
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ : ತಾಲೂಕಿನ ಅರಳಹಳ್ಳಿಯಲ್ಲಿ ಬರುವ ಜುಲೈ 29ರ ಬುಧವಾರದಂದು ನಾಡಿನ ಹರ, ಗುರು, ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ, ದಾಸೋಹ ಮೂರ್ತಿ ಪರಮ ಪೂಜ್ಯಶ್ರೀ ಶರಣಬಸವಾರ್ಯ ತಾತನವರ 17ನೇ ವರ್ಷದ ಶರಣೋತ್ಸವ ಹಾಗೂ ಜಾತ್ರಾ ಮಹೋತ್ಸವವು ನಾಡಿನ ಅಸಂಖ್ಯಾತ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಮತ್ತು ಅದ್ದೂರಿಯಾಗಿ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 17ರಿಂದ ಆರಂಭಗೊಂಡು ಜುಲೈ 29ರವರೆಗೆ ಪ್ರತಿದಿನ ಶರಣರ ಜೀವನ ದರ್ಶನ ಹಾಗೂ ಆಧ್ಯಾತ್ಮ ಪ್ರವಚನ ಕಾರ್ಯಕ್ರಮಗಳು ಭಕ್ತರಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ನೀಡುತ್ತಾ ಸಾಗಿವೆ.
ಜುಲೈ 29ರಂದು ಜಾತ್ರಾ ಮಹೋತ್ಸವದ ಮುಖ್ಯ ದಿನದಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ವಿಧಿ-ವಿಧಾನಗಳು ನಿಗದಿತಯಂತೆ ಸಂಭ್ರಮದಿಂದ ನೆರವೇರಲಿವೆ.
ನಾಡಿನ ಸಮಸ್ತ ಭಕ್ತಾದಿಗಳು ಈ ಮಹತ್ವದ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಶರಣಬಸವಾರ್ಯ ತಾತನವರ ಕೃಪೆಗೆ ಪಾತ್ರರಾಗಬೇಕಾಗಿ ಅರಳಹಳ್ಳಿ ಬೃಹನ್ಮಠದ ವೇದಮೂರ್ತಿ ಶ್ರೀ ಗವಿಸಿದ್ದೇಶ್ವರ ತಾತನವರು ಭಕ್ತರಲ್ಲಿ ವಿನಂತಿಸಿದ್ದಾರೆ.