ಮರ್ಚೆಡ್ ಡೇಸ್ ಸುದ್ದಿ.
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು, ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ ಅವರ ಅಂತಿಮ ವಿಶ್ರಾಂತಿಯ ತಾಣವಾಗಬೇಕೆಂಬ ಅವರ ಅಪೇಕ್ಷೆಯನ್ನು ಸಾದರಪಡಿಸುತ್ತಿದೆ. ಹೈದರಾಬಾದ್ನ ಜೀವನವನ್ನು ತೊರೆದು, ತಮ್ಮ ಪ್ರೀತಿಯ ಮಗನ ನೆನಪಿನೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದ ಅವರು, ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಇಲ್ಲಿಯೇ ಕಳೆಯಲು ಮತ್ತು ಅಂತಿಮ ಉಸಿರನ್ನು ಇಲ್ಲೇ ಬಿಡಲು ಬಯಸಿದ್ದರು. ಇದಕ್ಕಾಗಿ ಅವರು ತಮ್ಮ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿಕೊಳ್ಳಲು ಮೈಸೂರಿನಲ್ಲಿ ಎರಡು ಎಕರೆ ಜಮೀನನ್ನು ಕೂಡ ಖರೀದಿಸಿದ್ದರು.
ಈ ದುಃಖದ ಸಂದರ್ಭದಲ್ಲಿ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಗಾನಕೋಗಿಲೆ ಅವರ ಸ್ಮರಣಾರ್ಥವಾಗಿ ಮೈಸೂರಿನಲ್ಲಿ ‘ಎಸ್ ಜಾನಕಮ್ಮ ಹೆಸರಿನಲ್ಲಿ ಸಂಗೀತ ಮೆಮೋರಿಯಲ್’ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಜಾನಕಿ ಅವರ ಶಿಷ್ಯ ವರ್ಗ ಸೇರಿದಂತೆ ಸಂಗೀತಾಸಕ್ತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಮೆಮೋರಿಯಲ್ ನಿರ್ಮಾಣದ ಮೂಲಕ ಮೈಸೂರಿನಲ್ಲಿ ಎಸ್. ಜಾನಕಿ ಅವರ ಸಂಗೀತ ಪಯಣ ಮತ್ತು ಅವರ ನೆನಪುಗಳನ್ನು ಚಿರಸ್ಥಾಯಿಗೊಳಿಸಲು ಸಂಘ-ಸಂಸ್ಥೆಗಳು ಕೈಜೋಡಿಸಲಿವೆ. ಗಾನಗಂಧರ್ವಿಯ ಸಂಗೀತ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಸ್ಮಾರಕವು ಭವಿಷ್ಯದ ಪೀಳಿಗೆಗೆ ಪ್ರೇರಣೆಯಾಗಲಿದೆ.