ಮರ್ಚೆಡ್ ಡೇಸ್ ಸುದ್ದಿ.
ಬೆಂಗಳೂರು: ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ಹಿರಿಯ ಹೋರಾಟಗಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆತ್ಮೀಯ ಗೆಳೆಯ ವಾಟಾಳ್ ನಾಗರಾಜ್. ಅವರನ್ನು ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ಭೇಟಿಯಾದರು.
ಈ ಭೇಟಿಯ ವೇಳೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವಾಟಾಳ್ ನಾಗರಾಜ್ ಅವರ ಆಶೀರ್ವಾದವನ್ನು ಪಡೆದುಕೊಂಡರು. ನಂತರ ಇಬ್ಬರೂ ನಾಯಕರು ಕೆಲಹೊತ್ತು ಕುಶಲೋಪರಿ ಮತ್ತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ನಾಡಿನ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸಿ,
ಅವರಿಂದ ಮಾರ್ಗದರ್ಶನವನ್ನು ಸಹ ಪಡೆದರು ಎಂದು
ತಿಳಿದು ಬಂದಿದೆ.