Home ಸುದ್ದಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ.
ಸುದ್ದಿ

ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ.

Share
Share

ಪರಿಶೀಲನೆ ಕಾರ್ಯವೂ ಮುಕ್ತಾಯದ ಹಂತಕ್ಕೆ ತಲುಪಿದೆ: ಜಿಲ್ಲಾಧಿಕಾರಿ ಪೂವಿತಾ

=ಮರ್ಚೆಡ್ ಡೇಸ್ ಸುದ್ದಿ.

ರಾಯಚೂರು ಜೂನ್ 22 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿಗಳನ್ನು ಪಡೆಯಲು ಅರ್ಹರಾಗಿರುವಂತವರಿಗೆ ಪಿಂಚಣಿಗಳನ್ನು ಮಂಜೂರು ಮಾಡಲೂ ಹಾಗೂ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಪರಿಶೀಲನೆ ಮಾಡಲು ರಾಯಚೂರು ಜಿಲ್ಲೆಗೆ 1,01,250 ಪ್ರಕರಣಗಳ ಸಂಶಯಾಸ್ಪದವಾಗಿ ಪಡೆಯುತ್ತಿರುವ ಫಲಾನುಭವಿಗಳ ಸಂಯೋಜನೆ ಆಪ್ ಮೂಲಕ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲಾ ತಹಶೀಲ್ದಾರರ ಮೇಲ್ವಿಚಾರಣೆಯಲ್ಲಿ ಪರಿಶೀಲನೆ ಕಾರ್ಯ ನಡೆದಿದ್ದು, ಪರಿಶೀಲನೆ ಕಾರ್ಯವು ಮುಕ್ತಾಯದ ಹಂತದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ತಿಳಿಸಿದ್ದಾರೆ.

ಜಿಲ್ಲೆಯ ಅರಕೇರಾ ತಾಲೂಕಿನಲ್ಲಿ 11,349 ಅರ್ಜಿಗಳ ಪೈಕಿ 10,591 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 758 ಅರ್ಜಿಗಳು ಬಾಕಿ ಉಳಿದಿದ್ದು, ಶೇ.93.32ರಷ್ಟು ಪ್ರಗತಿ ಸಾಧಿಸಲಾಗಿದೆ.

ದೇವದುರ್ಗ ತಾಲೂಕಿನಲ್ಲಿ 13,171 ಅರ್ಜಿಗಳ ಪೈಕಿ 12,177 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 993 ಅರ್ಜಿಗಳು ಬಾಕಿ ಉಳಿದಿದ್ದು, ಶೇ.92.46ರಷ್ಟು ಪ್ರಗತಿ ಸಾಧಿಸಲಾಗಿದೆ.

ಲಿಂಗಸುಗೂರು ತಾಲೂಕಿನಲ್ಲಿ 11,938 ಅರ್ಜಿಗಳ ಪೈಕಿ 11,483 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 455 ಅರ್ಜಿಗಳು ಬಾಕಿ ಉಳಿದಿದ್ದು, ಶೇ.96.19ರಷ್ಟು ಪ್ರಗತಿ ಸಾಧಿಸಲಾಗಿದೆ.

ಮಾನ್ವಿ ತಾಲೂಕಿನಲ್ಲಿ 15,186 ಅರ್ಜಿಗಳ ಪೈಕಿ 15,186 ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಯಾವುದೇ ಅರ್ಜಿಗಳು ಬಾಕಿ ಉಳಿದಿಲ್ಲ. ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ.

ಮಸ್ಕಿ ತಾಲೂಕಿನಲ್ಲಿ 7763 ಅರ್ಜಿಗಳ ಪೈಕಿ 7412 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 351ಅರ್ಜಿಗಳು ಬಾಕಿ ಉಳಿದಿದ್ದು, ಶೇ.95.48ರಷ್ಟು ಪ್ರಗತಿ ಸಾಧಿಸಲಾಗಿದೆ.

ರಾಯಚೂರು ತಾಲೂಕಿನಲ್ಲಿ 21,341 ಅರ್ಜಿಗಳ ಪೈಕಿ 20,995 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 346 ಅರ್ಜಿಗಳು ಬಾಕಿ ಉಳಿದಿದ್ದು, ಶೇ.98.38ರಷ್ಟು ಪ್ರಗತಿ ಸಾಧಿಸಲಾಗಿದೆ.

ಸಿಂಧನೂರು ತಾಲೂಕಿನಲ್ಲಿ 11,328 ಅರ್ಜಿಗಳ ಪೈಕಿ 11,325 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 3 ಅರ್ಜಿಗಳು ಬಾಕಿ ಉಳಿದಿದ್ದು, ಶೇ.99.97 ರಷ್ಟು ಪ್ರಗತಿ ಸಾಧಿಸಲಾಗಿದೆ.

ಸಿರವಾರ ತಾಲೂಕಿನಲ್ಲಿ 9,175 ಅರ್ಜಿಗಳ ಪೈಕಿ 9,175 ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಯಾವುದೇ ಅರ್ಜಿಗಳು ಬಾಕಿ ಉಳಿದಿಲ್ಲ. ಶೇ.100ರಷ್ಟು ಪ್ರಗತಿ ಸಾಧಿಸಲಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1,01,251 ಅರ್ಜಿಗಳ ಪೈಕಿ 98,344 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 2,906 ಅರ್ಜಿಗಳು ಬಾಕಿ ಉಳಿದಿದ್ದು, ಶೇ.96.98 ರಷ್ಟು ಪ್ರಗತಿ ಸಾಧಿಸಲಾಗಿದೆ.

ಈ ಪ್ರಗತಿ ಸಂಬಧಿಸಿದ ತಹಶೀಲ್ದಾರರ ಮೇಲ್ವಿಚಾರಣೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮನೆ ಮನೆಗೆ ಭೇಟಿ ನಿಡಿ ಸಂಯೋಜನೆ ಮೊಬೈಲ್ ಆಪ್ ಮೂಲಕ 98,345 ಪರಿಶೀಲನೆ ಮಾಡಿದಾಗ 7,602 ಅರ್ಜಿ ಮುಂದುವದಿವೆ. 90,743 ಅರ್ಜಿ ಸ್ಥಗಿತಗೊಂಡಿದ್ದು, 2,906 ಅರ್ಜಿ ಬಾಕಿವೆ. ಮೊಬೈಲ್ ಆಪ್ ಮೂಲಕ ಪರಿಶೀಲನೆ ಕಾರ್ಯದಲ್ಲಿ ಕ್ಷೇತ್ರ ಕಾರ್ಯಕ್ಕೆ ಬಂದಾಗ ಮೇಲಿನ ಪ್ರಗತಿ ವರದಿಯಲ್ಲಿರುವಂತೆ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ, ವಿಳಾಸದಲ್ಲಿ ವಾಸ ವಿರುವುದಿಲ್ಲ. ಅಥವಾ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ. ಹಾಗೂ ಪಿಂಚಣಿಗೆ ಸಂಬAಧಿಸಿದ ಅಗತ್ಯ ದಾಖಲೆಗಳು ಸಲ್ಲಿಸದೆ ಇರುವ ಕಾರಣಗಳಿಂದ ಸ್ಥಗಿತಗೊಳಿಸಲಾಗಿದೆ. ಸ್ಥಗಿತ ಎಂದು ಬಂದ ಫಲಾನುಭವಿಗಳ ಪಿಂಚಣಿಯ ಸ್ಥಿತಿಯಲ್ಲಿ ರನ್ನಿಂಗ್ ಎಂದು ಇರುತ್ತದೆ. ಕೊನೆಯ ಸಾಲಿನಲ್ಲಿ ಡೊಬ್ಲಿಕೇಟ್ ನಲ್ಲಿ ಎಸ್ ಎಂದು ತೋರಿಸುತ್ತದೆ. ಇಂತಹ ಫಲಾನುಭವಿಗಳಿಗೆ, ಆಯುಕ್ತರು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಸಾಮಾಜಿಕ ರವರ ಭದ್ರತೆ ಮತ್ತು  ಕಂದಾಯ ಪಿಂಚಣಿಗಳು ಇಲಾಖೆ ಬೆಂಗಳೂರು ಇವರ ವತಿಯಿಂದ ತಹಶೀಲ್ದಾರರಿಂದ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ನೀಡಿ 30 ದಿನಗಳ ಒಳಗಾಗಿ ಅಗತ್ಯ ದಾಖಲಾತಿಗಳು ಸಲ್ಲಿಸಲೂ ಕಾಲಾವಕಾಶ ನೀಡಿರುತ್ತಾರೆ. 30 ದಿನಗಳ ಒಳಗಾಗಿ ಅಗತ್ಯ ದಾಖಲಾತಿಗಳನ್ನು ಸಂಬಧಿಸಿದ ತಹಶೀಲ್ದಾರರಿಗೆ ಸಲ್ಲಿಸಿದ ಫಲಾನುಭವಿಗಳ ಪಿಂಚಣಿಗಳ ಬಗ್ಗೆ, ನಿಯಮಾನುಸಾರ ಕ್ರಮ ಕೈಗೊಳ್ಳಲೂ ಈಗಾಗಲೇ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದ್ದು, ರಾಯಚೂರು ಜಿಲ್ಲೆಯ ಸ್ಥಗಿತ ಹೊಂದಿದ ಎಲ್ಲಾ ಪಿಂಚಣಿದಾರರು ಈ ಅವಕಾಶವನ್ನು ಸದುಪಯೊಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...