Home ಸುದ್ದಿ ಗಂಗಾವತಿ ಲಯನ್ಸ್ ಕ್ಲಬ್‌ಗೆ ಏಳು ಪ್ರಶಸ್ತಿಗಳ ಗರಿ: ಸೇವಾ ಕಾರ್ಯಕ್ಕೆ ಸಂದ ಮನ್ನಣೆ.
ಸುದ್ದಿ

ಗಂಗಾವತಿ ಲಯನ್ಸ್ ಕ್ಲಬ್‌ಗೆ ಏಳು ಪ್ರಶಸ್ತಿಗಳ ಗರಿ: ಸೇವಾ ಕಾರ್ಯಕ್ಕೆ ಸಂದ ಮನ್ನಣೆ.

Share
Share

 

ಮರ್ಚೆಡ ಡೇಸ್ ಸುದ್ದಿ.

ಗಂಗಾವತಿ: ನಿರಂತರ ಸಮಾಜಮುಖಿ ಮತ್ತು ಕ್ರಿಯಾಶೀಲ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಗಂಗಾವತಿಯ ಲಯನ್ಸ್ ಕ್ಲಬ್, 2025-26ನೇ ಸಾಲಿನಲ್ಲಿ ಭರ್ಜರಿ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದಿದೆ. ಗೋವಾದಲ್ಲಿ ನಡೆದ ‘ಡಿಸ್ಟ್ರಿಕ್ಟ್ 317-ಬಿ’ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಉತ್ತರ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನೂರಕ್ಕೂ ಹೆಚ್ಚು ಕ್ಲಬ್‌ಗಳ ಪೈಕಿ ಅತ್ಯುತ್ತಮ ಲಯನ್ಸ್ ಕ್ಲಬ್ ಪ್ರಶಸ್ತಿಯನ್ನು ಗಂಗಾವತಿ ಘಟಕಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಜೈಮೊಲ್ ನಾಯ್ಕ್ ಅವರು ನೀಡಿ ಗೌರವಿಸಿದರು.

ಈ ಸಮಾರಂಭದಲ್ಲಿ ಕ್ಲಬ್‌ನ ಸಾಧನೆಗೆ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪ್ರಶಸ್ತಿಗಳು ಒಲಿದು ಬಂದಿವೆ. ಕ್ಲಬ್‌ನ 2025-26ನೇ ಸಾಲಿನ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಡಾ. ಶಿವಕುಮಾರ್ ಮಾಲಿಪಾಟೀಲ್ ಅವರು ‘ಅತ್ಯುತ್ತಮ ಅಧ್ಯಕ್ಷ’ ಪ್ರಶಸ್ತಿಯನ್ನು ಪಡೆದರೆ, ಕ್ಲಬ್ ‘ಸ್ಕ್ರಾಫ್ ಬುಕ್’ ವಿಭಾಗದಲ್ಲಿಯೂ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದರೊಂದಿಗೆ, ಲಯನ್ಸ್ ಕಣ್ಣಿನ ಆಸ್ಪತ್ರೆ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ ಟಿ. ರಾಮಕೃಷ್ಣ ಮತ್ತು ಶಾಲಾ ವಾಹನ ಖರೀದಿಗೆ ಶ್ರಮಿಸಿದ ಡಾ. ಜಂಬುನಾಥಗೌಡ ಅವರು ಗವರ್ನರ್ ಅವರ ಮೆಚ್ಚುಗೆಯ ವಿಶೇಷ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಲ್ಲದೆ, ಹಿರಿಯ ಸದಸ್ಯರಾದ ಎಫ್.ಎಚ್. ಚಿತ್ರಗಾರ ಹಾಗೂ ರಾಜಶೇಖರ ಹೇರೂರ್ ಅವರು ‘ಅತ್ಯುತ್ತಮ ಡಿಸ್ಟ್ರಿಕ್ಟ್ ಚೇರ್‌ಪರ್ಸನ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಅಧ್ಯಕ್ಷ ಡಾ. ಶಿವಕುಮಾರ್ ಮಾಲಿಪಾಟೀಲ್, ಕಾರ್ಯದರ್ಶಿ ಜಂಬಣ್ಣ ಐಲಿ ಮತ್ತು ಖಜಾಂಚಿ ಶಿವಪ್ಪ ಗಾಳಿ ಅವರ ತಂಡಕ್ಕೆ ಕ್ಲಬ್‌ನ ಹಿರಿಯ ಸದಸ್ಯರು ಹಾಗೂ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಡಾ. ಜಿ. ಚಂದ್ರಪ್ಪ, ಡಾ. ಸೋಮರಾಜು ಸೇರಿದಂತೆ ಹಲವು ಹಿರಿಯ ಸದಸ್ಯರು ಹಾಗೂ ಗಂಗಾವತಿ ಚಾರಣ ಬಳಗ, ಕಾವ್ಯಲೋಕ, ಕಿಷ್ಕಿಂದ ಪರಿಸರ ಟ್ರಸ್ಟ್, ಕೆವೈಟಿಸಿ ಬಳಗ ಮತ್ತು ಕಸಾಪ ಗಂಗಾವತಿ ಘಟಕದವರು ಲಯನ್ಸ್ ಕ್ಲಬ್‌ನ ಈ ಸಾಧನೆಯನ್ನು ಶ್ಲಾಘಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...