ಗಂಗಾವತಿ ವಕೀಲರ ಸಂಘದ ವತಿಯಿಂದ
ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಜೂನ್-19 ಶುಕ್ರವಾರ ವಕೀಲರ ಸಂಘದ ಹಿರಿಯ ವಕೀಲರು, ರಾಜಕೀಯ ಮುಖಂಡರು ಹಾಗೂ ವೀರ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ. ಸೋಮನಾಥ .ಎಸ್. ಪಟ್ಟಣಶೆಟ್ಟಿ ರವರ 70ನೇ ವರ್ಷದ ಹುಟ್ಟುಹಬ್ಬವನ್ನು ಎಸ್.ಎಸ್. ಪಟ್ಟಣಶೆಟ್ಟಿ ಅಭಿಮಾನಿ ವಕೀಲರ ಬಳಗ” ವತಿಯಿಂದ ನಗರದ ನ್ಯಾಯಾಲಯ ಆವರಣದಲ್ಲಿರುವ ನಾಗದೇವತೆಯ ನಾಗರಕಟ್ಟೆ ಹತ್ತಿರ ಆಚರಿಸಲಾಯಿತು.
ಸೋಮನಾಥ ಪಟ್ಟಣಶೆಟ್ಟಿಯವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸಾಕಷ್ಟು ಸೇವೆಗಳನ್ನು ಸಲ್ಲಿಸುತ್ತಾ ಬಂದಿದ್ದು, ಯುವ ವಕೀಲರಿಗೆ ಮಾದರಿಯಾಗಿರುತ್ತಾರೆ. ಇಂತಹ ಹಿರಿಯ ವಕೀಲರ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿರುವುದಕ್ಕೆ ವಕೀಲರ ಬಳಗ ತುಂಬಾ ಹರ್ಷ ವ್ಯಕ್ತಪಡಿಸಿತು.
ಸದರಿಯವರ ಹುಟ್ಟುಹಬ್ಬದ ಪ್ರಯುಕ್ತ ಎಲ್ಲಾ ವಕೀಲರಿಗೆ ಬಳಗದಿಂದ ಮತ್ತು ಸಿಬ್ಬಂದಿಯವರಿಗೆ ಪ್ರೀತಿಯ ಭೋಜನ ಕೂಟ ಹಮ್ಮಿಕೊಳ್ಳಲಾಗಿತ್ತು.