Home ಸುದ್ದಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ: ವಡ್ಡರ ಹಟ್ಟಿ ಕ್ಯಾಂಪ್‌ನಲ್ಲಿ ರಾಯರ ಲಕ್ಷ ಲೇಖನ ಯಜ್ಞ.
ಸುದ್ದಿ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ: ವಡ್ಡರ ಹಟ್ಟಿ ಕ್ಯಾಂಪ್‌ನಲ್ಲಿ ರಾಯರ ಲಕ್ಷ ಲೇಖನ ಯಜ್ಞ.

Share
Share
ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ.

ಗಂಗಾವತಿ:ಮಂತ್ರಾಲಯದ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ, ಗಂಗಾವತಿ ತಾಲೂಕಿನ ವಡ್ಡರ ಹಟ್ಟಿ ಕ್ಯಾಂಪಿನ ಐತಿಹಾಸಿಕ ಈಶ್ವರ ದೇವಸ್ಥಾನದಲ್ಲಿ ಅತ್ಯಂತ ಭಕ್ತಿ-ಭಾವದಿಂದ ‘ರಾಯರ ಲಕ್ಷ ಲೇಖನ ಯಜ್ಞ’ವನ್ನು ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದ ಕುರಿತು ದೇವಸ್ಥಾನದ ಅರ್ಚಕರಾದ ಗುರಾಚಾರ್ ಅವರು ಅಧಿಕೃತ ಮಾಹಿತಿ ನೀಡಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.

ಈ ಯಜ್ಞಕ್ಕಾಗಿ ವಿಶೇಷ ಪುಸ್ತಕಗಳನ್ನು ಮುದ್ರಿಸಲಾಗಿದ್ದು, ಬರೆಯುವ ವಿಧಾನವನ್ನು ಸಹ ಸ್ಪಷ್ಟಪಡಿಸಲಾಗಿದೆ. ಪುರುಷರು ಒಂದು ಪುಟದಲ್ಲಿ 10 ಸಾಲುಗಳಂತೆ ಒಟ್ಟು 52 ಪುಟಗಳಲ್ಲಿ “ಓಂ ಶ್ರೀ ರಾಘವೇಂದ್ರಾಯ ನಮಃ ಓಂ” ಎಂದು 520 ಸಾಲುಗಳನ್ನು ಬರೆದು ಸಮರ್ಪಿಸಬೇಕು. ಹಾಗೂ ಮಹಿಳೆಯರು “ಶ್ರೀ ರಾಘವೇಂದ್ರಾಯ ನಮಃ” ಎಂದು ಮಾತ್ರ ಬರೆದು ಈ ಪವಿತ್ರ ಯಜ್ಞದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ.

ಮುಂದಿನ ಆಗಸ್ಟ್ 29ರಂದು ಅದ್ದೂರಿಯಾಗಿ ‘ಲೇಖನ ಯಜ್ಞದ ಸಮರ್ಪಣಾ ಸಮಾರಂಭ’ ಜರುಗಲಿದೆ. ಭಕ್ತರು ಭಕ್ತಿಯಿಂದ ಬರೆದುಕೊಟ್ಟ ಲಕ್ಷಾಂತರ ಪುಸ್ತಕಗಳನ್ನು ಬಳಸಿ ಸುಂದರವಾದ ರಾಯರ ವೃಂದಾವನವನ್ನು ನಿರ್ಮಿಸಿ ಅಲಂಕರಿಸಲಾಗುತ್ತದೆ. ಅಂದಿನ ದಿನದ ವಿಶೇಷ ಪೂಜಾ ಕೈಂಕರ್ಯಗಳ ಭಾಗವಾಗಿ ಲಕ್ಷ ಪುಷ್ಪಗಳಿಂದ ಅರ್ಚನೆ, ವಿಶೇಷ ಹೋಮ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ನೆರವೇರಲಿವೆ.

ಪೂಜಾ ಕಾರ್ಯಕ್ರಮಗಳ ಮುಕ್ತಾಯದ ನಂತರ ಆಗಮಿಸುವ ಎಲ್ಲಾ ಭಕ್ತಾದಿಗಳಿಗಾಗಿ ಮಹಾ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಚಿಸುವ ಭಕ್ತರು 7899620851, 9481661824, ಅಥವಾ 9844546458 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಪುಸ್ತಕಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...