಬೇಕಾದ ಸಿದ್ಧಾಂತದ ನೆಲದಲ್ಲೇ ದುಡಿಮೆ ಇಲ್ಲದ ದುಡ್ಡಿನಾಸೆ ಹೆಚ್ಚಾಗಿದ್ದು ವಿಷಾದಕರ ಸಂಗತಿಯಾಗಿದೆ.

ಈ ಗಂಭೀರ ಸಮಸ್ಯೆಯನ್ನು ಮನಗಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು, 2018ರಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಈ ಅಮಾನವೀಯ ‘ನೋಕ್ಕು ಕೂಲಿ’ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಸರ್ಕಾರದ ಈ ದಿಟ್ಟ ನಿರ್ಧಾರದಿಂದಾಗಿ ಉದ್ಯಮ ಕ್ಷೇತ್ರಕ್ಕೆ ದೊಡ್ಡ ರಿಲೀಫ್ ಸಿಕ್ಕಿತು.

ಆದರೂ, ದಶಕಗಳಿಂದ ರಕ್ತಗತವಾಗಿ ಬಂದಿರುವ ಈ ಅನಿಷ್ಟ ಚಾಳಿಯನ್ನು ರಾತ್ರೋರಾತ್ರಿ ಸಮಾಜದಿಂದ ಸಂಪೂರ್ಣವಾಗಿ ಕಿತ್ತೊಗೆಸುವುದು ಸುಲಭವಲ್ಲ. ಕಾನೂನು ನಿಷೇಧದ ಹೊರತಾಗಿಯೂ, ಅಲ್ಲಲ್ಲಿ ಕದ್ದುಮುಚ್ಚಿ ಈ ಕಾನೂನುಬಾಹಿರ ವಸೂಲಿ ಮುಂದುವರಿದಿದೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ.

ಹೀಗಾಗಿ, ಎಷ್ಟೇ ವಿದ್ಯಾವಂತರು, ಬುದ್ಧಿವಂತರು ಹಾಗೂ ವಿಚಾರವಂತರು ಇದ್ದರೂ ಕೆಲವರ ಸ್ವಾರ್ಥದಿಂದ ಸಮಾಜದಲ್ಲಿ ಇಂತಹ ಪಿಡುಗುಗಳು ಮುಂದುವರಿಯುವುದು “ದೀಪದ ಕೆಳಗೆ ಕತ್ತಲು” ಎಂಬ ಹಳೆಯ ಗಾದೆಯನ್ನು ಅಕ್ಷರಶಃ ಸಾಕ್ಷೀಕರಿಸುತ್ತದೆ. ಸಮಾಜದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅತಿ ಅವಶ್ಯ.

ಕೊನೆಯದಾಗಿ, ನಿಜವಾದ ಪ್ರಗತಿ ಎಂದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದೇ ಹೊರತು, ದುಡಿಯದೆ ಹಣ ಕಿತ್ತುಕೊಳ್ಳುವುದಲ್ಲ. ಕೇರಳದ ಈ ನೂಕ್ಕು ಕೂಲಿ ಪದ್ಧತಿಯ ಇತಿಹಾಸವು ಪ್ರತಿಯೊಂದು ರಾಜ್ಯಕ್ಕೂ ಹಾಗೂ ಸಮಾಜಕ್ಕೂ ಸೋಮಾರಿತನ ಮತ್ತು ಸುಲಿಗೆಯ ವಿರುದ್ಧ ಎಚ್ಚರಿಕೆಯ ದೊಡ್ಡ ಪಾಠವಾಗಿದೆ.

ಲೇಖಕರು.

ತಾಯಪ್ಪ ಮರ್ಚೆಡ್ ಪತ್ರಕರ್ತರು.

 

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...